HOME » NEWS » Uncategorized » FORMER MINISTER MB PATIL SAYS TO PEOPLE TO START DAIRY FORMING SESR MVSV

ಜಲಕ್ರಾಂತಿಯ ನಂತರ ಈಗ ಕ್ಷೀರಕ್ರಾಂತಿಯೇ ಗುರಿ; ಹೈನುಗಾರಿಕೆಗೆ ಮಾಜಿ ಸಚಿವ ಎಂ.ಬಿ. ಪಾಟೀಲ್​ ಕರೆ

ನೀರು ಹಾಗೂ ಮೇವು ಯಥೇಚ್ಛವಾಗಿರುವ ಕಾರಣ ಪ್ರತಿಯೊಬ್ಬ ರೈತರೂ ತಂತಮ್ಮ ಮನೆಗಳಲ್ಲಿ ದನ-ಕರುಗಳು, ಎಮ್ಮೆ, ಆಡುಗಳನ್ನು ಸಾಕಬೇಕು.  ಇದರಿಂದ ಪ್ರತಿಯೊಬ್ಬರ ಮನೆಯ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಅನಕೂಲವಾಗಲಿದೆ

news18-kannada
Updated:November 24, 2020, 4:35 PM IST
ಜಲಕ್ರಾಂತಿಯ ನಂತರ ಈಗ ಕ್ಷೀರಕ್ರಾಂತಿಯೇ ಗುರಿ; ಹೈನುಗಾರಿಕೆಗೆ ಮಾಜಿ ಸಚಿವ ಎಂ.ಬಿ. ಪಾಟೀಲ್​ ಕರೆ
ಕೆರೆಗೆ ಬಾಗಿನ ಅರ್ಪಿಸಿದ ಮಾಜಿ ಸಚಿವ ಎಂಬಿ ಪಾಟೀಲ್​​
  • Share this:
ವಿಜಯಪುರ (ನ. 24):   ಜಿಲ್ಲೆಯಲ್ಲಿ ಜಲಕ್ರಾಂತಿಯ ನಂತರ ಈಗ ಕ್ಷೀರಕ್ರಾಂತಿ ತಮ್ಮ ಗುರಿಯಾಗಿದೆ.  ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೈತರು ದನ-ಕರುಗಳನ್ನು ಸಾಕಿ ಕ್ಷೀರಕ್ರಾಂತಿಯಲ್ಲಿ ಭಾಗಿಯಾಗಬೇಕು ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ. ಜಿಲ್ಲೆಯ ತಮ್ಮ ಸ್ವಕ್ಷೇತ್ರ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು,  ಬಂಥನಾಳ ಶ್ರೀಗಳು, ನನ್ನ ತಂದೆ ಬಿ.ಎಂ.ಪಾಟೀಲ್‍ರು ಹಾಗೂ ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ, ಕಳೆದ ಬಾರಿ ಸಿದ್ಧರಾಮಯ್ಯನವರ ಸರಕಾರದಲ್ಲಿ ಜಲಸಂಪನ್ಮೂಲ ಸಚಿವನಾಗಿ ಐದು ವರ್ಷ ಕೆಲಸ ಮಾಡಿದ್ದೇನೆ.  ಈ ಅವಧಿಯಲ್ಲಿ ಹಗಲು ರಾತ್ರಿ ಕೆಲಸ ಮಾಡಿ ವಿಜಯಪುರ ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಗೆ ಒಳಪಡಿಸಿದ್ದೇನೆ.  ಜಿಲ್ಲೆಯನ್ನು ಬರ ಮತ್ತು ಹಿಂದುಳಿದ ಜಿಲ್ಲೆಯ ಹಣೆಪಟ್ಟಿಯಿಂದ ತೆಗೆದು ಹಾಕಿ ಸಂಪತ್ಭರಿತ ಜಿಲ್ಲೆಯನ್ನಾಗಿ ಮಾಡಿದ್ದೇನೆ.  ಈಗ ಜಲಕ್ರಾಂತಿಯ ನಂತರ ಕ್ಷೀರಕ್ರಾಂತಿಗೆ ಒತ್ತು ನೀಡಿದ್ದೇನೆ ಎಂದು ತಿಳಿಸಿದರು.

ವಿಶ್ವ ಹೈನುಗಾರಿಕೆ ದಿನ  ಜಿಲ್ಲೆಯಲ್ಲಿ ಕ್ಷೀರಕ್ರಾಂತಿಯಲ್ಲಿ ಮುಂಚೂಣಿಗೆ ತರಲು ತಾವು ಗಂಭೀರವಾಗಿ ಯೋಚನೆ ಮಾಡಿದ್ದೇವೆ. ಈಗ ನೀರು ಹಾಗೂ ಮೇವು ಯಥೇಚ್ಛವಾಗಿರುವ ಕಾರಣ ಪ್ರತಿಯೊಬ್ಬ ರೈತರೂ ತಂತಮ್ಮ ಮನೆಗಳಲ್ಲಿ ದನ-ಕರುಗಳು, ಎಮ್ಮೆ, ಆಡುಗಳನ್ನು ಸಾಕಬೇಕು.  ಇದರಿಂದ ಪ್ರತಿಯೊಬ್ಬರ ಮನೆಯ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಅನಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನು ಓದಿ: ಕಲಬುರ್ಗಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸರಿಂದ ರೇಟ್ ಫಿಕ್ಸ್; ಪ್ರಿಯಾಂಕ್ ಖರ್ಗೆ

ನಿಡೋಣಿ ಕೆರೆಗೆ ನೀರು ಹರಿಸಿದ ತಮಗೆ ಈ ದಿನ ಅತ್ಯಂತ ಸಂತೋಷದ ದಿನ.  ಈ ಕೆರೆಗೆ ನೀರು ತುಂಬಿದ ಪರಿಣಾಮ ಈಗ ಈ ಗ್ರಾಮ ಸಂಪೂರ್ಣ ನೀರಾವರಿಗೆ ಒಳಪಡುತ್ತಿದೆ.  ಇದರ ಪ್ರಯೋಜನ ಪಡೆದು ಶ್ರೀಮಂತರಾಗಿರಿ ಎಂದು ಹೇಳಿದ ಅವರು, ನೀರಾವರಿ ಯೋಜನೆಯ ಫಲವಾಗಿ  ಜಿಲ್ಲೆ ರಾಷ್ಟ್ರದಲ್ಲಿಯೇ ಸಂಪತ್ಭರಿತ ಜಿಲ್ಲೆಯಾಗಿ ಮಾರ್ಪಡಲಿದೆ ಎಂದು ತಿಳಿಸಿದರು.

ಮುಳವಾಡ ಏತನೀರಾವರಿ ಯೋಜನೆ ಮಲಘಾಣ ಪಶ್ಚಿಮ ಕಾಲುವೆ 0-62 ಕಿ. ಮೀ. ವರೆಗೆ ತಮ್ಮ ಅವಧಿಯಲ್ಲಿಯೇ ವಿತರಣಾ ಮತ್ತು ಶಾಖಾ ಕಾಲುವೆಗಳ ಕಾಮಗಾರಿಗಳ ಆರಂಭಗೊಂಡಿದ್ದವು.  ಈಗ 62-118 ಕಿ. ಮೀ. ವರೆಗೆ ಟೆಂಡರ್ ಕರೆಯಲಾಗಿದೆ.  ಕಾಲುವೆಯ ಕೊನೆಯವರೆಗೆ ಅಂದರೆ ಟೇಲ್ ಎಂಡ್ ವರೆಗೆ ಎಲ್ಲಾ ಶಾಖಾ ಕಾಲುವೆಗಳ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದರು.
Published by: Seema R
First published: November 24, 2020, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories