ಲೇಡಿ ಪಿಎಸ್ಐ ಸಮವಸ್ತ್ರ ಎಳೆದು ಕಿರುಕುಳ: ಮಧ್ಯರಾತ್ರಿಯಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ


Updated:January 19, 2018, 10:43 PM IST
ಲೇಡಿ ಪಿಎಸ್ಐ ಸಮವಸ್ತ್ರ ಎಳೆದು ಕಿರುಕುಳ: ಮಧ್ಯರಾತ್ರಿಯಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ
ಬೆಂಗಳೂರಿನಲ್ಲಿ ಮಹಿಳಾ ಪಿಎಸ್​ಐಗೆ ಕಿರುಕುಳ
  • Share this:
ಬೆಂಗಳೂರು(ಜ.19): ಬೆಂಗಳೂರಿನಲ್ಲಿ ಪೊಲೀಸರ ಪರಿಸ್ಥಿತಿ ಹೇಳತೀರದಾಗಿದೆ. ನೈಟ್ ರೌಂಡ್ಸ್​ನಲ್ಲಿದ್ದ ಲೇಡಿ ಪಿಎಸ್ಐ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೀವನ್ ಭೀಮಾ ನಗರದ ಪಿಎಸ್​ಐ ಅಶ್ವಿನಿ ಅವರಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಜನವರಿ 18ರಂದು ಬೆಳಗಿನ ಜಾವ 2.30ರ ಸುಮಾರಿಗೆ ಗಸ್ತಿನಲ್ಲಿದ್ದ ಸಿದ್ಧಪ್ಪ ಮತ್ತು ರವಿಕುಮಾರ್ ಎಂಬ ಪೊಲೀಸ್ ಪೇದೆಗಳು ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಚಾಕು ಹಿಡಿದು ತಿರುಗುತ್ತಿರುವುದನ್ನ ಗಮನಿಸುತ್ತಾರೆ. ಬಳಿಕ ಜೀವನ್ ಭೀಮಾನಗರದ ಲೇಡಿ ಪಿಎಸ್​ಐ ಅಶ್ವಿನಿಯವರಿಗೆ ಮಾಹಿತಿ ಕೊಡುತ್ತಾರೆ. ಈ ಸಂದರ್ಭ ಸ್ಥಳಕ್ಕೆ ತೆರಳಿದ ಪಿಎಸ್​ಐ ಜೊತೆ ನಾಲ್ವರೂ ಆರೋಪಿಗಳು ಅಸಭ್ಯವಾಗಿ ವರ್ತಿಸುತ್ತಾರೆ. ಮಹಿಳೆ ಎಂಬುದನ್ನೂ ಲೆಕ್ಕಿಸದೇ ಅಸಭ್ಯ ಪದಗಳನ್ನ ಬಳಸಿ ಬೈದಿದಲ್ಲದೇ ಸಮವಸ್ತ್ರ ಎಳೆದು ಕಿರುಕುಳ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ನಾಲ್ವರೂ ಆರೋಪಿಗಳನ್ನ ಬಂಧಿಸಿ ಕಂಬಿ ಹಿಂದೆ ತಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ವಿಜಯಾನಂದ, ಚೇತು, ಸಚಿನ್, ಅಕಿಲ್ ಜೋಶ್ ವಿರುದ್ಧ ಕೇಸ್ ದಾಖಲಾಗಿದೆ.

 

 

 
First published:January 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading