ಗೆಹ್ಲೋಟ್ ಸರ್ಕಾರ ಬೀಳಿಸಲು ಮಾಯಾವತಿ ಪ್ಲಾನ್?; ಸೇಡು ತೀರಿಸಿಕೊಳ್ಳಲು ಮುಂದಾದ ಬಿಎಸ್​ಪಿ ಮುಖ್ಯಸ್ಥೆ

ಈಗಾಗಲೇ ಆರು ಶಾಸಕರ ಜೊತೆ ಮಾಯಾವತಿ ಮಾತುಕತೆ ನಡೆಸಿದ್ದು ಕಾಂಗ್ರೆಸ್​ ವಿರುದ್ಧ ಮತ ಹಾಕುವಂತೆ ಸೂಚಿಸಿದ್ದಾರೆ. ಈ ಮೂಲಕ ಅಶೋಕ್​ ಗೆಹ್ಲೋಟ್​ಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

 • Share this:
  ಜೈಪುರ (ಆ.14): ರಾಜಸ್ಥಾನ ಸರ್ಜಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿದೆ. ಸಚಿನ್​​ ಪೈಲಟ್​ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ಮರಳಿರುವುದು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ಗೆ ಹೊಸ ಹುರುಪು ನೀಡಿದೆ. ಈ ಮಧ್ಯೆ, ಬಿಎಸ್​ಪಿ ಪಕ್ಷದಿಂದ ಕಾಂಗ್ರೆಸ್​ ಸೇರಿದ್ದ ಶಾಸಕರು ಗೆಹ್ಲೋಟ್​ ವಿರುದ್ಧ ಮತಯಾಚನೆ ಮಾಡವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ.

  ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ಆರು ಬಿಎಸ್​ಪಿ ಶಾಸಕರು ಕಾಂಗ್ರೆಸ್​ ಜೊತೆ ವಿಲೀನಗೊಂಡಿದ್ದರು. ಈ ಬೆಳವಣಿಗೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಎಂ ಗೆಹ್ಲೋಟ್​ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದರು. ಅಲ್ಲದೆ, ಈ ವಿಲೀನ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲು ಕೂಡ ಏರಿದ್ದರು. ಇಂದು ನಡೆಯುವ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಬಿಎಸ್​ಪಿಯ ಮಾಜಿ ಸದಸ್ಯರು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಈಗಾಗಲೇ ಆರು ಶಾಸಕರ ಜೊತೆ ಮಾಯಾವತಿ ಮಾತುಕತೆ ನಡೆಸಿದ್ದು ಕಾಂಗ್ರೆಸ್​ ವಿರುದ್ಧ ಮತ ಹಾಕುವಂತೆ ಸೂಚಿಸಿದ್ದಾರೆ. ಈ ಮೂಲಕ ಅಶೋಕ್​ ಗೆಹ್ಲೋಟ್​ಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

  ಬಂಡಾಯ ಏಳುವ ಮೂಲಕ ಸರ್ಕಾರವನ್ನೇ ಬೀಳಿಸಲು ಸಚಿನ್‌ ಪೈಲಟ್‌ ಮುಂದಾಗಿದ್ದರು. ತಮಗೆ ಸಿಎಂ ಸ್ಥಾನ ನೀಡಿ ಇಲ್ಲದಿದ್ದರೆ ಪಕ್ಷ ತೊರೆಯುತ್ತೇನೆ ಎಂದಿದ್ದರು. ಈ ಬೆನ್ನಲ್ಲೇ ಅವರು ಬೇರೆ ಪಕ್ಷ ಕಟ್ಟಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಬಂದಿದ್ದವು. ಸೋಮವಾರ ದಿಢೀರ್‌ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಸಂಧಾನ ಮಾತುಕತೆ ಯಶಸ್ವಿಯಾಗಿತ್ತು.

  ಆದಾಗ್ಯೂ ಬಿಜೆಪಿ ಅವಿಶ್ವಾಸ ನಿರ್ಯಣ ಮಂಡನೆ ಮಾಡುತ್ತಿದೆ. ಈ ವೇಳೆ ಕಾಂಗ್ರೆಸ್​ ತಿರುಗೇಟು ನೀಡುವುದು ಮಾಯಾವತಿಯ ಪ್ಲಾನ್​ ಎನ್ನಲಾಗುತ್ತಿದೆ.

  ಅಶೋಕ್ ಗೆಹ್ಲೋಟ್ ಸರ್ಕಾರ ದ್ವಂದ್ವಗಳ ಸರ್ಕಾರವಾಗಿದೆ ಎಂದು ಟೀಕಿಸಿದ ಪೂನಿಯಾ, ರಾಜಸ್ಥಾನದ ಕಾಂಗ್ರೆಸ್​ನೊಳಗಿನ ರಾಜಕೀಯ ಬಿಕ್ಕಟ್ಟು ಶಮನಗೊಂಡಂತೆ ತೋರುತ್ತಿದೆಯಾದರೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬಂತಿಲ್ಲ. ಹಗ್ಗ-ಜಗ್ಗಾಟ ನಡೆದಿದೆ. ಒಬ್ಬರು ಅತ್ತ ಎಳೆಯುತ್ತಿದ್ದರೆ, ಇನ್ನೊಬ್ಬರು ಇತ್ತ ಎಳೆಯುತ್ತಿದ್ದಾರೆ. ಹೀಗಾಗಿ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದಿದ್ದರು.
  Published by:Rajesh Duggumane
  First published: