ios 15: ಪ್ರತಿ ಐಫೋನ್ 13 ಬಳಕೆದಾರರು ಪ್ರಯತ್ನಿಸಲೇಬೇಕಾದ 5 ಸಲಹೆಗಳು ಮತ್ತು ತಂತ್ರಗಳು..

ಆ್ಯಪಲ್ ತನ್ನ ಐಒಎಸ್ 15ನಲ್ಲಿ ಸೇರಿಸಿರುವ ವಿಶೇಷತೆ ಏನೆಂದರೆ ನಿಮ್ಮ ಡಿವೈಸ್‌ನ ಐಪಿ ವಿಳಾಸ ಮರೆ ಮಾಡುವುದಾಗಿದೆ. ಇದರಿಂದ ವೆಬ್‌ಸೈಟ್‌ಗಳು ಅಥವಾ ಟ್ರ್ಯಾಕರ್‌ಗಳನ್ನು ನೀವು ಬ್ರೌಸ್ ಮಾಡುವ ಸಮಯದಲ್ಲಿ ತಡೆಗಟ್ಟಬಹುದಾಗಿದೆ.

iphone 13 series

iphone 13 series

  • Share this:
    ಉತ್ತಮ ಬ್ಯಾಟರಿ ಹಾಗೂ ಕ್ಯಾಮೆರಾ ಅಭಿವೃದ್ಧಿಯನ್ನೊಳಗೊಂಡ ಐಫೋನ್ 13 ಸೀರೀಸ್ ಲಭ್ಯವಾಗಿದೆ. ಅತ್ಯಾಧುನಿಕ ಸಾಫ್ಟ್‌ವೇರ್ ಅಪ್‌ಡೇಟ್ ಐಒಎಸ್ 15 ಅನ್ನು ಹೊಸ ಫೋನ್‌ಗಳು ಒಳಗೊಂಡಿರುವುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ. ಆ್ಯಂಡ್ರಾಯ್ಡ್ ಬಳಕೆದಾರರೊಂದಿಗೆ ಫೇಸ್‌ಟೈಮ್ ಕಾಲ್ಸ್, ಐಮೆಸೇಜ್ ಸುಲಭ ಹಂಚಿಕೊಳ್ಳುವಿಕೆ ಹಾಗೂ ಆ್ಯಪಲ್ ಮ್ಯಾಪ್ಸ್‌ಗೆ ಅಪ್‌ಡೇಟ್‌ ಮೊದಲಾದ ಹೊಸ ಫೀಚರ್‌ಗಳನ್ನು ಐಒಎಸ್ 15 ಒಳಗೊಂಡಿದೆ. ಐಫೋನ್ 13 ನಿಮ್ಮದಾಗಿಸಿಕೊಳ್ಳುವ ಯೋಜನೆ ನಿಮ್ಮದಾಗಿಲ್ಲದಿದ್ದರೂ ಐಒಎಸ್ 15 ಅನ್ನು ನಿಮ್ಮ ಬಳಿ ಇರುವ 6ಎಸ್ ಹಾಗೂ ನಂತರದ ಆವೃತ್ತಿಯ ಡಿವೈಸ್‌ಗೂ ಪಡೆದುಕೊಳ್ಳಬಹುದಾಗಿದೆ. ಐಫೋನ್ 13 ಹಾಗೂ ಹಳೆಯ ಐಫೋನ್ ಮಾಡೆಲ್‌ಗಳಲ್ಲಿ ಮಾಡಬಹುದಾದ ಕೆಲವೊಂದು ಅಂಶಗಳನ್ನು ನಾವು ಇಲ್ಲಿ ತಿಳಿಸಿದ್ದು ಇದು ನಿಮಗೆ ಪ್ರಯೋಜನಕಾರಿಯಾಗಲಿದೆ.

    ನಿಮ್ಮ ನೋಟಿಫಿಕೇಶನ್‌ಗಳನ್ನು ಶೆಡ್ಯೂಲ್ ಮಾಡಿ:

    ಒಮ್ಮೊಮ್ಮೆ ಫೋನ್ ಆಫ್ ಮಾಡುವಷ್ಟು ಕಿರಿಕಿರಿಯನ್ನು ಈ ನೋಟಿಫಿಕೇಶನ್‌ಗಳು ಉಂಟುಮಾಡುತ್ತವೆ. ಐಒಎಸ್ ಈಗಾಗಲೇ ಅಂತರ್ನಿರ್ಮಿತ ನೋಟಿಫಿಕೇಶನ್ ಮ್ಯಾನೇಜ್‌ಮೆಂಟ್ ಟೂಲ್‌ಗಳೊಂದಿಗೆ ಬಂದಿದ್ದು ಈ ಒಎಸ್‌ನಲ್ಲಿರುವ ಫೀಚರ್ ಏನೆಂದರೆ ನಿಮಗೆ ಮುಖ್ಯವಾಗಿಲ್ಲದ ನೋಟಿಫಿಕೇಶನ್‌ಗಳನ್ನು ಡಿಲೇ ಮಾಡಬಹುದು ಹಾಗೂ ನಿಮ್ಮ ಉಳಿದ ಸಮಯದಲ್ಲಿ ನೋಡುವಂತೆ ನೀವು ಶೆಡ್ಯೂಲ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್‌ನಲ್ಲಿ ನೋಟಿಫಿಕೇಶನ್ ಹಾಗೂ ಶೆಡ್ಯೂಲ್ ಸಮ್ಮರಿಯನ್ನು ಆನ್ ಮಾಡಿ.

    ಎಲ್ಲಾ ವೆಬ್‌ಸೈಟ್‌ಗಳಿಂದ ಐಪಿ ವಿಳಾಸ ಮರೆಮಾಡಿ:

    ಆ್ಯಪಲ್ ತನ್ನ ಐಒಎಸ್ 15ನಲ್ಲಿ ಸೇರಿಸಿರುವ ವಿಶೇಷತೆ ಏನೆಂದರೆ ನಿಮ್ಮ ಡಿವೈಸ್‌ನ ಐಪಿ ವಿಳಾಸ ಮರೆ ಮಾಡುವುದಾಗಿದೆ. ಇದರಿಂದ ವೆಬ್‌ಸೈಟ್‌ಗಳು ಅಥವಾ ಟ್ರ್ಯಾಕರ್‌ಗಳನ್ನು ನೀವು ಬ್ರೌಸ್ ಮಾಡುವ ಸಮಯದಲ್ಲಿ ತಡೆಗಟ್ಟಬಹುದಾಗಿದೆ. ನಿಮ್ಮ ಬ್ರೌಸಿಂಗ್ ಸುರಕ್ಷಿತಗೊಳಿಸುವುದು ಐಒಎಸ್ 15ನಲ್ಲಿ ಗೌಪ್ಯತೆ ಫೀಚರ್‌ಗಳನ್ನು ಸುಧಾರಿಸಿರುವ ಮುಖ್ಯ ಅಂಶವಾಗಿದೆ.

    ವೆಬ್‌ಸೈಟ್‌ಗಳು ಹಾಗೂ ಟ್ರ್ಯಾಕರ್‌ಗಳಿಂದ ಐಫೋನ್‌ನಲ್ಲಿ ಐಪಿ ವಿಳಾಸ ಮರೆಮಾಡುವ ಹಂತ ಇಲ್ಲಿದೆ:

    • ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಸೆಟ್ಟಿಂಗ್ಸ್ ಲಾಂಚ್ ಮಾಡಿ

    • ಸಫಾರಿ ಟ್ಯಾಪ್ ಮಾಡಿ

    • ಹೈಡ್ ಐಪಿ ಅಡ್ರೆಸ್ (ಐಪಿ ವಿಳಾಸ ಮರೆಮಾಡಿ) ನೋಡುವವರೆಗೆ ಕೆಳಕ್ಕೆ ಸ್ಕ್ರಾಲ್ ಮಾಡಿ

    • ಟ್ರ್ಯಾಕರ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ಟ್ಯಾಪ್ ಮಾಡಿ (ಸ್ಪರ್ಶಿಸಿ)

    • ಸಫಾರಿಗೆ ಹಿನ್ನೆಲೆ ಚಿತ್ರವನ್ನು ಸೇರಿಸಿ:


    macOSನಲ್ಲಿನ ಸಫಾರಿಯಲ್ಲಿ ಸ್ಟಾರ್ಟ್ ಪೇಜ್ ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಆ್ಯಪಲ್ ಮೊದಲು ಸೇರಿಸಿತು. ಆದರೆ ಫೀಚರ್ macOSಗೆ ಮಾತ್ರ ಸೀಮಿತವಾಗಿದೆ. ಇದೀಗ ಆ್ಯಪಲ್ ಐಫೋನ್‌ನಲ್ಲಿ ಕೂಡ ಸಫಾರಿಯನ್ನು ಸುಧಾರಿಸುತ್ತಿದೆ. ಐಒಎಸ್ 15ನಲ್ಲಿ ನೀವು ಸಫಾರಿ ಆ್ಯಪ್‌ಗೆ ಹಿನ್ನೆಲೆಗಳನ್ನು ಸೇರಿಸಬಹುದಾಗಿದೆ. ಇದರಿಂದ ನೀವು ಸ್ಟಾರ್ಟ್ ಪೇಜ್ ಕಸ್ಟಮೈಸ್ ಮಾಡುವುದರೊಂದಿಗೆ ಸ್ಟಾರ್ಟ್ ಪೇಜ್‌ನಲ್ಲಿ ಡಿಸ್‌ಪ್ಲೇಯಾಗಲು ಹೊಸ ವಿಭಾಗಗಳನ್ನು ಆರಿಸಬಹುದು.

    • ನಿಮ್ಮ ಐಫೋನ್‌ನಲ್ಲಿ ಸಫಾರಿ ಲಾಂಚ್ ಮಾಡಿ

    • ಸಫಾರಿಯಲ್ಲಿ ಹೊಸ ಟ್ಯಾಬ್ ತೆರೆಯಿರಿ

    • ಕೆಳಕ್ಕೆ ಸ್ಕ್ರಾಲ್ ಮಾಡಿ ಎಡಿಟ್ ಟ್ಯಾಪ್ ಮಾಡಿ

    • ಬ್ಯಾಕ್‌ಗ್ರೌಂಡ್ ಇಮೇಜ್ ಆನ್ ಮಾಡಲು ಟಾಗಲ್ ಟ್ಯಾಪ್ ಮಾಡಿ

    • ಪ್ರಸ್ತುತ ಚಿತ್ರಗಳಲ್ಲಿ ಒಂದನ್ನು ಆರಿಸಿ ನಿಮ್ಮ ಫೋಟೋ ಲೈಬ್ರರಿಯಿಂದ ಇಮೇಜ್ ಆರಿಸಲು ದೊಡ್ಡ (ಪ್ಲಸ್)

    • ಬಟನ್ ಟ್ಯಾಪ್ ಮಾಡಿ


    ಆ್ಯಪ್‌ಗಳ ನಡುವೆ ಡ್ರ್ಯಾಗ್ ಮಾಡಿ ಹಾಗೂ ಡ್ರಾಪ್ ಮಾಡಿ:

    ಐಪ್ಯಾಡ್‌ಗಳಲ್ಲಿ ಡ್ರ್ಯಾಗ್ ಹಾಗೂ ಡ್ರಾಪ್ ವೈಶಿಷ್ಟ್ಯ 2017ರಿಂದಲೇ ಲಭ್ಯವಿದೆ ಈಗ ಆ್ಯಪಲ್ ಕೊನೆಗೂ ತನ್ನ ಐಒಎಸ್ 15ನಲ್ಲಿ ಈ ಫೀಚರ್ ಸೇರಿಸಿದೆ. ಇದು ಸಣ್ಣ ಅಪ್‌ಡೇಟ್ ಎಂದೆನ್ನಿಸಿದರೂ ಬಹುಮುಖ್ಯವಾಗಿದೆ. ನೀವು ಸರಿಸಲು ಬಯಸಿರುವ ಟೆಕ್ಸ್ಟ್ ಮೇಲೆ ಒತ್ತಿಹಿಡಿಯಿರಿ. ಈ ಸಮಯದಲ್ಲಿ ಅದು ತಿಳಿನೀಲಿ ಬಣ್ಣಕ್ಕೆ ಮಾರ್ಪಡುತ್ತದೆ. ನಿಮ್ಮ ಬೆರಳುಗಳಿಂದ ಟೆಕ್ಸ್ಟ್ ಹಿಡಿದುಕೊಳ್ಳುತ್ತಲೇ ಹೋಮ್ ಬಾರ್ ಬಳಸಿಕೊಂಡು ಆ್ಯಪ್‌ಗಳ ನಡುವೆ ಬದಲಿಸಲು ನಿಮ್ಮ ಇನ್ನೊಂದು ಕೈಬೆರಳನ್ನು ಬಳಸಿ. ಇದೀಗ ಆ ಕಂಟೆಂಟ್ ಅನ್ನು ಮೆಸೇಜಿಂಗ್ ಆ್ಯಪ್‌ನ ಟೆಸ್ಟ್ ಫೀಲ್ಡ್‌ನಲ್ಲಿ ಪೇಸ್ಟ್ ಮಾಡಿ.

    ಲಾಕ್ ಸ್ಕ್ರೀನ್‌ನಿಂದ ಸ್ಪಾಟ್‌ಲೈಟ್ ಸರ್ಚ್‌ಗಳು:

    ಆ್ಯಪ್ ಅನ್ನು ತೆರೆಯಲು ಸ್ಪಾಟ್‌ಲೈಟ್ ಸರ್ಚ್‌ಗಳು ಹೆಚ್ಚು ಪ್ರಯೋಜನಕಾರಿಯಾದುದು. ಇದೀಗ ಐಒಎಸ್ 15ನಲ್ಲಿ ನೀವು ಈ ಸ್ಪಾಟ್‌ಲೈಟ್ ಫೀಚರ್ ಬಳಸಬಹುದು. ಫೋಟೋಗಳಲ್ಲಿ ನೀವು ನಿರ್ದಿಷ್ಟ ವಿಷಯವನ್ನು ಹುಡುಕಿದಲ್ಲಿ ಅಥವಾ ನಟ ಇಲ್ಲವೇ ಸಂಗೀತಗಾರರನ್ನು ನೀವು ಹುಡುಕಿದಲ್ಲಿ ನಿಮಗೆ ವೆಬ್ ಪುಟಗಳು, ಅಪ್ಲಿಕೇಶನ್‌ಗಳು ವಿಕಿಪೀಡಿಯಾ ಲಿಸ್ಟಿಂಗ್‌ಗಳು ಮೊದಲಾದ ವಿವರ ಮಾಹಿತಿಗಳು ದೊರೆಯುತ್ತವೆ. ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ಕೆಳಕ್ಕೆ ಸ್ವೈಪ್ ಮಾಡಿ ಹಾಗೂ ಸರ್ಚ್ ಬಾರ್ ಕಂಡುಬರುತ್ತದೆ. ಇದರಿಂದ ಫೋನ್ ಅನ್‌ಲಾಕ್ ಮಾಡದೆಯೇ ನಿಮಗೆ ಬೇಕಾದ ಕಂಟೆಂಟ್ ನೀವು ಹುಡುಕಬಹುದು. ಡೀಫಾಲ್ಟ್ ಆಗಿ ಸ್ಪಾಟ್‌ಲೈಟ್ ಸರ್ಚ್ ನಿಮ್ಮ ಐಫೋನ್‌ನಲ್ಲಿ ಸಕ್ರಿಯಗೊಂಡಿದೆ.
    First published: