news18 Updated:April 2, 2018, 6:06 PM IST
- News18
- Last Updated:
April 2, 2018, 6:06 PM IST
ನ್ಯೂಸ್ 18 ಕನ್ನಡ
ಮುಂಬೈ(ಏ.02): ಐಪಿಎಲ್ ಆರಂಭಕ್ಕೂ ವಾರ ಮುನ್ನವೇ ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಧುಮುಕಿದೆ. ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
ಮುಂಬೈ ಇಂಡಿಯನ್ಸ್ ತಂಡ ಹೊಸ ರಿಲಾಯನ್ಸ್ ಕಾರ್ಪೋರೇಟ್ ಪಾರ್ಕ್ನಲ್ಲಿ ಮಾ.25 ರಿಂದ ತರಬೇತಿ ಪ್ರಾರಂಭಿಸಿತ್ತು. ಆದರೆ ಈಗ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ವಾಂಖೆಡೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ.
ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹೀಮ್ ಈಗಾಗಲೇ ಮುಂಬೈಗೆ ಬಂದಿಳಿದಿದ್ದು, ತಂಡದ ವಿದೇಶಿ ಆಟಗಾರರ ಪೈಕಿ ಹೆಚ್ಚಿನವರು ಏಪ್ರಿಲ್ 3 ರಂದು ಆಗಮಿಸಲಿದ್ದಾರೆ. ಮುಂಬೈ ಇಂಡಿಯನ್ಸ್ನ ದೀರ್ಘಕಾಲೀನ ಆಟಗಾರ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಬೌಲಿಂಗ್ ಕೋಚ್ ಆಗಿರುವುದು ಈ ಬಾರಿ ವಿಶೇಷ.
ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಇಂದಿನ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಐಪಿಎಲ್ ಪ್ರಾರಂಭವಾದಾಗಿನಿಂದ ಮುಂಬೈ ಇಂಡಿಯನ್ಸ್ ತಂಡ ಇಲ್ಲಿಯವರೆಗೆ 3 ಬಾರಿ ಚಾಂಪಿಯನ್ ಆಗಿದೆ.
First published:
April 2, 2018, 6:06 PM IST