ಸೌಂದರ್ಯ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗುತ್ತದೆ. ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ಸಣ್ಣ ಮೊಡವೆ ಮತ್ತು ಕಲೆಗಳು ಮುಖದ ಅಂದವನ್ನು ಹಾಳು ಮಾಡುತ್ತದೆ. ಸಣ್ಣಪುಟ್ಟ ಸುಟ್ಟ ಗಾಯಗಳ ಗುರುತುಗಳಿಂದಾಗಿ, ಚರ್ಮದ ಸೌಂದರ್ಯ ಹಾಳಾಗುತ್ತದೆ. ಯಾರೇ ಆಗಲಿ ಮುಖದ ಮೇಲೆ ಕಲೆಗಳಾದಾಗ ಅದನ್ನು ಹೋಗಲಾಡಿಸಲು ಬಹಳಷ್ಟು ಪ್ರಯತ್ನಗಳು ನಡೆಯುತ್ತವೆ. ಅಂಗಡಿಗಳಿಂದ ಹಲವು ಉತ್ಪನ್ನಗಳನ್ನು ತಂದು ಬಳಕೆ ಮಾಡಲಾಗುತ್ತದೆ. ಆದರೆ ಅದ್ಯಾವುದು ಫಲ ನೀಡಿರುವುದಿಲ್ಲ. ಇನ್ನು ಆ ಉತ್ಪನ್ನಗಳನ್ನು ಬಳಕೆ ಮಾಡುವ ಮೊದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಈ ಗಾಯಗಳಿಂದ ಮುಕ್ತಿ ಪಡೆಯಬಹುದು.
ಅರಿಶಿನವನ್ನು ಮೊಸರು ಮತ್ತು ಜೇನುತುಪ್ಪ
ಅರಿಶಿನ ಹಲವಾರು ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಒಂದು ಬಟ್ಟಲಿನಲ್ಲಿ ನೀವು 1/4 ಟೀ ಚಮಚ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ 2 ಟೀ ಚಮಚ ಮೊಸರು ಮತ್ತು 1 ಟೀಚಮಚ ಜೇನುತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಕಣ್ಣಿನ ಸುತ್ತಲಿನ ಚರ್ಮದ ಮೇಲೆ 20 ರಿಂದ 25 ನಿಮಿಷಗಳ ಕಾಲ ಹಚ್ಚಿ. ಒಣಗಲು ಬಿಡಿ . ಇದು ಕಣ್ಣಿನ ಸುತ್ತಲಿನ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನು ವಾರಕ್ಕೆಎ 3 ಬಾರಿ ಬಳಕೆ ಮಾಡುವುದು ಉತ್ತಮ.
ಅರಿಶಿನ ಮತ್ತು ಅಲೋವೆರಾ ಜೆಲ್
ಸಾಮಾನ್ಯವಾಗಿ ಮನೆ ಕೆಲಸಗಳನ್ನು ಮಾಡುವಾಗ ಸುಟ್ಟಗಾಯಗಳಾಗುತ್ತದೆ. ಅಡುಗೆ ಮನೆಯಲ್ಲಿ ಎಣ್ಣೆ, ಬಿಸಿ ಪಾತ್ರೆಗಳಿಂದ ಗಾಯಗಳು ಉಂಟಾಗುತ್ತದೆ. ಒಮ್ಮೆ ಗಾಯಗಳಾದರೆ ಅದರ ಗುರುತು ಹೆಚ್ಚು ದಿನ ಉಳಿಯುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಅಲೋವೆರಾ ಮತ್ತು ಅರಿಶಿನ ಸಹಾಯ ಮಾಡುತ್ತದೆ. ಈ ಗಾಯ ಹೆಚ್ಚು ಹಳೆಯದಾಗಿದ್ದರೆ ಸಾಸಿವೆ ಎಣ್ಣೆ ಸೇರಿಸಬಹುದು. ಒಂದು ಬಟ್ಟಲಿನಲ್ಲಿ ಸ್ವಲ್ಪ ಅರಿಶಿನ ತೆಗೆದುಕೊಂಡು ಅದಕ್ಕೆ ಅಲೋವೆರಾ ಜೆಲ್ ಹಾಕಿ ಸರಿಯಾಗಿ ಮಿಶ್ರಣ ಮಾಡಿ, ಅದನ್ನು ಸುಟ್ಟಗಾಯವಿರುವ ಜಾಗಕ್ಕೆ ಹಚ್ಚಿ, ಇದನ್ನು ನಿಯಮಿತವಾಗಿ ಮಾಡುವುದರಿಂದ ಕಲೆಗಳು ಬಹು ಬೇಗನೆ ವಾಸಿಯಾಗುತ್ತದೆ.
ಇದನ್ನೂ ಓದಿ: ಪೋಷಕಾಂಶಯುಕ್ತ ಆಹಾರ ಸೇವನೆ ಮಾಡದಿದ್ದಲ್ಲಿ ಏನೆಲ್ಲ ಸಮಸ್ಯೆಗಳಾಗುತ್ತದೆ ಗೊತ್ತಾ?
ಅರಿಶಿನ ಮತ್ತು ಸಾಸಿವೆ ಎಣ್ಣೆ
ಸುಟ್ಟ ಗಾಯದ ಗುರುತುಗಳು ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಅರಿಶಿನ ಮತ್ತು ಸಾಸಿವೆ ಎಣ್ಣೆ. ಅರಿಶಿನ ಹಲವಾರು ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಒಂದು ಚಮಚ ಅರಿಶಿನ ಮತ್ತು ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಸುಟ್ಟಗಾಯಗಳಿಗೆ ಹಾಕಬಹುದು. ಅಲ್ಲದೇ ಇದು ಕಣ್ಣಿನ ಸುತ್ತಲಿನ ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮುಖದ ಮೇಲಿನ ಕಪ್ಪುಕಲೆಗಳನ್ನು ಹೋಗಿಸಲು, ಇನ್ನೊಂದು ಉತ್ತಮ ಪರಿಹಾರವೆಂದರೆ ಕಡ್ಲೇ ಹಿಟ್ಟು ಮತ್ತು ಜೇನುತುಪ್ಪ. ಒಂದು ಬಟ್ಟಲಿನಲ್ಲಿ 2 ಚಮಚ ಕಡಲೇಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ತಕ್ಕಂತೆ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಸುಮಾರು 30 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆ 3 ಬಾರಿ ಪ್ರಯತ್ನಿಸಿ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ