ಪ್ರಸ್ತುತ ಜಗತ್ತಿನಲ್ಲಿ ಅವಿಭಕ್ತ ಕುಟುಂಬಗಳು ತೀರಾ ಕಡಿಮೆ. ಪ್ರತಿಯೊಬ್ಬ ಮಕ್ಕಳು ಮದುವೆಯಾಗಿ ತಂದೆ ತಾಯಿಯಿಂದ ಬೇರೆಯಾಗಲು ಬಯಸುತ್ತಾರೆ. ಹಾಗಾಗಿ ವಿಭಕ್ತ ಜೀವನವನ್ನು ಇಷ್ಟಪಡುತ್ತಾರೆ. ಇದರಿಂದಾಗಿ ಇಂದು ಅವಿಭಕ್ತ ಕುಟುಂಬ ಕಣ್ಣರೆಯಾಗಿದೆ. ಆದರೆ ಇಲ್ಲೊಂದು ಅವಿಭಕ್ತ ಕುಟುಂಬವಿದೆ. ಆ ಕುಟುಂಬದ ಮಹಿಳೆಗೆ 22 ಮಕ್ಕಳು. ಆದರೆ ಅಚ್ಚರಿ ಏನೆಂದರೆ ಆಕೆ ಮೂರನೇ ಬಾರಿ ಅಜ್ಜಿಯಾಗಿದ್ದಾಳೆ. ಈ ಖುಷಿಯನ್ನು ಆಕೆಯ ಕುಟುಂಬದವರೊಂದಿಗೆ ಸಂಭ್ರಮಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾಳೆ.
ಮಕ್ಕಳಿರ ಬೇಕು ಮನೆ ತುಂಬಾ ಎಂಬ ಮಾತು ಕೇಳಿರುತ್ತೀರಿ ಅದರಂತೆ ಸ್ಯೂ ಮತ್ತು ನೋಯೆಲ್ ಎಂಬ ಬ್ರಿಟನ್ ಮೂಲದ ದಂಪತಿಗೆ 22 ಜನ ಮಕ್ಕಳು. ಹಾಗಾಗಿ ಬ್ರಿಟನ್ನ ಅತಿ ದೊಡ್ಡ ಕುಟುಂಬವನ್ನು ಎಂಬ ಹೆಗ್ಗಳಿಕೆಯನ್ನ ರಾಡ್ಫಾರ್ಡ್ ಕುಟುಂಬ ಹೊಂದಿದೆ. ಇದೀಗ ಈ ದಂಪತಿಯು ಮೂರನೇ ಬಾರಿಗೆ ಅಜ್ಜ-ಅಜ್ಜಿಯಾಗಿದ್ದೂ ಈ ಕುಟುಂಬದೆಲ್ಲೆಡೆ ಸಂತಸದ ವಾತಾವರಣ ನಿರ್ಮಾಣವಾಗಿದೆ.
22 ಮಕ್ಕಳ ತಾಯಿ ಸ್ಯೂಗೆ 46 ವರ್ಷ!
46 ವರ್ಷದ ಸ್ಯೂ ಅಧಿಕ ಮಕ್ಕಳನ್ನು ಹೊಂದಿರುವುದಲ್ಲದೆ ಕೂಡು ಕುಟುಂಬದೊಂದಿದೆ ವಾಸಿಸುತ್ತಿದ್ದಾರೆ. 22 ಮಕ್ಕಳು ಮನೆಯ ಮೇಲ್ಛಾವಣಿಯಲ್ಲಿ ಮಲಗುತ್ತಾರಂತೆ. ಪತಿ ನಿಯೋಲ್ ರಾಡ್ಫೋರ್ಡ್ ಮತ್ತು ಆಕೆ ಮನೆಯ ಮೊದಲ ಫ್ಲೋರ್ನಲ್ಲಿ ಇರುತ್ತಾರಂತೆ.
ಸ್ಯೂ ಅಜ್ಜಿಯಾಗಿರುವ ಸಂತಸವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ‘‘ ಈ ಸುದ್ದಿಯನ್ನು ಹಂಚಿಕೊಳ್ಳಳು ಕಾತುರನಾಗಿದ್ದೇನೆ. ನಮ್ಮ ಕುಟುಂಬಕ್ಕೆ ಸುಂದರವಾದ ಮಗುವನ್ನು ಬರಮಾಡಿಕೊಂಡಿದ್ದೇವೆ. ಅವಳು ತುಂಬಾ ಸುಂದರವಾಗಿ ಸಣ್ಣ ಬೆರಳುಗಳನ್ನು ಹೊಂದಿದ್ದಾಳೆ. ಮುದ್ದಾದ ಕಣ್ಣುಗಳು, ಸುಂದರ ನಗು ಬೀರುತ್ತಾಳೆ’’ ಎಂದು ಅಡಿಬರಹ ಬರೆದು ಪೋಸ್ಟ್ ಮಾಡಿದ್ದಾಳೆ.
ಸ್ಯೂ ಮತ್ತು ನಿಯೋಲ್ ರಾಡ್ಫೋರ್ಡ್ ಅವರ ಹಿರಿಯ ಮಗ 31 ವರ್ಷದ ಕ್ರಿಸ್ ರೆಡ್ಫೋರ್ಡ್ ಅವರು ನಿಕೊಲೊ ಸ್ಪೆನ್ಸರನ್ನು ವಿವಾಹವಾಗಿದ್ದಾಳೆ. ಸದ್ಯ ಬೇರೆ ಮನೆಯಲ್ಲಿದ್ದಾರೆ. ಈ ದಂಪತಿಗೆ ಮ್ಯಾಸಿ ಮತ್ತು ಜಾಕೊಬ್ ಎಂಬ 2 ಮಕ್ಕಳಿದ್ದಾರೆ. ಇದೀಗ ಮೂರನೇ ಹೆಣ್ಣು ಮಗುವನ್ನು ಈ ದಂಪತಿಗಳು ತಂದೆ ತಾಯಿಯಾಗಿದ್ದಾರೆ.
ಅಂದಹಾಗೆಯೇ ಕ್ರಿಸ್ ಮೇ 7, 1989ರಲ್ಲಿ ಜನಿಸಿದರು. ಆ ಬಳಿಕ ಸ್ಯೂ ಮತ್ತು ನಿಯೋಲ್ 21 ಮಕ್ಕಳನ್ನು ಹುಟ್ಟಿಸಿದ್ದಾರೆ. ಅಂದಹಾಗೆಯೇ ಕ್ರಿಸ್ ಜನಿಸಿದ ವೇಳೆ ಸ್ಯೂ ಗೆ 26 ವಯಸ್ಸಿತ್ತು ಎಂಬುದು ವಿಶೇಷ.
ಸ್ಯೂ ಹೇಲುವಂತೆ ನನ್ನ ಮಗ ಕ್ರಿಸ್ ಮಾಧ್ಯಮದಿಂದ ದೂರವಿರಲು ಬಯಸುತ್ತಾನೆ. ಅವನು ಚಾನೆಲ್ 5 ರ ಸಾಕ್ಷ್ಯಚಿತ್ರ ‘‘22 ಕಿಡ್ಸ್ ಅಂಡ್ ಕೌಂಟಿಂಗ್‘‘ ನಲ್ಲೂ ಕೂಡ ಕಾಣಿಸಲಿಲ್ಲ. ಇದರಲ್ಲಿ ಬ್ರಿಟನ್ನ ರಾಡ್ಫಾರ್ಡ್ ಕುಟುಂಬದ ಜೀವನಶೈಲಿಯನ್ನು ತೋರಿಸಲಾಗಿದೆ. ಕ್ರಿಸ್ ಈ ಹಿಂದೆ ತನ್ನ ತಂದೆಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು, ಈಗ ಬೇರೆಯೆ ವೃತ್ತಿ ಮಾಡುತ್ತಿದ್ದಾನೆ.
ಒಟ್ಟಿನಲ್ಲಿ ಸ್ಯೂ ಮತ್ತು ನಿಯೋಲ್ ರಾಡ್ಫೋರ್ಡ್ ಅವರ ಮನೆತನದ ಗೌರವ ಹೆಚ್ಚಾಗಿದೆ. ತಮ್ಮ ಕುಟುಂಬನ್ನ ಇನ್ನಷ್ಟು ದೊಡ್ಡದಾಗಿಸಿದ್ದಾರೆ. ಇಬ್ಬರು 3ನೇ ಬಾರಿಗೆ ಅಜ್ಜ-ಅಜ್ಜಿಯಾಗಿರುವುದಲ್ಲದೆ, ತನ್ನ ಮನೆಯ ಮಕ್ಕಳೊಂದಿಗೆ ಸಂತಸದಿಂದ ಸಂಭ್ರಮಿಸಿದ್ದಾರೆ.
ಇದನ್ನು ಓದಿ: Flipkart ಬಿಗ್ ಬಿಲಿಯನ್ ಡೇಸ್ ಸೇಲ್ ದಿನಾಂಕ ಬದಲಾವಣೆ…ಆಕರ್ಷಕ ಆಫರ್ ನಿಮ್ಮದಾಗಿಸಲು 3 ದಿನಗಳು ಬಾಕಿ!
ರಾಡ್ಫಾರ್ಡ್ ಬ್ರಿಟನ್ ಫ್ಯಾಮಿಲಿ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಗುರುತಿಸಿಕೊಂಡಿದೆ. ಅದರಲ್ಲೂ ಸ್ಯೂ ಮತ್ತು ನಿಯೋಲ್ ರಾಡ್ಫೋರ್ಡ್ಗೆ 22 ಮಕ್ಕಳಿದ್ದಾರೆ ಎಂಬುದು ಅನೇಕರಿಗೆ ತಿಳಿದಿದೆ. ಇನ್ನು ಈ ಫ್ಯಾಮಿಲಿಯ ಕುರಿತಾಗಿ ಸಾಕ್ಷ್ಯಚಿತ್ರ ಕೂಡ ನಿರ್ಮಾಭ=ಣವಾಗಿದ್ದು, ಯ್ಯೂಟೂಬ್ನಲ್ಲಿ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ