HOME » NEWS » Uncategorized » PEAK FESTIVE SEASON THREATENS TO TAKE INDIAS CORONAVIRUS LOAD PAST US TO WORLD HIGH IN A FORTNIGHT MAK

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕವನ್ನೂ ಮೀರಿಸಲಿದೆ ಭಾರತ; ದೇಶಕ್ಕೆ ಹಬ್ಬಗಳ ಆತಂಕ

ಕೊರೋನಾ ಹೊಡೆತದಿಂದಾಗಿ ಆರ್ಥಿಕವಾಗಿಯೂ ಕಂಗೆಟ್ಟಿರುವ ರಾಜ್ಯಗಳು ಜನ ಮುಕ್ತವಾಗಿ ಮನೆಯಿಂದ ಹೊರಬಂದು ಖರ್ಚು ಮಾಡಲು ಅನುವು ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಸಹ ಇತ್ತೀಚೆಗೆ ಆರ್ಥಿಕತೆಗೆ ಚುರುಕು ಮುಟ್ಟಿಸುವ ಸಲುವಾಗಿ ಜನರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಳಕ್ಕೆ ವಿವಿಧ ಯೋಜನೆ ರೂಪಿಸಿತ್ತು.

news18-kannada
Updated:October 16, 2020, 12:54 PM IST
ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕವನ್ನೂ ಮೀರಿಸಲಿದೆ ಭಾರತ; ದೇಶಕ್ಕೆ ಹಬ್ಬಗಳ ಆತಂಕ
ಪಶ್ಚಿಮ ಬಂಗಾಳದಲ್ಲಿ ದುರ್ಗಾ ಮೂರ್ತಿಗೆ ಸ್ಯಾನಿಟೈಜ್ ಮಾಡುತ್ತಿರುವುದು.
  • Share this:
ಕಳೆದ ವರ್ಷಾಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ ಈ ವರ್ಷ ಮುಗಿಯುತ್ತಿದ್ದರೂ ಕೊನೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ವೈರಸ್​ಗೆ ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಜನ ಬಲಿಯಾಗಿದ್ದಾರೆ. ಭಾರತದಲ್ಲೂ ಸಹ ಈ ವೈರಸ್​ ಉಂಟು ಮಾಡಿರುವ ಹಾನಿ ಅಪಾರ. ಈ ನಡುವೆ ಅಮೆರಿಕ ವಿಶ್ವದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ. ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಅಮೆರಿಕದ ನಂತರದ ಸ್ಥಾನದಲ್ಲೇ ಇದೆ. ಆದರೆ, ಇದೀಗ ಭಾರತದಲ್ಲಿ ಸಾಲು ಸಾಲಾಗಿ ಹಬ್ಬದ ದಿನಗಳ ಬರಲಿದ್ದು, ಇದೇ ಸಂದರ್ಭದಲ್ಲಿ ಲಾಕ್​ಡೌನ್ ನಿರ್ಬಂಧಗಳೂ ಸಹ ಸಡಿಲವಾಗಿದೆ. ಹೀಗಾಗಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಶೀಘ್ರದಲ್ಲೇ ಅಮೆರಿಕವನ್ನು ಮೀರಿಸಲಿದೆ  ಎಂದು ಹೇಳಲಾಗುತ್ತಿದೆ.

ಆರಂಭದ ದಿನಗಳಲ್ಲಿ ದೇಶದಲ್ಲಿ ಎಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿದ್ದ ಬಗೆಗೆ ವಿಶ್ವದಾದ್ಯಂತ ವ್ಯಾಪಕವಾಗಿ ಪ್ರಶಂಶಿಸಲ್ಪಟ್ಟಿತ್ತು. ಆದರೆ, ಇತ್ತೀಚೆಗೆ ಕೇರಳದಲ್ಲೂ ಸಹ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎನ್ನಲಾಗುತ್ತಿದೆ. ಅಗಸ್ಟ್​ ತಿಂಗಳ ಅಂತ್ಯದಲ್ಲಿ ಕೇರಳದಲ್ಲಿ 10 ದಿನಗಳ ಕಾಲ ಓಣಂ ಸುಗ್ಗಿಯ ಉತ್ಸವವನ್ನು ಆಚರಿಸಲಾಗಿತ್ತು. ಈ ವೇಳೆ ಸಾಮಾನ್ಯ ದಿನಗಳಿಗಿಂತ ಐದು ಪಟ್ಟು ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ಕೇರಳದಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ.

ಇನ್ನೂ ಕೊರೋನಾ ಹೊಡೆತದಿಂದಾಗಿ ಆರ್ಥಿಕವಾಗಿಯೂ ಕಂಗೆಟ್ಟಿರುವ ರಾಜ್ಯಗಳು ಜನ ಮುಕ್ತವಾಗಿ ಮನೆಯಿಂದ ಹೊರಬಂದು ಖರ್ಚು ಮಾಡಲು ಅನುವು ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಸಹ ಇತ್ತೀಚೆಗೆ ಆರ್ಥಿಕತೆಗೆ ಚುರುಕು ಮುಟ್ಟಿಸುವ ಸಲುವಾಗಿ ಜನರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಳಕ್ಕೆ ವಿವಿಧ ಯೋಜನೆ ರೂಪಿಸಿತ್ತು. ಈ ನಡುವೆ ನವೆಂಬರ್​ ತಿಂಗಳಲ್ಲಿ ದೇಶದಾದ್ಯಂತ ದೀಪಾವಳಿ ಮತ್ತು ದುರ್ಗಾಪೂಜೆಗಳು ನಡೆಯಲಿದ್ದು, ಜನರನ್ನು ತಡೆಯಲು ಸ್ವತಃ ರಾಜ್ಯ ಸರ್ಕಾರಗಳೇ ಹಿಂಜರಿಯುತ್ತಿವೆ ಎನ್ನಲಾಗುತ್ತಿದೆ.

ಹಬ್ಬದ ಈ ರಜಾ ದಿನಗಳಲ್ಲಿ ಹಲವು ಕಡೆಗಳಲ್ಲಿ ಎಲ್ಲಾ ಕುಟುಂಗಳು ಒಟ್ಟಾಗಿ ಕೂಟಗಳನ್ನು ಆಯೋಜಿಸುತ್ತವೆ. ಕೆಲವು ಕಂಪೆನಿಗಳು ಬಂಪರ್ ಖರೀದಿ ಮತ್ತು ಉಡುಗೊರೆಗಳನ್ನು ಘೋಷಿಸುತ್ತವೆ. ಹಬ್ಬದ ಸಿಹಿ ತಿಂಡಿಗಳಿಂದ ಹಿಡಿದು ಬಟ್ಟೆ ಮತ್ತು ಕಾರುಗಳವರೆಗೆ ಎಲ್ಲವನ್ನೂ ಕೊಳ್ಳಲು ಜನ ಮುಗಿ ಬೀಳುತ್ತಾರೆ. ಇದು ಅನೇಕ ಜನರಿಗೆ ಪ್ರಮುಖ ಆದಾಯದ ಮೂಲವೂ ಅಗಿದೆ.

"ಪೂಜೆಗಳ ಸಮಯದಲ್ಲಿ ನಗರಗಳಿಗೆ ಸೇರುವ ಮತ್ತು ಹಬ್ಬದ ಸಮಯದಲ್ಲಿ ಸ್ವಲ್ಪ ಹಣವನ್ನು ಸಂಪಾದಿಸುವ ಗ್ರಾಮೀಣ ಭಾಗದ ವಲಸೆ ಜನಸಂಖ್ಯೆಯು ಅವಕಾಶವನ್ನು ಕಳೆದುಕೊಂಡರೆ ನಾವು ಬಹುಶಃ ಹಸಿವಿನಿಂದ ಹೆಚ್ಚಿನ ಸಾವುಗಳನ್ನು ಅನುಭವಿಸುತ್ತೇವೆ" ಎಂದು ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಬಂಗಾಳ ರಾಜ್ಯದ ಕ್ಯಾಬಿನೆಟ್ ಮಂತ್ರಿ ಸುಬ್ರತಾ ಮುಖರ್ಜಿ ಹೇಳಿಕೆ ಇತ್ತೀಚೆಗೆ ಇಡೀ ದೇಶದ ಗಮನ ಸೆಳೆದಿತ್ತು.

"ಭತ್ತದ ಬಿತ್ತನೆ ಮತ್ತು ಕಸಿ ಕಾರ್ಯಗಳು ಮುಗಿದ ನಂತರ, ದೊಡ್ಡ ಪ್ರಮಾಣದ ಗ್ರಾಮೀಣ ಜನಸಂಖ್ಯೆಯು ಈಗ ಯಾವುದೇ ಆರ್ಥಿಕ ಚಟುವಟಿಕೆಯಿಂದ ಹೊರಗುಳಿದಿದೆ. ಅದೇ ರೀತಿ, ಸಾವಿರಾರು ಸಣ್ಣ ವ್ಯಾಪಾರಿಗಳು ಸಹ ಹಬ್ಬದ ಕಾರಣಕ್ಕೆ ಕೆಲವು ಗಳಿಕೆಗಳನ್ನು ಎದುರು ನೋಡುತ್ತಿದ್ದಾರೆ" ಎಂದು ಹೇಳಲಾಗುತ್ತಿದೆ.

ಪಶ್ವಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಆಡಳಿತರೂಢ ತೃಣಮೂಲ ಕಾಂಗ್ರೆಸ್​ ಕಠಿಣ ಸವಾಲನ್ನು ಎದುರಿಸುತ್ತಿದೆ. ಹೀಗಾಗಿ ಬಂಗಾಳ ಸರ್ಕಾರ ಈ ವರ್ಷ ಶೇ.42ರಷ್ಟು ಹೆಚ್ಚಿನ ಸಮುದಾಯ ದುರ್ಗಾ ಪೂಜಾ ಕೂಟಗಳಿಗೆ ಅವಕಾಶ ನೀಡಿದೆ ಮತ್ತು ಇದರಿಂದ ರಾಜ್ಯದ ಹಣಕಾಸು ಸಾಮರ್ಥ್ಯವೂ ದ್ವಿಗುಣಗೊಂಡಿದೆ.ಆದರೆ, ಕೆಲವು ವೈದ್ಯರು ಮಾತ್ರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಭಯದಿಂದ ರಾಜಕಾರಣಿಗಳು ಸಾರ್ವಜನಿಕ ಆರೋಗ್ಯವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಸಾಮಾಜಿಕ ಅಂತರ ಮತ್ತು ಇತರ ನಿಯಮಗಳನ್ನು ಪಾಲಿಸದಿದ್ದರೆ ದೇಶದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಈಗಾಗಲೇ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳ ಎದುರೇ ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದ ಬಿಜೆಪಿ ಶಾಸಕನ ಆಪ್ತ!

"ನಿಮ್ಮ ನಂಬಿಕೆ ಅಥವಾ ನಿಮ್ಮ ಧರ್ಮವನ್ನು ಸಾಬೀತುಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಸೇರುವ ಅಗತ್ಯವಿಲ್ಲ. ನಾವು ಇದನ್ನು ಮಾಡಿದರೆ ದೊಡ್ಡದೊಂದು ತೊಂದರೆಗೆ ಒಳಗಾಗಬಹುದು" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಕಳೆದ ವಾರ ಎಚ್ಚರಿಕೆ ನೀಡಿದ್ದರು.

ಇತ್ತೀಚಿನ ವಾರಗಳಲ್ಲಿ ಕೊರೋನಾ ಹೆಚ್ಚಳದ ಪ್ರಮಾಣವು ನಿಧಾನವಾಗಿದ್ದರೂ ಸಹ ಭಾರತವು 7.3 ದಶಲಕ್ಷಕ್ಕೂ ಹೆಚ್ಚು ಕೊರೋನಾ ವೈರಸ್ ಸೋಂಕುಗಳ ಪ್ರಕರಣವನ್ನು ಹೊಂದಿದೆ ಮತ್ತು 1,12,000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಈ ನಡುವೆ ಚಳಿಗಾಲದ ಕೆಟ್ಟ ವಾಯುಮಾಲಿನ್ಯವು ಅನೇಕ ಕೋವಿಡ್ -19 ರೋಗಿಗಳು ಅನುಭವಿಸುವ ಉಸಿರಾಟದ ತೊಂದರೆಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
Published by: MAshok Kumar
First published: October 16, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories