• ಹೋಂ
  • »
  • ನ್ಯೂಸ್
  • »
  • Uncategorized
  • »
  • lamborghini: ಭಾರತಕ್ಕೆ ಕಾಲಿಟ್ಟ ಲ್ಯಾಂಬೊರ್ಗಿನಿ 4.99 ಕೋಟಿಯ ಹುರಾಕನ್ ಎಸ್‌ಟಿಒ

lamborghini: ಭಾರತಕ್ಕೆ ಕಾಲಿಟ್ಟ ಲ್ಯಾಂಬೊರ್ಗಿನಿ 4.99 ಕೋಟಿಯ ಹುರಾಕನ್ ಎಸ್‌ಟಿಒ

ಲ್ಯಾಂಬರ್ಗಿನಿ ಹುರಾಕಾನ್​ ಎಸ್​ಟಿಒ

ಲ್ಯಾಂಬರ್ಗಿನಿ ಹುರಾಕಾನ್​ ಎಸ್​ಟಿಒ

3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಲೋ ಮೀಟರ್, 9 ಸೆಕೆಂಡುಗಳಲ್ಲಿ ಗಂಟೆಗೆ 0-200ಕಿಲೋ ಮೀಟರ್ ಪ್ರತಿ ಗಂಟೆಗೆ 310ಕಿಲೋ ಮೀಟರ್​ನಂತೆ ವೇಗವನ್ನು ಹೆಚ್ಚಿಸಬಹುದಾಗಿದೆ.

  • Share this:

    ಲ್ಯಾಂಬೊರ್ಗಿನಿ ಎಂದರೆ  ಐಷಾರಾಮಿ ಕಾರು ತಯಾರಿಸುವುದಕ್ಕೆ ಹೆಸರುವಾಸಿಯಾಗಿರುವಂತಹ ಇಟಲಿಯ ಕಾರು ತಯಾರಕ ಕಂಪನಿ.


    ಇಟಲಿಯ ಸೂಪರ್ ಸ್ಪೋರ್ಟ್ಸ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಕಂಪೆನಿ ಹೊಸದಾಗಿ ಹುರಾಕನ್ ಎಸ್‌ಟಿಒ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ವರ್ಷ ಚೆನ್ನಾಗಿ ಕಾರುಗಳ ಮಾರಾಟದ ನಿರೀಕ್ಷೆಯಿಂದ ಭಾತರದಲ್ಲಿ ಈ ಕಾರನ್ನು ಬಿಡುಗಡೆಗೊಳಿಸಿರುವುದಾಗಿ ಕಂಪೆನಿ ತಿಳಿಸಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಐಷಾರಾಮಿ ಕಾರಿನ ಬೆಲೆ ಬರೋಬ್ಬರಿ 4.99 ಕೋಟಿ ರೂಪಾಯಿ ಆಗಿದೆ.


    ಹುರಾಕನ್ಎಸ್‌ಟಿಒ - ಸೂಪರ್ ಟ್ರೋಫಿಯೊ ಓಮೊಲೊಗಾಟಾ ಎಂಬುದು ಸೂಪರ್ ಸ್ಪೋರ್ಟ್ಸ್ ಕಾರ್ ಆಗಿದ್ದು, ಇದು ಲ್ಯಾಂಬೊರ್ಗಿನಿ ಸ್ಕ್ವಾಡ್ರಾ ಕೋರ್ಸಿನ ರೇಸಿಂಗ್ ಪರಂಪರೆಯಿಂದ ಪ್ರೇರಿತವಾಗಿದೆ ಎಂದು ಹೇಳುತ್ತಾರೆ.ಈ ಕಾರು 640 ಎಚ್‌ಪಿ ಎಂಜಿನ್‌ ಅನ್ನು ಹೊಂದಿದ್ದು, ಇದು 3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಲೋ ಮೀಟರ್, 9 ಸೆಕೆಂಡುಗಳಲ್ಲಿ ಗಂಟೆಗೆ 0-200ಕಿಲೋ ಮೀಟರ್ ಪ್ರತಿ ಗಂಟೆಗೆ 310ಕಿಲೋ ಮೀಟರ್​ನಂತೆ ವೇಗವನ್ನು ಹೆಚ್ಚಿಸಬಹುದಾಗಿದೆ.


    ಹುರಾಕನ್ ಎಸ್​ಟಿಒ ಬಾಹ್ಯವಾಗಿ ಶೇಕಡಾ 75 ಕ್ಕಿಂತಲೂ ಹೆಚ್ಚು ಕಾರ್ಬನ್ ಫೈಬರ್ ಅನ್ನು ಬಳಸಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಈ ಕಾರಿನ ಒಟ್ಟುತೂಕವು 1,339 ಕೆ.ಜಿ ಆಗಿದ್ದು, ಇದುಹುರಾಕನ್​ ಸರಣಿಯ ಮತ್ತೊಂದು ಹಗುರವಾದ ಮಾದರಿ ಹುರಾಕನ್​ ಫಾರ್ಮೆಂಟ್​ಗೆ ಈ ಹೊಸಾ ಕಾರನ್ನು ಹೋಲಿಸಿ ನೋಡಿದರೆ ಹಳೆಯ ಕಾರಿಗಿಂತ ಸ್ವಲ್ಪ ತೂ ಇಳಿಸಿಕೊಂಡಿದೆ. ಇದು 43 ಕೆ.ಜಿ ಕಡಿಮೆ ತೂಕದ ಕಾರು ಇದಾಗಿದೆ ಎಂದು ತಿಳಿಸಿದ್ದಾರೆ.


    "ಹುರಾಕನ್ ಎಸ್​ಟಿಒ ಕಾರು ತುಂಬಾ ವಿಶಿಷ್ಟವಾದ ಕಾರ್ ಆಗಿದ್ದು, ಈ ಮಾಡಲ್ ಕಾರುಗಳನ್ನು ತೆಗೆದುಕೊಳ್ಳಲು ಜನರು ಭಾರತದಲ್ಲಿ ಕಾತುರರಾಗಿದ್ದಾರೆ, ಏಕೆಂದರೆ ಈ ಐಷಾರಾಮಿ ಕಾರುಗಳನ್ನು ಟ್ರ್ಯಾಕ್ ಮೇಲೆ ಓಡಿಸುವುದು ಎಂದರೆ ತುಂಬಾ ಇಷ್ಟ. ಅದಕ್ಕಾಗಿ ಈ ಕಾರುಗಳಿಗೆ ಭಾರತದಲ್ಲಿ ಮಾರ್ಕೆಟ್ ಇದೆ", ಎಂದು ಲ್ಯಾಂಬೊರ್ಗಿನಿ ಕಂಪನಿಯ ಭಾರತದ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


    ಹುರಾಕನ್ ಎಸ್​ಟಿಒ ಕಾರನ್ನು ಬರೀಟ್ರ್ಯಾಕ್‌ ಗಳ ಮೇಲೆ ಓಡಿಸದೆ ಗ್ರಾಹಕರು ಅದನ್ನು ರಸ್ತೆಯಲ್ಲಿಯೂ ಓಡಿಸಬಹುದಾಗಿದೆ ಎಂದು ಹೇಳುತ್ತಾರೆ.


    ಭಾರತದಲ್ಲಿ ಹೆಚ್ಚು ಜನರು ತಮ್ಮ ಸೂಪರ್‌ ಕಾರ್‌ಗಳನ್ನು ದೆಹಲಿ ಮತ್ತು ಚೆನ್ನೈನಲ್ಲಿರುವಂತಹ ರೇಸ್ ಟ್ರ್ಯಾಕ್‌ಗಳಿಗೆ ಕೊಂಡೊಯ್ದು ರೇಸ್ ಟ್ರ್ಯಾಕ್ ಪರಿಸರದಲ್ಲಿ ಈ ಕಾರುಗಳನ್ನು ಓಡಿಸಿ ಆನಂದಿಸುವುದನ್ನ ನಾವು ನೋಡುತ್ತೇವೆ ಎಂದು ಭಾರತದ ಲ್ಯಾಂಬೊರ್ಗಿನಿ ಕಂಪನಿಯ ಮುಖ್ಯಸ್ಥರು ಹೇಳಿದ್ದಾರೆ.


    ಇದಲ್ಲದೆ, ಭಾರತದ ವಿವಿಧ ಮಹಾ ನಗರಗಳಲ್ಲಿ ಸಹ ಹೊಸ ಹೊಸ ಟ್ರ್ಯಾಕ್‌ಗಳು ಬರುತ್ತಲಿದ್ದು, ಅಲ್ಲಿ ಹೋಗಿ ಇಂತಹ ಐಷಾರಾಮಿ ಕಾರುಗಳನ್ನು ಗ್ರಾಹಕರು ತೆಗೆದುಕೊಂಡು ಹೋಗಿ ಟ್ರ್ಯಾಕ್ ಅನುಭವವನ್ನು ಪಡೆಯಬಹುದು.


    ಹುರಾಕನ್ಎಸ್‌ಟಿಒ ಕಾರಿನ ಟಯರ್ ಗಳಿಗೆ ಯಾಂಟಿ ರೋಲ್ ಬಾರ್ಸ್ ಹಾಕಲಾಗಿದ್ದು ಈ ಕಾರನ್ನು ಚಲಾಯಿಸುವಾಗ ನೀವು ಪಡೆಯುವ ಅನುಭವದಿಂದಲೇ ನೀವು ಹೌದು ಇದು ತುಂಬಾ ಒಳ್ಳೆಯ ರೇಸರ್ ಕಾರ್ ಎಂದು ತಿಳಿಯಬಹುದಾಗಿದೆ ಎಂದು ಲ್ಯಾಂಬೊರ್ಗಿನಿ ಮುಖ್ಯಸ್ಥರು ಹೇಳಿದರು.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು