ಚಿಕ್ಕೋಡಿ: ಕೊರೋನಾ 2ನೇ ಅಲೆಯ ಸಂಕಷ್ಟ ಸಮಯದಲ್ಲಿ ಜೊಲ್ಲೆ ಸಂಸ್ಥೆ ಹಲವು ಕೋವಿಡ್ ಪರಿಹಾರ ಕಾರ್ಯಗಳ ಮೂಲಕ ಮನೆ ಮಾತಾಗಿದೆ. ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕೋವಿಡ್ ರೋಗಿಗಳಿಗೆ ಜೀವದಾನ ಮಾಡುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ,ಎಲ್ಲರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ..ಇದರ ಜೊತೆಗೆ ಇತರೆ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿರುವ ಜೊಲ್ಲೆ ಕುಟುಂಬ ಆಂಬ್ಯುಲೆನ್ಸ್ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಚಿಕ್ಕೋಡಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ ಇದರ ವತಿಯಿಂದ, ಕೇಶವ ಸ್ಮೃತಿ ಟ್ರಸ್ಟ್ ಗೆ ಜನರ ಸೇವೆಗಾಗಿ ಉಚಿತವಾಗಿ ಆಂಬ್ಯುಲೆನ್ಸ್ ವಾಹನವನ್ನು ಹಸ್ತಾಂತರ ಮಾಡಲಾಯಿತು. ಇತ್ತೀಚಿಗೆ ಕೋವಿಡ್ ಸೇರಿದಂತೆ ಇತರೇ ಸಾವುಗಳ ಪ್ರಮಾಣ ಹೆಚ್ಚಾಗುತ್ತಿದೆ. ಚಿಕ್ಕೋಡಿ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮೃತದೇಹಗಳನ್ನು ಸಾಗಿಸಲು ಸಮಸ್ಯೆಯಾಗಿತ್ತು. ಈ ಸಲುವಾಗಿ ಜನರ ಸೇವೆಯಲ್ಲಿ ತೊಡಗಿರುವ ಕೇಶವ ಸ್ಮೃತಿ ಟ್ರಸ್ಟ್ ಗೆ ಈ ವೈಕುಂಠ ರಥವನ್ನು ಜೊಲ್ಲೆ ದಂಪತಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಕವಟಗಿಮಠ, ಕೇಶವ ಸ್ಮೃತಿ ಟ್ರಸ್ಟ್ ಸದಸ್ಯರು ಹಾಗೂ ಹಿರಿಯ ನ್ಯಾಯವಾದಿಗಳಾದ ಶ್ರೀ ಡಿ.ಜಿ.ಗುಂಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸತೀಶ ಅಪ್ಪಾಜಿಗೋಳ, ಶ್ರೀ ಅಮೃತ ಕುಲಕರ್ಣಿ, ಕೇಶವ ಸ್ಮೃತಿ ಟ್ರಸ್ಟ್ ಪದಾಧಿಕಾರಿಗಳು, ಬೀರೇಶ್ವರ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಹೊಸ ಗಂಡ ತಂದೇ ಬಿಟ್ಟ ಗಂಡಾಂತರ: 23 ವರ್ಷ ಯುವಕನ ಮೇಲಿನ ಮೋಹಕ್ಕೆ 6 ವರ್ಷದ ಮಗನೇ ಬಲಿಯಾದ!
ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗದೆ, ವೆಂಟಿಲೇಟರ್ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಜನ ಪರದಾಡುತ್ತಿದ್ದಾರೆ. ಇದನ್ನು ಅರಿತ ಸಚಿವೆ ಶಶಿಕಲಾ ಜೊಲ್ಲೆ ಅವರು ಕಳೆದ ವಾರ ಶಾಲೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಸಂಕಷ್ಟದಲ್ಲಿರುವ ರೋಗಿಗಳಿಗೆ ಆಸರೆಯಾಗಿ ನಿಂತಿದ್ದಾರೆ. ನಿಪ್ಪಾಣಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿಪ್ಪಾಣಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಜೊಲ್ಲೆ ಉದ್ಯೋಗ ಸಮೂಹದ ನೇತೃತ್ವದಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಸಚಿವೆ ಜೊಲ್ಲೆ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಯ ಸಿಬಿಎಸ್ ಸಿ ಶಾಲೆಯ ಕಟ್ಟಡವನ್ನೆ ಈಗ ಕೋವಿಡ್ ಕೇರ್ ಸೆಂಟರ್ ಮಾಡಿ ಬದಲಾವಣೆ ಮಾಡಿದ್ದಾರೆ. ನಿಪ್ಪಾಣಿಯಲ್ಲಿ 43 ಆರೋಗ್ಯ ಸಿಬ್ಬಂದಿ ಹಾಗೂ 6 ಜನ ವೈದ್ಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಕೋವಿಡ್ ಕೇರ್ ಸೆಂಟರ್ ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲಾ. ಎಲ್ಲಾ ವ್ಯವಸ್ಥೆಗಳನ್ನ ಶಶಿಕಲಾ ಜೋಲ್ಲೆಯೆ ಒದಗಿಸಿದ್ದಾರೆ. ಅಲ್ಲದೆ ಇನ್ನು ಕಲವು ದಾನಿಗಳು ಸಹ ಈ ಆಸ್ಪತ್ರೆಗೆ ತಮ್ಮ ಕೈಲಾದ ವ್ಯವಸ್ಥೆಯನ್ನ ಮಾಡಿದ್ದಾರೆ. ಇನ್ನು ಈ ಆಸ್ಪತ್ರೆಯನ್ನ ಸಚಿವೆ ಮುತುವರ್ಜಿ ವಹಿಸಿ ಎಲ್ಲಾ ವ್ಯವಸ್ಥೆಗಳನ್ನ ನೋಡಿಕೊಂಡು ನಿಪ್ಪಾಣಿಯಲ್ಲಿ ಇದ್ದಾಗ ತಾವೆ ಖುದ್ದು ಭೇಟಿ ನೀಡಿ ವೈದ್ಯರ ಜೊತೆ ಚರ್ಚೆ ನಡೆಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ