ನವ ದೆಹಲಿ (ನವೆಂಬರ್ 01); ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ದೇಶಕ್ಕೆ ಕೊರೋನಾ ಸೋಂಕು ವಕ್ಕರಿಸುವವರೆಗೆ ದೆಹಲಿಯ ಶಾಹೀನ್ ಬಾಗ್ನಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟ ಇಡೀ ದೇಶದ ಮತ್ತು ಇಡೀ ವಿಶ್ವದ ಗಮನ ಸೆಳೆದಿತ್ತು. ಈ ಹೋರಾಟದಲ್ಲಿ ಭಾಗಿಯಾಗಿದ್ದ 82 ವರ್ಷದ ಅಜ್ಜಿ ಬಿಲ್ಕೀಸ್ ಸಹ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚೆಗೆ ಟೈಮ್ ನಿಯತಕಾಲಿಕೆ ಬಿಡುಗಡೆ ಮಾಡಿದ್ದ 2020ರ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲೂ ಈ ಅಜ್ಜಿ ಸ್ಥಾನ ಪಡೆದಿದ್ದರು. ಆದರೆ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಅಜ್ಜಿ ಬಿಲ್ಕೀಸ್ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು ಎಂಬ ಒಂದೇ ಕಾರಣಕ್ಕೆ ದೆಹಲಿ ಪೊಲೀಸರು ಇದೀಗ ಅವರನ್ನು ಬಂಧಿಸಿದ್ದಾರೆ.
Delhi: Police detain Shaheen Bagh activist Bilkis Dadi who reached Singhu border (Delhi-Haryana border) to join farmers' protest. https://t.co/UTnTit1oso pic.twitter.com/34lCCtXy5u
— ANI (@ANI) December 1, 2020
ಇದನ್ನೂ ಓದಿ : ಶಾಂತಿಯುತ ಪ್ರತಿಭಟನೆ ರೈತರ ಹಕ್ಕು ಅದನ್ನು ಗೌರವಿಸಬೇಕು, ಅವಕಾಶ ನೀಡಬೇಕು; ಕೆನಡಾ ಪ್ರಧಾನಿ ಟ್ರೂಡೊ
ಇದೇ ಸಂದರ್ಭದಲ್ಲಿ 82 ವರ್ಷದ ಬಿಲ್ಕೀಸ್ ದಾದಿ, ಪ್ರತಿಭಟನಾಕಾರರೊಂದಿಗೆ ಸೇರಲು ಸಿಂಧೂ ಗಡಿ(ದೆಹಲಿ-ಹರಿಯಾಣ ಗಡಿ)ಯಲ್ಲಿ ರೈತರಿಗೆ ತನ್ನ ಬೆಂಬಲ ಸೂಚಿಸಲು ಇಂದು ಆಗಮಿಸಿದ್ದರು. ರೈತ ಹೋರಾಟದಲ್ಲಿ ಸಕ್ರೀಯವಾಗಬೇಕು ಎಂಬುದು ಅವರ ಇಚ್ಚೆಯಾಗಿತ್ತು. ಆದರೆ, ಇದಕ್ಕೆ ಅವಕಾಶ ನೀಡದ ಪೊಲೀಸರು ಅವರನ್ನು ಬಂಧಿಸಿ ಸ್ಥಳದಿಂದ ಕರೆದೊಯ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ