ಗಂಗಾ ನದಿ ಶುದ್ಧೀಕರಣ: ನಮಾಮಿ ಗಂಗಾ ಯೋಜನೆಗೆ ಕೈಜೋಡಿಸಿದ ರಿಲಯನ್ಸ್​ ಸಂಸ್ಥೆ

ಕುಂಭಮೇಳಕ್ಕೆ ಅನುಗುಣವಾಗಿ ಕುಂಭ್ ಆ್ಯಪ್​ ಅನ್ನು ಜಿಯೋ ಟೆಲಿಕಾಂ ಒದಗಿಸಿದ್ದು, ಇದರಲ್ಲಿ ಈಗ ಗಂಗಾ ರಾಷ್ಟ್ರಗೀತೆಯನ್ನು ಅಭಿವೃದ್ಧಿಪಡಿಸಲಾಗಿದೆ.

zahir | news18
Updated:February 8, 2019, 4:04 PM IST
ಗಂಗಾ ನದಿ ಶುದ್ಧೀಕರಣ: ನಮಾಮಿ ಗಂಗಾ ಯೋಜನೆಗೆ ಕೈಜೋಡಿಸಿದ ರಿಲಯನ್ಸ್​ ಸಂಸ್ಥೆ
ಸಾಂದರ್ಭಿಕ ಚಿತ್ರ
  • News18
  • Last Updated: February 8, 2019, 4:04 PM IST
  • Share this:
ನಮಾಮಿ ಗಂಗೆ ಯೋಜನೆಯಡಿ ಗಂಗಾ ನದಿ ಶುದ್ದೀಕರಣಕ್ಕೆ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​(RIL) ಕೈ ಜೋಡಿಸಿದೆ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿರುವ ಗಂಗಾ ನದಿ ಶುದ್ಧೀಕರಣಕ್ಕೆ ರಿಲಯನ್ಸ್​ ಮುಂದಾಗಿದ್ದು, ಇದಕ್ಕಾಗಿ ನ್ಯಾಷನಲ್​ ಮಿಷನ್ ಫಾರ್​ ಕ್ಲೀನಿಂಗ್ ಗಂಗಾ(ಎನ್​ಎಂಸಿಜಿ) ದೊಂದಿಗೆ ಸಹಭಾಗಿತ್ವವನ್ನು ವಹಿಸಿಕೊಂಡಿದೆ.

ಈ ಪಾಲುದಾರಿಕೆಯ ಅಡಿಯಲ್ಲಿ ರಿಲಯನ್ಸ್​ ಜಿಯೋ ಇನ್ಫೋಕಾಮ್ ಲಿಮಿಟೆಡ್ ಡಿಜಿಟಲ್​ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಅದರಂತೆ ಡಿಜಿಟಲ್​ ಬ್ಯಾನರ್​ ಸಂದೇಶಗಳು, ಎಸ್​ಎಂಎಸ್​ಗಳನ್ನು ರಿಲಯನ್ಸ್​ ಜಿಯೋ  ಕಳುಹಿಸಲಿದೆ.  ಈಗಾಗಲೇ ಪ್ರಾರಂಭವಾಗಿರುವ ಕುಂಭಮೇಳಕ್ಕೆ ಅನುಗುಣವಾಗಿ ಈ ಪ್ರಚಾರ ಸಂದೇಶಗಳನ್ನು ಎನ್​ಎಂಸಿಜಿ ಸಂಸ್ಥೆಯು ಜಿಯೋಗೆ ಒದಗಿಸಿದೆ. ಈ ಮೂಲಕ ಜನರಿಗೆ ಗಂಗಾ ನದಿಯ ಸ್ವಚ್ಛತೆಯ ಬಗ್ಗೆ ರಿಲಯನ್ಸ್​ ಜಾಗೃತಿ ಮೂಡಿಸಲಿದೆ ಎಂದು ತಿಳಿಸಲಾಗಿದೆ.

ಕುಂಭಮೇಳಕ್ಕೆ ಅನುಗುಣವಾಗಿ ಕುಂಭ್ ಆ್ಯಪ್​ ಅನ್ನು ಜಿಯೋ ಟೆಲಿಕಾಂ ಒದಗಿಸಿದ್ದು, ಇದರಲ್ಲಿ ಈಗ ಗಂಗಾ ರಾಷ್ಟ್ರಗೀತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಗೀತೆಯನ್ನು 50 ಮಿಲಿಯನ್ ಜಿಯೋಫೋನ್​ ಬಳಕೆದಾರು ಆನಂದಿಸಬಹುದು. ಈ ಮೂಲಕ ಕೂಡ ಗಂಗೆಯ ಕುರಿತು ಜನರಿಗೆ ಮಾಹಿತಿ ಒದಗಿಸಲು ಜಿಯೋ ಮುಂದಾಗಿದೆ.

ನ್ಯಾಷನಲ್​ ಮಿಷನ್ ಫಾರ್​ ಕ್ಲೀನಿಂಗ್ ಗಂಗಾ, ರಿಲಯನ್ಸ್​ ಜೊತೆಗಿನ ಈ ಸಹಯೋಗದಿಂದ ತನ್ನ ಸ್ವಚ್ಛತಾ ಪ್ರಚಾರವನ್ನು ಜನಸಾಮಾನ್ಯರಿಗೂ ತಲುಪಿಸುವಂತಹ ಕಾರ್ಯಕ್ಕೆ ಕೈ ಹಾಕಿದೆ. ಇದರಿಂದ ಕ್ಲೀನ್​ ಗಂಗಾ ಯೋಜನೆಯು ನೇರವಾಗಿ ಭಾರತದ ಮೂಲೆ ಮೂಲೆಗೆ ತಲುಪಲಿದೆ. ಅಲ್ಲದೆ 2019 ರ ಕುಂಭಮೇಳ ಸಮಯದಲ್ಲಿ ಲಕ್ಷಾಂತರ ಮಂದಿಗೆ ಗಂಗೆಯ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗಲಿದೆ.
First published:February 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ