IPL 2021: ಐಪಿಎಲ್​ ಟಾಪ್ ರನ್ ಸರದಾರರ ಪಟ್ಟಿಯಲ್ಲಿ 6 ಭಾರತೀಯರು..!

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 227 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2021 ರಲ್ಲಿ ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸ್ಯಾಮ್ಸನ್ ಪಾತ್ರರಾಗಿದ್ದರು.

ipl 2021

ipl 2021

 • Share this:
  ಕೊರೋನಾ ಕಾರಣದಿಂದ ಐಪಿಎಲ್ 2021 ಅನ್ನು ಮುಂದೂಡಲಾಗಿದೆ. ಇದುವರೆಗೆ 29 ಪಂದ್ಯಗಳನ್ನು ಆಡಲಾಗಿದ್ದು, ಇನ್ನು ಫೈನಲ್ ಸೇರಿದಂತೆ 31 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳು ಯಾವಾಗ ನಡೆಯಲಿವೆ ಎಂಬುದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸದ್ಯಕ್ಕಂತು ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿದೆ.

  ಇನ್ನು ಆಡಿರುವ 29 ಪಂದ್ಯಗಳಲ್ಲಿ 6 ಭಾರತೀಯ ಬ್ಯಾಟ್ಸ್​ಮನ್​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೀ 350 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿ ಶಿಖರ್ ಧವನ್​ ಅಗ್ರಸ್ಥಾನದಲ್ಲಿದ್ದಾರೆ. ಶಿಖರ್ ಧವನ್ ಮೂರು ಅರ್ಧಶತಕಗಳೊಂದಿಗೆ ಒಟ್ಟು 380 ರನ್ ಗಳಿಸಿದ್ದಾರೆ.

  ಇನ್ನು ಈ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 7 ಪಂದ್ಯಗಳಲ್ಲಿ 331 ರನ್ ಗಳಿಸಿದ್ದಾರೆ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ಫಾಫ್ ಡುಪ್ಲೆಸಿಸ್ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಡುಪ್ಲೆಸಿಸ್​ 320 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ 308 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

  ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 227 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2021 ರಲ್ಲಿ ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸ್ಯಾಮ್ಸನ್ ಪಾತ್ರರಾಗಿದ್ದರು. ಪಂಜಾಬ್ ಕಿಂಗ್ಸ್ ಹಂಗಾಮಿ ನಾಯಕ ಮಾಯಾಂಕ್ ಅಗರ್ವಾಲ್ 260 ರನ್ ಗಳಿಸಿ ಆರನೇ ಸ್ಥಾನದಲ್ಲಿದ್ದರೆ, ಜೋಸ್ ಬಟ್ಲರ್ 254 ರನ್ ಗಳಿಸಿ ಏಳನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 250 ರನ್ ಬಾರಿಸಿ 8ನೇ ಸ್ಥಾನದಲ್ಲಿದ್ದರೆ, 248 ರನ್​ ಬಾರಿಸಿರುವ ಜಾನಿ ಬೈರ್‌ಸ್ಟೋವ್ 9ನೇ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಆರ್​ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ 223 ರನ್​ಗಳಿಸಿ ಹತ್ತನೇ ಸ್ಥಾನದಲ್ಲಿದ್ದಾರೆ.

  ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಮೊದಲಾರ್ಧದಲ್ಲಿ ಭಾರತದ 6 ಬ್ಯಾಟ್ಸ್​ಮನ್​ಗಳು ಟಾಪ್ 10ನಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೆ ಈ ಬಾರಿ ಆರೆಂಜ್​ ಕ್ಯಾಪ್​ ಪೈಪೋಟಿಯಲ್ಲಿದ್ದರು. ಆದರೆ ಕೊರೋನಾ ಕಾರಣದಿಂದ ಐಪಿಎಲ್​ ಅರ್ಧದಲ್ಲೇ ರದ್ದಾಗಿದೆ. ಇದಾಗ್ಯೂ ಕೊರೋನಾ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಐಪಿಎಲ್ ಟೂರ್ನಿ ನಡೆಯಲಿದ್ದು, ಯಾರಿಗೆ ಆರೆಂಜ್ ಕ್ಯಾಪ್ ಸಿಗಲಿದೆ ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ. ಹಾಗೆಯೇ ನಮ್ಮ ಚಾನೆಲ್​ನ್ನು ಸಬ್ಸ್​ಕ್ರೈಬ್ ಮಾಡಿ. ಧನ್ಯವಾದಗಳು.
  Published by:zahir
  First published: