ಫೇಸ್​ಬುಕ್ ಬಳಕೆದಾರರಿಗೆ ಬಿಗ್ ಶಾಕ್: 120 ಮಿಲಿಯನ್ ಖಾತೆಗಳು ಹ್ಯಾಕ್

zahir | news18
Updated:November 4, 2018, 3:54 PM IST
ಫೇಸ್​ಬುಕ್ ಬಳಕೆದಾರರಿಗೆ ಬಿಗ್ ಶಾಕ್: 120 ಮಿಲಿಯನ್ ಖಾತೆಗಳು ಹ್ಯಾಕ್
ಸಾಂದರ್ಭಿಕ ಚಿತ್ರ
  • News18
  • Last Updated: November 4, 2018, 3:54 PM IST
  • Share this:
-ನ್ಯೂಸ್ 18 ಕನ್ನಡ

ಸಾಮಾಜಿಕ ಜಾಲತಾಣದ ದೈತ್ಯ ಕಂಪನಿ ಫೇಸ್​ಬುಕ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಫೇಸ್​ಬುಕ್​ ಬಳಕೆದಾರರ 120 ಮಿಲಿಯನ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ  ಆಘಾತಕಾರಿಯನ್ನು ಸುದ್ದಿಯನ್ನು ಬಿಬಿಸಿ ಪ್ರಕಟಿಸಿದೆ. ಅಲ್ಲದೆ ​ಈ ಖಾತೆಗಳ ಖಾಸಗಿ ಸಂದೇಶಗಳನ್ನು ಮಾರಾಟ ಮಾಡುವುದಾಗಿ ಹ್ಯಾಕರ್​ಗಳು ಜಾಹೀರಾತು ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತೀಚೆಗಷ್ಟೇ 5 ಕೋಟಿ ಫೇಸ್​ಬುಕ್ ಖಾತೆದಾರರ ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಫೇಸ್​ಬುಕ್​ ಕ್ರಮ ಕೈಗೊಂಡಿತ್ತು. ಇದೀಗ ಉಕ್ರೇನ್, ರಷ್ಯಾ, ಅಮೆರಿಕ, ಸೇರಿದಂತೆ ಪ್ರಮುಖ ದೇಶಗಳ  ಬಳಕೆದಾರರ  ಮೆಸೇಜ್​ಗಳನ್ನು ಹ್ಯಾಕ್ ಮಾಡಲಾಗಿದೆ. ಈ ವೈಯುಕ್ತಿಕ ಸಂದೇಶಗಳನ್ನು ವೆಬ್​ಸೈಟ್​ವೊಂದರಲ್ಲಿ ಪ್ರಕಟಿಸಿದೆ. ಇದರಲ್ಲಿ 81 ಸಾವಿರ ಬಳಕೆದಾರರ ಮಾಹಿತಿಯಿದ್ದು, ಪ್ರತಿಯೊಂದು ಖಾತೆಯ ಸಂದೇಶಗಳನ್ನು ಮಾರಾಟ ಮಾಡುವುದಾಗಿ ಹ್ಯಾಕರ್​ಗಳು ಹೇಳಿಕೊಂಡಿದ್ದಾರೆ.

ಈ ಹ್ಯಾಕಿಂಗ್ ಕುರಿತು ಈಗಾಗಲೇ  ರಷ್ಯಾದ ಫೇಸ್​ಬುಕ್ ಬಳಕೆದಾರರು ಪ್ರತಿಕ್ರಿಯಿಸಿದ್ದು,  ತಮ್ಮ ಖಾತೆಯ ಸಂದೇಶಗಳು ಬಹಿರಂಗವಾಗಿರುವುದನ್ನು ದೃಢಪಡಿಸಿದ್ದಾರೆ. ಹಾಗೆಯೇ  ಹ್ಯಾಕರ್​​ಗಳ ಬಳಿ ಮತ್ತಷ್ಟು ದೇಶಗಳ ಬಳಕೆದಾರರ ಮಾಹಿತಿಗಳು ಇರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಫೇಸ್​ಬುಕ್ ಉಪಾಧ್ಯಕ್ಷ ಗೈ ರೋಸ್, ಬ್ರೌಸರ್ ಸಿದ್ಧಪಡಿಸಿರುವ ಸಂಸ್ಥೆಯೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ ಬಳಕೆದಾರರ ಮಾಹಿತಿಯನ್ನು ಹಾಕಿದ ವೆಬ್​ಸೈಟ್ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ನೀಡುವ ಟಾಪ್-8 ದೇಶಗಳು

ಇತ್ತೀಚೆಗಷ್ಟೇ ಫೇಸ್​ಬುಕ್ ತನ್ನ 30 ಮಿಲಿಯನ್​ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಸ್ಪಷ್ಟಪಡಿಸಿತ್ತು. ಇದರಲ್ಲಿ 15 ಮಿಲಿಯನ್ ಖಾತೆದಾರರ ಪ್ರೊಫೈಲ್​ನಲ್ಲಿದ್ದ ಮೊಬೈಲ್ ನಂಬರ್, ಇಮೇಲ್ ಮತ್ತು ಹೆಸರುಗಳು ಸೇರಿದಂತೆ ಕೆಲವೊಂದು ವೈಯುಕ್ತಿಕ ಮಾಹಿತಿಗಳನ್ನು ಮಾತ್ರ ಹ್ಯಾಕರ್​​ಗಳು ಕದ್ದಿದ್ದಾರೆ ಎಂದು ಫೇಸ್​ಬುಕ್ ಸಂಸ್ಥೆ ತಿಳಿಸಿದ್ದರು. ಈಗ ಮತ್ತೊಮ್ಮೆ ಫೇಸ್​ಬುಕ್ ಮೆಸೇಜ್​ಗಳು ಹ್ಯಾಕ್​ ಆಗಿರುವುದರಿಂದ ಸಾಮಾಜಿಕ ಜಾಲತಾಣ ಎಷ್ಟು ಸುರಕ್ಷಿತ ಎಂಬ ಚರ್ಚೆ ಹುಟ್ಟಿಕೊಂಡಿದೆ.

First published:November 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading