ಬೆಂಗಳೂರು: ಸೌತ್ ಆಫ್ರಿಕಾ (South Africa), ಹಾಂಕಾಂಗ್ ದೇಶದಲ್ಲಿ ವೈರಸ್ (New Variant Omicron Virus) ಪತ್ತೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಅಂತರ್ ರಾಜ್ಯ ಮತ್ತು ವಿದೇಶಿ ಪ್ರಯಾಣಿಕರ ಮೇಲೆ ಗಮನ ಇರಿಸುವಂತೆ ಸೂಚನೆ ನೀಡಿದೆ. ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ. ಇದೇ ವಿಷಯವಾಗಿ ನಿನ್ನೆ ಆರೋಗ್ಯ ಇಲಾಖೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಕೂಡ, ಅವರಿಗೆ ಆರ್ ಟಿಪಿಸಿಆರ್ (RT-PCR) ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ ಇತ್ತ ಕೊರೊನಾ ರೂಪಾಂತರ ಓಮಿಕ್ರೊನ್ ಆತಂಕ ಹಿನ್ನೆಲೆ ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ರೂಪಾಂತರಿ ವೈರಸ್ ಹೆಚ್ಚು ವೇಗವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organisation) ಎಚ್ಚರಿಕೆ ನೀಡಿದ ಬೆನ್ನಲ್ಲೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಈ ಮೊದಲು ಜಾರಿಗೆ ತಂದಿದ್ದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯನ್ನು ಇದೀಗ ಮತ್ತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ACB Raid: ಆದಾಯಕ್ಕಿಂತ 1,408% ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್: 28 ಮನೆ, ಬೆಂಗಳೂರಲ್ಲಿ ಎಲ್ಲಿ ನೋಡಿದ್ರೂ ಸೈಟ್, 5 ಕಾರ್
ಮಾರ್ಗಸೂಚಿಯಲ್ಲಿ ಏನಿದೆ?
1 ಕೇರಳ, ಮಹಾರಾಷ್ಟ್ರ ದಿಂದ ಬರುವ ವಿದ್ಯಾರ್ಥಿಗಳಿಗೆ 72 ಗಂಟೆ ಮುಂಚೆ RTPCR ಟೆಸ್ಟ್ ವರದಿ ಕಡ್ಡಾಯ
2.ಕಳೆದ 15 ದಿನಗಳಿಂದ ಕೇರಳ, ಮಹಾರಾಷ್ಟ್ರ ದಿಂದ ಬಂದ ವಿದ್ಯಾರ್ಥಿಗಳು RTPCR ಟೆಸ್ಟ್ ಮಾಡಿಸುವುದು ಕಡ್ಡಾಯ
3.ಎರಡು ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು 7ನೇ ದಿನ RTPCR ಟೆಸ್ಟ್ ಮಾಡಿಸಬೇಕು
4.ನೆಗೆಟಿವ್ ಬಂದ ವಿದ್ಯಾರ್ಥಿಗಳು ಕ್ವಾರಂಟೈನ್ ಇರಬೇಕು, 7ನೇ ದಿನ ಮತ್ತೆ RTPCR ಟೆಸ್ಟ್ ಮಾಡಿಸಬೇಕು
5.ಎರಡು ರಾಜ್ಯಗಳ ಗಡಿಗಳ ಅಂಟಿಕೊಂಡಿರುವ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್, ಸ್ಕ್ರೀನಿಂಗ್ ಸೂಚನೆ
6.ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದವರಲ್ಲಿ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. 60 ವರ್ಷ ಮೇಲ್ಪಟ್ಟ ಇಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಒಬ್ಬರು ನವೆಂಬರ್ 9ರಂದು ನಗರಕ್ಕೆ ಬಂದಿದ್ದರು. ಮತ್ತೊಬ್ಬರು ನವೆಂಬರ್ 20ಕ್ಕೆ ನಗರಕ್ಕೆ ಆಗಮಿಸಿದ್ದರು. ಆದರೆ ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್ ಚೊಚ್ಚಲವಾಗಿ ಪತ್ತೆಯಾಗಿದ್ದು ನವೆಂಬರ್ 23ಕ್ಕೆ. ಸೋಂಕು ದೃಢವಾಗುತ್ತಿದ್ದಂತೆ ಇಬ್ಬರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಮಾಡಿ ಇಬ್ಬರ ಸ್ಯಾಂಪಲ್ಸ್ ಅನ್ನೂ ಜಿನೋಮ್ ಸೀಕ್ವೆನ್ಸಿಂಗ್ ಕಳುಹಿಸಲಾಗಿದೆ. ಸದ್ಯ ಇವರು ತಂಗಿದ್ದ ಖಾಸಗಿ ಹೋಟೆಲ್ ನ ಎಲ್ಲಾ ಸಿಬ್ಬಂದಿಗಳನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: Coronavirus: ನ್ಯೂಯಾರ್ಕ್ನಲ್ಲಿ ಹೆಚ್ಚಾಯ್ತು ಹೊಸ ತಳಿ ಆತಂಕ : `ವಿಪತ್ತು ತುರ್ತುಸ್ಥಿತಿ’ ಘೋಷಿಸಿದ ಗರ್ವನರ್!
ವಿಪತ್ತು ತುರ್ತುಸ್ಥಿತಿ ಘೋಷಣೆ
ಮತ್ತೆ ಬಂದಿರುವ ಈ ಕೊರೋನಾ ಅಬ್ಬರ ಹೇಗಿದೆ ಅಂದರೆ ನೀವೂ ದಂಗಾಗೋದು ಗ್ಯಾರಂಟಿ. ಹೌದು, ನ್ಯೂಯಾರ್ಕ್ನಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ಸರ್ಕಾರ(Government) ಏನು ಮಾಡದ ಸ್ಥಿತಿ ಉಂಟಾಗಿದೆ. ಪ್ರತಿದಿನ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಹೊಸ ತಳಿಯ ಆತಂಕ ಹೆಚ್ಚಾಗಿದೆ. ಹೀಗಾಗಿ ನ್ಯೂಯಾರ್ಕ್ ಗರ್ವನರ್(Governor) ಕ್ಯಾಥಿ ಹೊಚುಲ್(Kathy Hochul) ‘ವಿಪತ್ತು ತುರ್ತುಸ್ಥಿತಿ’(Disaster emergency)ಯನ್ನು ಘೋಷಣೆ ಮಾಡಿದ್ದಾರೆ.
ಹೆಚ್ಚುತ್ತಿರುವ COVID-19 ಸೋಂಕುಗಳು ಮತ್ತು ಆಸ್ಪತ್ರೆಗೆ ದಾಖಲಾದ ದರಗಳ ಮಧ್ಯೆ, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ COVID-19 "ವಿಪತ್ತು ತುರ್ತು" ಘೋಷಣೆಯನ್ನು ಹೊರಡಿಸಿದ್ದಾರೆ. "COVID-19 ಹರಡುವುದನ್ನು ತಡೆಯಲು ನಾವು ಅಸಾಧಾರಣ ಕ್ರಮವನ್ನು ತೆಗೆದುಕೊಂಡಿದ್ದೇವೆ ನ್ಯೂಯಾರ್ಕ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ