IPL 2021: MI vs SRH: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್​​

ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಈ ಜಿದ್ದಾ ಜಿದ್ದಿ ಪಂದ್ಯವು ಚಾಂಪಿಯನ್ ಮುಂಬೈ ತಂಡಕ್ಕೆ ತನ್ನ ಪಾಯಿಂಟ್​ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಬಹಳ ಮುಖ್ಯವಾದರೆ. ಸನ್​ ರೈಸರ್ಸ್​ ತಂಡಕ್ಕೆ ಗೆಲುವಿನ ಖಾತೆ ತೆರಯಲು ಈ ಪಂದ್ಯ ಮುಖ್ಯವಾಗಲಿದೆ. ಹಾಗಾಗಿ ಇವೆರಡಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

 • Share this:
  ಇಂಡಿಯನ್​ ಪ್ರೀಮಿಯರ್​ ಲೀಗ್ 2021​ ನಡೆಯುತ್ತಿದ್ದು, ಇಂದು ಮುಂಬೈ ಇಂಡಿಯನ್ಸ್​ ಹಾಗೂ ಡೇವಿಡ್​ ವಾರ್ನರ್​ ನಾಯಕತ್ವದ ಸನ್​ರೈಸರ್ಸ್​ ತಂಡ ಮುಖಾಮುಖಿಯಾಗುತ್ತಿದೆ. ಚೆನ್ನೈನ ಚಿದಂಬರಂ ಮೈದಾನದಲ್ಲಿ  ಈ ಪಂದ್ಯ ನಡೆಯುತ್ತಿದೆ. ರೋಹಿತ್​ ಶರ್ಮಾ ನಾಯಕತ್ವದ ಮುಂಬೈ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದೆ.

  ಈ ವರ್ಷದ ಐಪಿಎಲ್ ಪ್ರಾರಂಭವಾಗಿನಿಂದ ಇವೆರಡು ತಂಡ ಎರಡು ಪಂದ್ಯವನ್ನು ಎದುರಿಸಿದೆ. ಅದರಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಮುಂಬೈ ತಂಡ ಒಂದು ಪಂದ್ಯ ಜಯಿಸಿದರೆ ಇನ್ನೊಂದು ಪಂದ್ಯ ಸೋಲೊಪ್ಪಿಕೊಂಡಿತ್ತು. ಅಂತೆಯೇ ಡೇವಿಡ್​​ ವಾರ್ನರ್​ ನಾಯಕತ್ವದ ಹೈದರಾಬಾದ್​ ತಂಡ ಎದುರಿಸಿದ ಎರಡು ಪಂದ್ಯದಲ್ಲೂ ಸೋತಿದೆ. ಹಾಗಾಗಿ ಇಂದಿನ ಪಂದ್ಯ ಹೈದರಾಬಾದ್ ತಂಡ ಬಹುಮುಖ್ಯವಾಗಿದೆ.

  ಐಪಿಎಲ್​ 2021 ಪಾಯಿಂಟ್​ ಟೇಬಲ್​ ಗಮನಿಸಿದಾಗ ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, 4 ಪಾಯಿಂಟ್​ ಪಡೆದುಕೊಂಡಿದೆ. ಅದರಂತೆ ಎರಡನೇ ಸ್ಥಾನ ಧೋನಿ ನಾಯಕತ್ವದ ಚೆನ್ನೈ ತಂಡವಿದೆ. ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್​ ಹೆಸರು ಕಾಣಿಸಿಕೊಂಡಿದ್ದು, ಇವೆರಡು ತಂಡ  2 ಪಾಯಿಂಟ್​ ಪಡೆದುಕೊಂಡಿದೆ.  ಇನ್ನು ಸನ್​​ರೈಸರ್ಸ್​​ ತಂಡ ಕೊನೆಯ 8ನೇ ಸ್ಥಾನದಲ್ಲಿದ್ದು, ಸೊನ್ನೆ ಪಾಯಿಂಟ್​ ಪಡೆದುಕೊಂಡಿದೆ.

  ಇಂದು ಚೆನ್ನೈನಲ್ಲಿ ನಡೆಯುತ್ತಿರುವ ಈ ಜಿದ್ದಾ ಜಿದ್ದಿ ಪಂದ್ಯವು ಚಾಂಪಿಯನ್ ಮುಂಬೈ ತಂಡಕ್ಕೆ ತನ್ನ ಪಾಯಿಂಟ್​ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಬಹಳ ಮುಖ್ಯವಾದರೆ. ಸನ್​ ರೈಸರ್ಸ್​ ತಂಡಕ್ಕೆ ಗೆಲುವಿನ ಖಾತೆ ತೆರಯಲು ಈ ಪಂದ್ಯ ಮುಖ್ಯವಾಗಲಿದೆ. ಹಾಗಾಗಿ ಇವೆರಡಲ್ಲಿ ಯಾವ ತಂಡ ಜಯಗಳಿಸಲಿದೆ ಎಂದು ಕಾದು ನೋಡಬೇಕಿದೆ.

  ಮುಂಬೈ ಇಂಡಿಯನ್ಸ್​ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್,  ಸೂರ್ಯಕುಮಾರ್ ಯಾದವ್,  ಹಾರ್ದಿಕ್ ಪಾಂಡ್ಯ,  ಇಶಾನ್ ಕಿಶನ್, ಕೀರನ್ ಪೊಲಾರ್ಡ್,  ಕ್ರುನಾಲ್ ಪಾಂಡ್ಯ,  ಮಾರ್ಕೊ ಜಾನ್ಸೆನ್,  ರಾಹುಲ್ ಚಹರ್,  ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ

  ಸನ್​ರೈಸರ್ಸ್​ ಹೈದರಾಬಾದ್​ ಸಂಭಾವ್ಯ ಪ್ಲೇಯಿಂಗ್ 11:  ಡೇವಿಡ್ ವಾರ್ನರ್,  ವೃದ್ಧಿಮಾನ್ ಸಹಾ, ಮನೀಶ್ ಪಾಂಡೆ,  ಜಾನಿ ಬೈರ್‌ಸ್ಟೋ / ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್,  ವಿಜಯ್ ಶಂಕರ್,  ರಶೀದ್ ಖಾನ್,  ಜೇಸನ್ ಹೋಲ್ಡರ್,  ಭುವನೇಶ್ವರ್ ಕುಮಾರ್,  ಶಹಬಾಜ್ ನದೀಮ್,  ಟಿ ನಟರಾಜನ್
  Published by:Harshith AS
  First published: