• Home
 • »
 • News
 • »
 • uncategorized
 • »
 • ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡ ಶಾಸಕರು ಅಖಿಲೇಶ್ ಭೇಟಿ; ಸಮಾಜವಾದಿ ಪಕ್ಷದಕ್ಕೆ ಮಾಯಾವತಿ ಶಾಪ!

ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡ ಶಾಸಕರು ಅಖಿಲೇಶ್ ಭೇಟಿ; ಸಮಾಜವಾದಿ ಪಕ್ಷದಕ್ಕೆ ಮಾಯಾವತಿ ಶಾಪ!

ಬಿಎಸ್​ಪಿ ನಾಯಕಿ ಮಾಯಾವತಿ.

ಬಿಎಸ್​ಪಿ ನಾಯಕಿ ಮಾಯಾವತಿ.

ಒಂದು ಕಾಲದಲ್ಲಿ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಕಳೆದ ಲೋಕಸಭೆ ಚುನಾವಣೆಯನ್ನು ಎರಡು ಪಕ್ಷಗಳು ಒಟ್ಟಾಗಿ ಎದುರಿಸಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಎಸ್‌ಪಿ ಮತ್ತು ಎಸ್‌ಪಿ ನಡುವಿನ ಅಂತರ ಹೆಚ್ಚಿದೆ.

 • Share this:

  ಲಖನೌ (ಜೂನ್ 16); ಉತ್ತರಪ್ರದೇಶ ವಿಧಾನಸಭೆಗೆ 2022ರಲ್ಲಿ ಚುನಾವಣೆ ನಡೆಯಲಿದ್ದು, ದೇಶದ ಅತ್ಯಂತ ದೊಡ್ಡ ರಾಜ್ಯವನ್ನು ಗೆಲ್ಲಲು ಎಲ್ಲಾ ಪಕ್ಷಗಳು ಶತ ಪ್ರಯತ್ನ ನಡೆಸುತ್ತಿವೆ. ಆದರೆ, ಈ ನಡುವೆ ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡ 9 ಶಾಸಕರು ನಿನ್ನೆ ಮಂಗಳವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಆದರೆ ಇವರು ತಮ್ಮ ಪಕ್ಷದ ಶಾಸಕರೇ ಅಲ್ಲ. ಬಿಎಸ್‌ಪಿಯಿಂದ ಈ 9 ಜನರನ್ನು ಬಹಳ ಹಿಂದೆಯೇ ಅಮಾನತು ಮಾಡಲಾಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ. ಬಿಎಸ್‌ಪಿಯ ನಾಯಕರು ಸಮಾಜವಾದಿ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಂತೆ ಮಾಯವತಿ ಸಮಾಜವಾದಿ ಪಕ್ಷದ ವಿರುದ್ಧ ಟೀಕಾ ಪ್ರಹಾರವನ್ನೇ ಆರಂಭಿಸಿದ್ದಾರೆ. ಅಲ್ಲದೆ, ಸಮಾಜವಾದಿ ಪಕ್ಷ ಒಡೆದು ಎರಡು ಹೋಳಾಗಲಿದೆ ಎಂದು ಶಾಪ ನೀಡಿದ್ದಾರೆ.


  ಒಂದು ಕಾಲದಲ್ಲಿ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಕಳೆದ ಲೋಕಸಭೆ ಚುನಾವಣೆಯನ್ನು ಎರಡು ಪಕ್ಷಗಳು ಒಟ್ಟಾಗಿ ಎದುರಿಸಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಎಸ್‌ಪಿ ಮತ್ತು ಎಸ್‌ಪಿ ನಡುವಿನ ಅಂತರ ಹೆಚ್ಚಿದೆ. ಎರಡು ಪಕ್ಷಗಳ ನಾಯಕರು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ.


  ಬಿಎಸ್‌ಪಿಯ ಶಾಸಕರು ಸಮಾಜವಾದಿ ಪಕ್ಷದ ದಾರಿ ಹಿಡಿದಿರುವುದು ಮಾಯವತಿಗೆ ನುಂಗಲಾರದ ತುತ್ತಾಗಿ ಮಾರ್ಪಟ್ಟಿದೆ. ವಿಧಾನ ಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಬಿಎಸ್‌ಪಿಯು ಸಮಾಜವಾದಿ ಪಕ್ಷವನ್ನು ತನ್ನ ಮುಖ್ಯ ಎದುರಾಳಿಯನ್ನಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಜೊತೆಗೆ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಿಕೊಳ್ಳಲು ಮಾಯವತಿ ಸಮಾಜವಾದಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.


  ಸಮಾಜವಾದಿ ಪಕ್ಷವು ಬಿಎಸ್‌ಪಿಯ ಕೆಲವು ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲೇ ಸಮಾಜವಾದಿ ಪಕ್ಷವನ್ನು ಸೇರಲಿದ್ದಾರೆ ಎಂದು ಮಾಧ್ಯಮಗಳ ಮೂಲಕ ಬಿಂಬಿಸುತ್ತಿದೆ. ಆದರೆ ಸಮಾಜವಾದಿ ಪಕ್ಷದ ಸಂಪರ್ಕದಲ್ಲಿರುವ ಶಾಸಕರು ಬಿಎಸ್‌ಪಿಯಿಂದ ಈಗಾಗಲೇ ಅಮಾನತುಗೊಂಡವರಾಗಿದ್ದಾರೆ.


  ಸಮಾಜವಾದಿ ಪಕ್ಷಕ್ಕೆ ಕನಿಷ್ಠ ಪ್ರಾಮಾಣಿಕತೆಯಿದ್ದರೆ ಸಂಪರ್ಕದಲ್ಲಿರುವ ಬಿಎಸ್‌ಪಿ ಶಾಸಕರ ಹೆಸರನ್ನು ಬಹಿರಂಗಗೊಳಿಸಲಿ. ಒಂದು ವೇಳೆ ಸಮಾಜವಾದಿ ಪಕ್ಷವು ಬಿಎಸ್‌ಪಿಯಿಂದ ಅಮಾನತುಗೊಂಡ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಸಮಾಜವಾದಿ ಪಕ್ಷ ಎರಡು ಹೋಳಾಗುತ್ತದೆ. ಸಮಾಜವಾದಿ ಪಕ್ಷ ದಲಿತ ವಿರೋಧಿ ಎಂಬುದು ಎಲ್ಲರಿಗೂ ತಿಳಿದಿದೆ.


  ಇದನ್ನೂ ಓದಿ: ಉತ್ತರಪ್ರದೇಶ ಮುಸ್ಲೀಂ ವೃದ್ಧನ ಹಲ್ಲೆ ಪ್ರಕರಣ; ಪೊಲೀಸರ ಪ್ರತಿಪಾದನೆ ಸುಳ್ಳು ಎಂದ ಕುಟುಂಬ


  ಹಾಗಾಗಿಯೆ ಹಿಂದೆ ರಾಜ್ಯ ಸಭೆ ಚುನಾವಣೆಯಲ್ಲಿ ಬಿಎಸ್‌ಪಿಯ ಕೆಲವು ಶಾಸಕರನ್ನು ಸೆಳೆದು ದಲಿತ ಅಭ್ಯರ್ಥಿಯನ್ನು ಸೋಲಿಸಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸರಣಿ ಟ್ವೀಟ್ ಮೂಲಕ ಸಮಾಜವಾದಿ ಪಕ್ಷದ ವಿರುದ್ಧ ಕೆಂಡ ಕಾರಿದ್ದಾರೆ.


  ಲಾಲ್‌ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್ಬಾರ್ ಹಿಂದೆ ಬಿಎಸ್‌ಪಿಯನ್ನು ತೊರೆದಿದ್ದರು. ಇವರಿಬ್ಬರು ಅತ್ಯಂತ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು. ಬಿಎಸ್‌ಪಿಯ ಸ್ಥಾಪಕ ಸದಸ್ಯರಾದ ಇವರಿಬ್ಬರು ಬಿಎಸ್‌ಪಿ ತೊರೆದಿರುವುದು ಮಾಯಾವತಿಯವರ ಬಿಎಸ್‌ಪಿಗೆ ಉತ್ತರ ಪ್ರದೇಶದಲ್ಲಿ ದೊಡ್ಡ ಹೊಡೆತವನ್ನು ನೀಡಿದೆ.


  ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಟ್ರಬಲ್ ಶೂಟ್ ಸಭೆ ಆರಂಭ; ತಡವಾಗಿ ಬಂದು ಅಸಮಾಧಾನದ ಸಂದೇಶ ನೀಡಿದರಾ ಯೋಗೀಶ್ವರ್..?


  ಇವರ ಬೆನ್ನಲ್ಲೇ ಕಳೆದ ವರ್ಷ ಅಸ್ಲಾಮ್ ಚೌಧರಿ, ಅಸ್ಲಾಮ ರೈನಿ, ಮುಝ್ತಬಾ ಸಿದ್ಧಿಕಿ, ಹಕಮ್ ಲಾಲ್ ಬಿಂಡ್ ಮತ್ತು ಗೋವಿಂದ್ ಜಾಟವ್ ಎಂಬ 5 ಜನ ಶಾಸಕರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜೊತೆ ಸೇರಿದ್ದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:MAshok Kumar
  First published: