ಪಟೌಡಿ ರಾಜಕುಮಾರ ತೈಮೂರ್​ಗಿಂದು ಜನ್ಮದಿನ: ಅಂಬೆಗಾಲಿಡುತ್ತಿರುವ ವಿಡಿಯೋ ಶೇರ್​ ಮಾಡಿದ ಕರೀನಾ ಕಪೂರ್​!

ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಏಕೈಕ ಪುತ್ರನಾಗಿರುವ ತೈಮೂರ್​ಗೆ ಇಂದು 5ನೇ ವರ್ಷದ ಹುಟ್ಟುಹಬ್ಬ(Birthday) ಸಂಭ್ರಮ. ತೈಮೂರ್​ ಅಲಿ ಖಾನ್​ಗೆ ಶುಭಾಶಯಗಳ ಮಹಪೂರವೇ ಹರಿದು ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತೈಮೂರ್​ಗೆ ವಿಶ್​ ಮಾಡುತ್ತಿದ್ದಾರೆ.

ಕರೀನಾ ಕಪೂರ್​, ತೈಮೂರ್​ ಅಲಿ ಖಾನ್​

ಕರೀನಾ ಕಪೂರ್​, ತೈಮೂರ್​ ಅಲಿ ಖಾನ್​

  • Share this:
ಬಾಲಿವುಡ್ ನಟಿ ಕರೀನಾ ಕಪೂರ್(Kareena Kapoor) , ಸೈಫ್​ ಅಲಿ ಖಾನ್(Saif Ali Khan)​ ಪುತ್ರ ತೈಮೂರ್ ಅಲಿ ಖಾನ್(Taimur Ali Khan)​ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. ಕರೀನಾ ಪುತ್ರ ತೈಮೂರ್ ಎಲ್ಲೆ ಹೋದರು ಅಲ್ಲೊಂದು ಸುದ್ದಿ ಆಗೇ ಹೋಗಿರುತ್ತೆ. ಅಷ್ಟರ ಮಟ್ಟಿಗೆ ಕ್ಯೂಟ್(Cute) ಆಗಿರೋ ತೈಮರ್ ಅಲಿ ಖಾನ್​ಗೆ ಬೇಕಾದಷ್ಟು ಅಭಿಮಾನಿಗಳಿದ್ದಾರೆ.ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಏಕೈಕ ಪುತ್ರನಾಗಿರುವ ತೈಮೂರ್​ಗೆ ಇಂದು 5ನೇ ವರ್ಷದ ಹುಟ್ಟುಹಬ್ಬ(Birthday) ಸಂಭ್ರಮ. ತೈಮೂರ್​ ಅಲಿ ಖಾನ್​ಗೆ ಶುಭಾಶಯಗಳ ಮಹಪೂರವೇ ಹರಿದು ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತೈಮೂರ್​ಗೆ ವಿಶ್​ ಮಾಡುತ್ತಿದ್ದಾರೆ. ಇದೆಲ್ಲರ ನಡುವೆ ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್ ವಿಶೇಷವಾಗಿ ವಿಶ್​ ತಮ್ಮ ಪುತ್ರನಿಗೆ ವಿಶ್​ ಮಾಡಿದ್ದಾರೆ. ತೈಮೂರ್​ನ ಮೊದಲ ಹೆಜ್ಜೆಯ ಹಳೇ ವಿಡಿಯೋವನ್ನು ಶೇರ್​ ಮಾಡುವ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಸಖತ್​ ವೈರಲ್ ಆಗುತ್ತಿದೆ. ತೈಮೂರ್​ ಮುದ್ದಾದ ವಿಡಿಯೋ ಕಂಡು ಎಲ್ಲರೂ ಖುಷಿಪಟ್ಟಿದ್ದಾರೆ. ಮಕ್ಕಳು ಮೊದಲು ನಡೆಯುವುದನ್ನು ನೋಡುವುದೇ ಚೆಂದ. ಹೆ್ಜ್ಜೆಗಳು ಅತ್ತಿಂದ ಇತ್ತ ಇಡುವುದನ್ನು ನೋಡುವುದಕ್ಕೆ ಸಂತಸವಾಗುತ್ತೆ ಅಂತ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. 

ಪ್ರೀತಿಯಿಂದ ಟ್ವೀಟ್ ಮಾಡಿದ ತಾಯಿ ಕರೀನಾ!

ತನ್ನ ಮಗ ಮೊದಲು ಅಂಬೆಗಾಲಿಡುವ ವಿಡಿಯೋವನ್ನು ಕರೀನಾ ಕಪೂರ್​ ಹಂಚಿಕೊಂಡಿದ್ದಾರೆ.  ‘ನಿನ್ನ ಮೊದಲ ಹೆಜ್ಜೆಗಳು ನಿನ್ನ ಮೊದಲ ಪತನ... ನಾನು ತುಂಬಾ ಹೆಮ್ಮೆಯಿಂದ ಅದನ್ನು ರೆಕಾರ್ಡ್ ಮಾಡಿದ್ದೇನೆ. ಇದು ನಿನ್ನ ಮೊದಲ ಅಥವಾ ಕೊನೆಯ ಪತನವಲ್ಲ, ನನ್ನ ಮಗ, ಆದರೆ ನನಗೆ ಒಂದು ವಿಷಯ ಖಚಿತವಾಗಿ ತಿಳಿದಿದೆ ... ನೀನು ಯಾವಾಗಲೂ  ದೊಡ್ಡ ದಾಪುಗಾಲುಗಳನ್ನು ತೆಗೆದುಕೊಳ್ಳುತ್ತೀಯಾ ಮತ್ತು ತಲೆ ಎತ್ತಿಕೊಂಡು ನಡೆಯುತ್ತೀಯಾ... 'ಕಾರಣ ನೀನು ನನ್ನ ಹುಲಿ’ ಎಂದು ಕರೀನಾ ಕಪೂರ್​ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕ ಸೆಲೆಬ್ರಿಟಿಗಳು ಕೂಡ ಟೈಗರ್​ ತೈಮೂರ್​ ಅಲಿ ಖಾನ್​ಗೆ ವಿಶ್​ ಮಾಡುತ್ತಿದ್ದಾರೆ. ಇನ್ನೂ ಅವರ ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಶೇರ್​​ ಮಾಡುತ್ತಿದ್ದಾರೆ.ಇದನ್ನು ಓದಿ : ಕರೀನಾ ಕಪೂರ್ ಭಾವುಕರಾಗಿದ್ದು ಏಕೆ..? ಮಕ್ಕಳನ್ನು ಮಿಸ್‌ ಮಾಡ್ಕೊಂಡ ಬೆಬೋ..!

ಕೊರೊನಾಗೆ ತುತ್ತಾಗಿದ್ದ ಕರೀನಾ ಕಪೂರ್​!

ಕಳೆದ ಒಂದು ವಾರದಿಂದ ಸ್ವಯಂ ಪ್ರತ್ಯೇಕವಾಸದಲ್ಲಿದ್ದ ಕರೀನಾ ಕಪೂರ್ ಖಾನ್, ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರ ಬೆನ್ನಿಗೇ ಅವರು ತನ್ನ ಮುದ್ದು ಮಕ್ಕಳಾದ ತೈಮೂರ್ ಮತ್ತು ಜೇಯನ್ನು ಮಿಸ್ ಮಾಡಿಕೊಂಡ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದರು. ತಾನು ತನ್ನ ಮುದ್ದು ಮಕ್ಕಳನ್ನು ಎಷ್ಟು ತೀವ್ರವಾಗಿ ಮಿಸ್ ಮಾಡಿಕೊಂಡೆ ಎಂದು ಸಂದೇಶದಲ್ಲಿ ತಿಳಿಸಿರುವ ಆಕೆ, ಅದಕ್ಕಾಗಿ ಕೊರೊನಾ ವೈರಸ್ ಅನ್ನು ಶಪಿಸಿದ್ದಾರೆ. ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಆ ಸಂಕಷ್ಟದಿಂದ ಹೊರಬರಲು ಕರೀನಾ ನಿರಂತರವಾಗಿ ತಮ್ಮನ್ನು ತಾವು ಸ್ಫೂರ್ತಿಗೊಳಿಸಿಕೊಂಡಿದ್ದಾರೆ.

ಇದನ್ನು ಓದಿ : RRR ಇವೆಂಟ್​ನಲ್ಲಿ ಸಲ್ಲು​ ಬಿಗ್​ ಅನೌನ್ಸ್​ಮೆಂಟ್​: ಬರ್ತಿದೆ `ಭಜರಂಗಿ ಭಾಯ್​ ಜಾನ್’ - 2!

ಕೊರೊನಾ ನಾನು ನಿನ್ನನ್ನು ದ್ವೇಷಿಸುತ್ತೇನೆ
ಈ ಕತೆಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕರೀನಾ, “ಕೊರೊನಾ ನಾನು ನಿನ್ನನ್ನು ದ್ವೇಷಿಸುತ್ತೇನೆ…” “ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳಬೇಕಾಯಿತು ಎಂದು ಹೃದಯ ಒಡೆದು ಹೋಗಿರುವ ಎಮೋಜಿಯೊಂದಿಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ. “ಆದರೆ.. ಶೀಘ್ರವಾಗಿ ಇದನ್ನು ಮಾಡುತ್ತೇನೆ ಎಂದು ಸ್ನಾಯುಗಳನ್ನು ಹುರಿಗೊಳಿಸುವ ಎಮೋಜಿ ಹಾಕಿದ್ದರು.
Published by:Vasudeva M
First published: