ಶಬರಿಮಲೆ ವಿವಾದ; 9 ವರ್ಷದ ಬಾಲಕಿಗೆ ತಂದೆ ಜೊತೆ ಶಬರಿಮಲೆಗೆ ತೆರಳಲು ಹೈಕೋರ್ಟ್ ಅನುಮತಿ

ಬಾಲಕಿ ಮತ್ತು ಆಕೆಯ ತಂದೆ ಆಗಸ್ಟ್ 23 ರಂದು ಶಬರಿಮಲೆ ದೇವಸ್ಥಾನಕ್ಕೆ ತೆರಳಲಿದ್ದಾರೆ. ಬಾಲಕಿ 10 ವರ್ಷ ತುಂಬುವ ಮುನ್ನವೇ ಶಬರಿಮಲೆಗೆ ಹೋಗಲು ಬಯಸಿದ್ದಾಗಿ ಬಾಲಕಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಶಬರಿಮಲೆ.

ಶಬರಿಮಲೆ.

 • Share this:
  ಕೊಚ್ಚಿ (ಆಗಸ್ಟ್​ 17); ಸುಪ್ರೀಂ ಕೋರ್ಟ್​ 2019ರಲ್ಲೇ ಎಲ್ಲಾ ವಯಸ್ಕ ಹೆಣ್ಣು ಮಕ್ಕಳು ಶಬರಿಮಲೆಗೆ ತೆರಳಬಹುದು ಎಂಬ ಮಹತ್ವದ ತೀರ್ಪು ನೀಡಿತ್ತು. ಇದರ ಅನ್ವಯ ಹಲವಾರು ಟೀಕೆ ಮತ್ತು ಸಂಪ್ರದಾಯವಾದಿಗಳ ವಿರೋಧದ ನಡುವೆಯೂ ಕೆಲವೂ ಹೆಣ್ಣು ಮಕ್ಕಳು ಪೊಲೀಸರ ಬಿಗಿ ಭದ್ರತೆ ನಡುವೆ ದೇವಾಲಯಕ್ಕೆ ಭೇಟಿ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸುಪ್ರೀಂ ತೀರ್ಪಿನ ನಡುವೆಯೂ ಹೆಣ್ಣು ಮಕ್ಕಳು ಶಬರಿಮಲೆಗೆ ತೆರಳಬಹುದೇ ಅಥವಾ ಬೇಡವೇ? ಎಂಬ ಚರ್ಚೆ ಈಗಲೂ ಚಾಲ್ತಿಯಲ್ಲೇ ಇದೆ. ಈ ನಡುವೆ ಅಪ್ರಾಪ್ತ ಬಾಲಕಿಗೆ ತನ್ನ ತಂದೆಯೊಂದಿಗೆ ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿರುವ ಘಟನೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂಬತ್ತು ವರ್ಷದ ಬಾಲಕಿ ಶಬರಿಮಲೆ ದೇಗುಲದ ಗರ್ಭಗುಡಿಗೆ ತನ್ನ ತಂದೆಯೊಂದಿಗೆ ಹೋಗಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇಲೆ ಈ ಆದೇಶವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

  ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂದೆ ಆಗಸ್ಟ್ 23 ರಂದು ಶಬರಿಮಲೆ ದೇವಸ್ಥಾನಕ್ಕೆ ತೆರಳಲಿದ್ದಾರೆ. ಬಾಲಕಿ 10 ವರ್ಷ ತುಂಬುವ ಮುನ್ನವೇ ಶಬರಿಮಲೆಗೆ ಹೋಗಲು ಬಯಸಿದ್ದಾಗಿ ಬಾಲಕಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಅನ್ವಯ ನ್ಯಾಯಾಲಯ ಇಂತಹ ಮಹತ್ವದ ತೀರ್ಪು ನೀಡಿದೆ ಎನ್ನಲಾಗಿದೆ.

  ಈ ವರ್ಷದ ಏಪ್ರಿಲ್‌ನಲ್ಲಿ ನ್ಯಾಯಾಲಯವು ನೀಡಿದ್ದ ಇದೇ ಆದೇಶಕ್ಕೆ ಅನುಗುಣವಾಗಿ ಈ ತೀರ್ಪು ನೀಡಲಾಗಿದೆ. ಆದೇಶದಲ್ಲಿ ಲಸಿಕೆ ಹಾಕಿಸಿದ ವ್ಯಕ್ತಿಗಳ ಜೊತೆಯಲ್ಲಿ ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎನ್ನಲಾಗಿದೆ. ಕೇರಳ ರಾಜ್ಯ ಸರ್ಕಾರ ಕೂಡ ಇದೇ ಆದೇಶವನ್ನು ಜಾರಿಗೊಳಿಸಿದೆ.

  ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಆಗಸ್ಟ್ 15 ರಂದು ಒಪನ್ ಆಗಲಿದೆ. ಕೋವಿಡ್ ನಿರ್ಬಂಧಗಳ ದೃಷ್ಟಿಯಿಂದ, ಒಂದು ದಿನದಲ್ಲಿ ಕೇವಲ 15,000 ಭಕ್ತರನ್ನು ಮಾತ್ರ ದರ್ಶನಕ್ಕೆ ಅನುಮತಿಸಲಾಗಿದೆ. ಆಗಸ್ಟ್ 23 ರ ಸಂಜೆಯೊಳಗೆ ಮಾಸಿಕ ಪೂಜೆಗಳು ಮುಗಿದ ನಂತರ ದೇಗುಲವನ್ನು ಮತ್ತೆ ಮುಚ್ಚಲಾಗುತ್ತದೆ.

  ಇದನ್ನೂ ಓದಿ: ಅಬ್ಬಾ! ನಿಮ್ಮನ್ನು ದಂಗುಬಡಿಸಲಿದೆ ಬುಡಕಟ್ಟು ಜನರ ಈ ಯಾತನಾಮಯವಾದ ಆಚರಣೆಗಳು

  2018 ರಿಂದ, 10 ರಿಂದ 50 ವಯಸ್ಸಿನ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ತಡೆಯುವ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ದೇವಾಲಯ ಪ್ರವೇಶವು ವಿವಾದಗಳಲ್ಲಿ ಸಿಲುಕಿಕೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ರಾಜ್ಯದಾದ್ಯಂತ ಭಾರೀ ಪ್ರತಿಭಟನೆ ನಡೆದು, ಭಕ್ತರು ಬೀದಿಗಿಳಿದು ಹೋರಾಟ ನಡೆಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: