HOME » NEWS » Uncategorized » HEALTH BULLETIEN 337 CASES IN SINGLE DAY IN KARNATAKA138 CORONA CASES IN BANGALORE 10 DEATHS MAK

Health Bulletien: ಒಂದೇ ದಿನ ರಾಜ್ಯದಲ್ಲಿಂದು ದಾಖಲೆಯ 337, ಬೆಂಗಳೂರಲ್ಲಿ 138 ಕೊರೋನಾ ಪ್ರಕರಣ; 10 ಸಾವು ದಾಖಲು!

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಮಾರಣಾಂತಿಕ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ಇಂದಿನ ಅಂಕಿಅಂಶಗಳು ತೆರೆದಿಟ್ಟಿದೆ.

news18-kannada
Updated:June 19, 2020, 7:25 PM IST
Health Bulletien: ಒಂದೇ ದಿನ ರಾಜ್ಯದಲ್ಲಿಂದು ದಾಖಲೆಯ 337, ಬೆಂಗಳೂರಲ್ಲಿ 138 ಕೊರೋನಾ ಪ್ರಕರಣ; 10 ಸಾವು ದಾಖಲು!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜೂನ್‌ 18); ಪ್ರತಿದಿನ ಇನ್ನೂರರ ಸರಾಸರಿಯಲ್ಲಿ ಏರುತ್ತಿದ್ದ ರಾಜ್ಯದ ಕೊರೋನಾ ಪೀಡಿತರ ಸಂಖ್ಯೆ ಇಂದು ದಾಖಲೆಯ ಮುನ್ನೂರರ ಗಡಿ ದಾಟಿದೆ. ರಾಜ್ಯದಲ್ಲಿ ಇಂದು 337 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ದಾಖಲೆಯ 138 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8281ಕ್ಕೆ ಏರಿಕೆಯಾದಂತಾಗಿದೆ ಎಂದು  ರಾಜ್ಯ ಆರೋಗ್ಯ ಇಲಾಖೆ ಇಂದು ಬಿಡುಗಡೆಗೊಳಿಸಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಿದೆ.

ಈ ಮೂಲಕ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಮಾರಣಾಂತಿಕ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ಇಂದಿನ ಅಂಕಿಅಂಶಗಳು ತೆರೆದಿಟ್ಟಿದೆ.

ನಿನ್ನೆ ಮಾರಣಾಂತಿಕ ಕೊರೋನಾ ಸೋಂಕಿಗೆ ರಾಜ್ಯದಲ್ಲಿ 12 ಜನ ಬಲಿಯಾಗಿದ್ದರು. ಇಂದು ಸಹ ಈ ಸೋಂಕಿಗೆ 10 ಜನ ಬಲಿಯಾಗಿದ್ದು ಸಾವಿನ ಸಂಖ್ಯೆ ಸಹ 112ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೊರೋನಾ ತುರ್ತು ನಿಗಾ ಘಟಕದಲ್ಲಿ 78 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, 230 ಜನ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಚ್‌ ಆಗಿದ್ದಾರೆ.

ಇದನ್ನೂ ಓದಿ : India China Face off: ಸರ್ವ ಪಕ್ಷಗಳ ಸಭೆ; ಚೀನಾ ವಿರುದ್ಧ ರಾಜತಾಂತ್ರಿಕ-ಮಿಲಿಟರಿ ಪ್ರಯತ್ನಗಳ ಒಮ್ಮತ ನಿರ್ಧಾರಕ್ಕೆ ಕೇಂದ್ರ ಒಲವು

 

ರಾಜ್ಯದಲ್ಲಿ ಇಷ್ಟು ದಿನ ವಲಸೆ ಕಾರ್ಮಿಕರು ಹಾಗೂ ನೆರೆಯ ಮಹಾರಾಷ್ಟ್ರ, ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸಿದವರಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯ ಸೋಂಕಿತರು ಕಂಡು ಬರುತ್ತಿದ್ದರು. ಆದರೆ, ಇದೀಗ ರಾಜ್ಯದ ಒಳಗೆ ಇದ್ದ ಜನಕ್ಕೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಹಾವಳಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದ್ದು, ಆತಂಕ ಮನೆ ಮಾಡಿದೆ.
 
First published: June 19, 2020, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories