HOME » NEWS » Uncategorized » GOVERNMENT KIADB LAND MISUSING IN BIDAR SESR SSBDR

ಕೈಗಾರಿಕೆಗೆ ಮೀಸಲಾದ ಸರ್ಕಾರದ ಭೂಮಿ ಇತರೆ ಬಳಕೆಗೆ, ಸರ್ಕಾರದ ಯೋಜನೆ ದುರ್ಬಳಕೆ

ಕೈಗಾರಿಕಾ ಪ್ರದೇಶದಲ್ಲಿ ಭೂಮಿಯ ಹಕ್ಕು ಪಡೆದುಕೊಂಡಿದ್ದರೆ ಬೇರೆ ಯಾವುದೇ ಉದ್ಯೋಗ ಅಥವಾ ಬೇರೆ ಉದ್ದೇಶಕ್ಕೆ ಭೂಮಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ.

news18-kannada
Updated:October 31, 2020, 5:51 PM IST
ಕೈಗಾರಿಕೆಗೆ ಮೀಸಲಾದ ಸರ್ಕಾರದ ಭೂಮಿ ಇತರೆ ಬಳಕೆಗೆ, ಸರ್ಕಾರದ ಯೋಜನೆ ದುರ್ಬಳಕೆ
ಕೈಗಾರಿಕೋದ್ಯಮಕ್ಕೆ ನೀಡಲಾದ ಭೂಮಿಯಲ್ಲಿ ಹಾಲ್​ ನಿರ್ಮಾಣ
  • Share this:
ಬೀದರ್​ (ಅ.31): ಸರ್ಕಾರ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಗಾಗಿ ಸರ್ಕಾರ ಕೈಗಾರಿಕಾ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಭೂಮಿ ಕೊಡುತ್ತದೆ. ಹೀಗೆ ಜಮೀನು ಪಡೆದವರು ಆ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸಬೇಕು. ಆದರೆ,  ಜಿಲ್ಲೆಯಲ್ಲಿ ಈ ನಿಯಮ ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)  ಜಿಲ್ಲೆಯಲ್ಲಿ ಕೈಗಾರಿಕೆ ನಡೆಸಲು ಉದ್ಯಮಿಗಳಿಗೆ ಕಡಿಮೆ ಬೆಲೆಯಲ್ಲಿ ಭೂಮಿ ನೀಡುತ್ತದೆ. ಆದರೆ, ಕೈಗಾರಿಕೆ ನಡೆಸುವುದಾಗಿ ಹೇಳಿ  ನಗರದ ನೌಬಾದ್ ಪ್ರದೇಶದಲ್ಲಿ ಜಾಗ ಪಡೆದ  ಕೆಲವು ಉದ್ಯಮಿಗಳು ಇತರೆ ಉದ್ದೇಶಕ್ಕಾಗಿ ಜಮೀನು ಬಳಸುತ್ತಿದ್ದಾರೆ. ಈ ಬಗ್ಗೆ ಮಂಡಳಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ

ಮಂಡಳಿಯಿಂದ ನಿವೇಶನ ಪಡೆದ ಮಾಲೀಕರು ಕಾರ್ಖಾನೆ ಸ್ಥಾಪಿಸಬೇಕೆಂಬ ಒಡಂಬಡಿಕೆ ಮೇರೆಗೆ ನಿವೇಶನ ನೀಡಲಾಗುತ್ತದೆ. ಕೈಗಾರಿಕೆ ನಡೆಯಬೇಕಾದ ಸ್ಥಳದಲ್ಲಿ ಬಾರ್‌-ರೆಸ್ಟೋರೆಂಟ್, ಫಂಕ್ಷನ್‌ ಹಾಲ್ ಹಾಗೂ ಮನೆಗಳನ್ನು ನಿರ್ಮಿಸಲಾಗಿದೆ.  ನಿವೇಶನ ಪಡೆಯುವ ಮುನ್ನ ಅರ್ಜಿಯಲ್ಲಿ ಎಲ್ಲಾ ನಿಯಮಗಳಿಗೆ ಒಪ್ಪಿಕೊಂಡು ಮಾಲೀಕರು ಕೈಗಾರಿಕೆ ನಡೆಸುವ ಬದಲಿಗೆ ಇತರೆ ಉದ್ಯೋಗ ನಡೆಸುತ್ತಿರುವುದು ನಿಯಮದ ಉಲ್ಲಂಘನೆ. ಈ ಬಗ್ಗೆ ಕಾನೂನು ಹೋರಾಟಕ್ಕಿಳಿಯಲು ನಗರದ ವಕೀಲರೊಬ್ಬರು ಚಿಂತನೆ ನಡೆಸಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ಕೇವಲ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಹಂಚಿಕೆ ಮಾಡಲಾಗುತ್ತದೆ. ಭೂಮಿ ಪಡೆದ ಭೂ ಮಾಲೀಕರು ಕಡ್ಡಾಯವಾಗಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬ ನಿಯಮ ಕೂಡ ಇದೆ. 15 ವರ್ಷಗಳ ಕಾಲ ನಿರಂತರ ಕಾರ್ಖಾನೆ ನಡೆಸುವ ಮಾಲೀಕರು ಕೈಗಾರಿಕಾ ಪ್ರದೇಶದಲ್ಲಿ ಪಡೆದ ಭೂಮಿಗೆ ಹಕ್ಕುದಾರರು ಆಗುತ್ತಾರೆ. ಭೂಮಿಯ ಹಕ್ಕು ಪಡೆದುಕೊಂಡಿದ್ದರೆ ಬೇರೆ ಯಾವುದೇ ಉದ್ಯೋಗ ಅಥವಾ ಬೇರೆ ಉದ್ದೇಶಕ್ಕೆ ಭೂಮಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ.

ಇದನ್ನು ಓದಿ: ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಗ್ರಾಮಸ್ಥರು

ಮುಖ್ಯವಾಗಿ ಕೈಗಾರಿಕಾ ನಿಯಮದ ಮೂಲಕ ಕೈಗಾರಿಕೆ ಉತ್ತೇಜಿಸಿ ಉದ್ಯೋಗ ಪ್ರಮಾಣ ಹೆಚ್ಚಿಸುವ ಇರಾದೆಯೂ ಇದರ ಹಿಂದಿದೆ. ಆದರೆ, ಕೈಗಾರಿಕೆ ಬದಲು ಇತರೆ ಕಟ್ಟಡ ಕಟ್ಟಿರುವುದರಿಂದ ಸರಕಾರದ ಈ ಯೋಜನೆ ದುರ್ಬಳಕೆಯಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

ಸರಕಾರ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಕಷ್ಟು ಶ್ರಮಿಸುತ್ತಿದೆ. ಕೈಗಾರಿಕೆ ಅಭ್ಯುದಯಕ್ಕಾಗಿಯೂ ಕಡಿಮೆ ವೆಚ್ಚದಲ್ಲಿ ಭೂಮಿ ನೀಡುತ್ತಿದೆ. ಆದರೆ, ಹೀಗೆ ಭೂಮಿ ಪಡೆದವರು ಸರ್ಕಾರವನ್ನು ನೇರವಾಗಿಯೇ ವಂಚಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
Published by: Seema R
First published: October 31, 2020, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading