HOME » NEWS » Uncategorized » KOLAR SOLDIER CREMATION WITH MILITARY HONOR SESR

ಸಕಲ ಸರ್ಕಾರಿ ಗೌರವಗಳೊಂದಿಗೆ ಚಿನ್ನದ ನಾಡಿನ ಯೋಧನ ಅಂತ್ಯಕ್ರಿಯೆ

 ಜಿಲ್ಲೆಯ ಸಂಸದ ಎಸ್ ಮುನಿಸ್ವಾಮಿ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ , ಕೆವೈ ನಂಜೇಗೌಡ  ಸೇರಿದಂತೆ ಜಿಲ್ಲೆಯ ಜನರು ಅಂತಿಮ ದರ್ಶನ ಪಡೆದರು

Seema.R | news18-kannada
Updated:February 29, 2020, 5:56 PM IST
ಸಕಲ ಸರ್ಕಾರಿ ಗೌರವಗಳೊಂದಿಗೆ ಚಿನ್ನದ ನಾಡಿನ ಯೋಧನ ಅಂತ್ಯಕ್ರಿಯೆ
ಯೋಧ ಪ್ರಶಾಂತ ಅಂತಿಮ ಯಾತ್ರೆ
  • Share this:
ಕೋಲಾರ(ಫೆ. 29): ಮುಂದಿನ ತಿಂಗಳು 15 ನೇ ತಾರೀಖು ರಜೆ ಮೇಲೆ ಊರಿಗೆ ಬರೋದಾಗಿ ಹೇಳಿದ ಯೋಧ ಮನೆಗೆ ಬಂದಿದ್ದು ಶವವಾಗಿ. ಮೂರು ದಿನದ ಹಿಂದೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದ ಜಿಲ್ಲೆಯ ವೀರ ಯೋಧ ಇಂದು ಮಣ್ಣಲ್ಲಿ ಮಣ್ಣಾಗಿದ್ದಾರೆ. ಸಕಲ ಸರ್ಕಾರಿ ಗೌರವದಿಂದ ಅವರ ಅಂತಿಮ ಕ್ರಿಯೆ ನಡೆದಿದ್ದು, ಸಾವಿರಾರು ಜನರು ಅವರ ಅಂತಿಮ ಯಾತ್ರೆಯಲ್ಲಿ ಭಾಗಿಯಾದರು.

ಜಿಲ್ಲೆಯ ಕಣಿಂಬೆಲೆ ಗ್ರಾಮದ ಪ್ರಶಾಂತ್ ಪಾರ್ಥಿವ ಶರೀರ ನಿನ್ನೆ ಹುಟ್ಟೂರಿಗೆ ಬಂದಿದ್ದು, ಬಂಗಾರಪೇಟೆಯ ಜೂನಿಯರ್​ ಕಾಲೇಜ್​ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.  ಜಿಲ್ಲೆಯ ಸಂಸದ ಎಸ್ ಮುನಿಸ್ವಾಮಿ, ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ , ಕೆವೈ ನಂಜೇಗೌಡ  ಸೇರಿದಂತೆ ಜಿಲ್ಲೆಯ ಜನರು ಅಂತಿಮ ದರ್ಶನ ಪಡೆದರು. ಈ ವೇಳೆ ವೀರ ಯೋಧನ ತ್ಯಾಗಕ್ಕೆ ಗೌರವವಾಗಿ ಅವರ ಕುಟುಂಬಕ್ಕೆ ಎಂಪಿ ಮುನಿಸ್ವಾಮಿಯವರು 2 ಲಕ್ಷ  ರೂ ವೈಯಕ್ತಿಕ ಹಣ ನೀಡಿದರು. ಇದರ ಜೊತೆಗೆ  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ 50 ಸಾವಿರ ರೂ ನೀಡುವುದಾಗಿ ಅವರ ಕುಟುಂಬಕ್ಕೆ ಭರವಸೆ ನೀಡಿದರು. 

ತಲೆಗೆ ಬುಲೆಟ್​ ತಗುಲಿದರೂ ಕರ್ತವ್ಯ ನಿರ್ವಹಿಸಿದ ಪ್ರಶಾಂತ್​

ಫೆ. 25ರಂದು ಉಗ್ರರ ನಡುವಿನ ಕಾಳಗದಲ್ಲಿ ಪ್ರಶಾಂತ್​ ತಲೆಗೆ ಗುಂಡು ತಗುಲಿದೆ. ಹೆಲ್ಮೆಟ್ ಇದ್ದ ಕಾರಣ ಸಾವಿನಿಂದ ಪಾರಾಗಿದ್ದರು. ಆದರೆ, ಮೆದುಳಿನ ಭಾಗದಲ್ಲಿ ಬಲವಾದ ಪೆಟ್ಟಾದ ಪರಿಣಾಮ ಅಲ್ಲಿಯೆ ಪ್ರಜ್ಞೆ ತಪ್ಪಿದ್ದರು.  ಕೂಡಲೇ ಸೇನಾ ತರಬೇತಿ ಆಸ್ಪತ್ರೆಗೆ ಸೇರಿಸಿದರು.  ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು.

ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡ ಬಯಸಿದ್ದ ಯೋಧ 

ಲಕ್ಷಮ್ಮ ಹಾಗೂ ನಾರಾಯಣಸ್ವಾಮಿ ಅವರ ಮೂರನೇ ಮಗನಾಗಿದ್ದ ಪ್ರಶಾಂತ್​, ಪದವಿ ಮುಗಿಸಿದ ಬಳಿಕ 2015ರಲ್ಲಿ ಸೇನೆಗೆ ಆಯ್ಕೆಯಾಗಿ ಮದ್ರಾಸ್ ರೆಜಿಮೆಂಟ್ 17 ಬ್ಯಾಚ್​ಗೆ ನೇಮಕವಾಗಿದ್ದರು. ಚಿಕ್ಕವರಿದ್ದಾಗಿನಿಂದಲೂ ಬಡತನ ಕಂಡಿದ್ದ ತನ್ನ ಅಪ್ಪ-ಅಮ್ಮನಿಗೆ ಮನೆ ಕಟ್ಟಿಸಿಕೊಡುವುದು  ಪ್ರಶಾಂತ್​ ಕನಸು ಆಗಿತ್ತು. ಕಳೆದ ಆರು ತಿಂಗಳ ಹಿಂದೆ ಈ ಕಾರ್ಯಕ್ಕೆ ಮುಂದಾಗಿದ್ದ ಪ್ರಶಾಂತ್​ ಶೇ. 40ರಷ್ಟು ಮನೆ ಕಟ್ಟಿಸಿದ್ದು, ಇದನ್ನು ತಾಯಿಗೆ ಉಡುಗೊರೆ ನೀಡಬಯಸಿದ್ದರು. ಆದರೆ, ವಿಧಿಯಾಟದಲ್ಲಿ ಮನೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಭಾರತಾಂಬೆಗೆ ಪ್ರಾಣ ಅರ್ಪಿಸಿದ್ದಾರೆ.

(ವರದಿ: ರಘುರಾಜ್​)
First published: February 29, 2020, 5:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading