Diabetes: ಚಳಿಗಾಲದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು ಹೇಗೆ? ಮಧುಮೇಹಿಗಳಿಗಾಗಿ ಈ 5 ಸೂಪರ್ ಟಿಪ್ಸ್

ಭಾರತೀಯ ಆಹಾರಗಳು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ರೋಗಿಗಳು ಆಹಾರದ ಮೇಲೆ ನಿಯಂತ್ರಣ ಹೊಂದಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಳಿಗಾಲ ಮಧುಮೇಹಿಗಳಿಗೆ (diabetes) ಸವಾಲಿನ ಋತುವೇ ಸರಿ. ಪೌಷ್ಟಿಕ ಆಹಾರ (Nutrition) , ವ್ಯಾಯಾಮ, ಉತ್ತಮ ಜೀವನಶೈಲಿಯಿಂದ (Life style) ಮಾತ್ರ ಈ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಆದರೆ ಚಳಿಗಾಲದ (winters) ಚುಮು ಚುಮು ಚಳಿ, ಬೆಚ್ಚಗಿನ ಬಟ್ಟೆ, ರುಚಿಯಾದ ಆಹಾರ ಮಧು ಮೇಹಿಗಳನ್ನು ಸೋಮಾರಿಗಳನ್ನಾಗಿ ಮಾಡಿಬಿಡುತ್ತದೆ. ಅವರು ಈ ಋತುವಿನಲ್ಲಿ ಹೆಚ್ಚು ಕ್ರಿಯಾಶೀಲರಾಗದೇ ಆಲಸ್ಯ ಹೊಂದುತ್ತಾರೆ. ಹೀಗೆ ಚಳಿಗಾಲದ ಆಲಸ್ಯವು ಮಧುಮೇಹಿಗಳ ನಿಯಮಿತ ದಿನಚರಿಗೆ ಅಡ್ಡಿಪಡಿಸುತ್ತದೆ. ಈ ಬೆಳವಣಿಗೆ ಡಯಾಬಿಟಿಕ್ ಇರುವವರಿಗೆ ಅಪಾಯ ತರುವ ಸಾಧ್ಯತೆ ಹೆಚ್ಚು.

  ಹಾಗಾದರೆ ಚಳಿಗಾಲದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿವೆ ಐದು ಸರಳ ಸಲಹೆಗಳು. ಈ ಬಗ್ಗೆ OZiva ನ ಸಹ-ಸಂಸ್ಥಾಪಕ ಮತ್ತು CEO ಆರತಿ ಗಿಲ್ ಕೆಲವು ಸಲಹೆ ನೀಡಿದ್ದಾರೆ.

  1) ಸೇವಿಸುವ ಆಹಾರದ ನಿಯಂತ್ರಣ
  ಹೊರಗೆ ಚಳಿ ಇದೆ. ಈ ಚಳಿಯಲ್ಲಿ ಬಿಸಿ ಬಿಸಿ ಬಜ್ಜಿ, ಬೋಂಡಾ ಅಂತಾ ಯತೇಚ್ಛವಾಗಿ ತಿನ್ನದೇ ಏನು ಸೇವಿಸಬೇಕು ಎಂಬುದರ ಮೇಲೆ ಮಧುಮೇಹಿಗಳು ತಿಳಿದುಕೊಳ್ಳಬೇಕು. ದೇಹಕ್ಕೆ ಶಕ್ತಿಯನ್ನು ಒದಗಿಸುವ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಕೊಬ್ಬು ಪ್ರಮುಖವಾಗಿವೆ.

  ಇದನ್ನೂ ಓದಿWeight Loss Tips: ತೂಕ ಕಡಿಮೆ ಆಗ್ಬೇಕು ಅಂದ್ರೆ ಈ ಬೇಳೆಗಳನ್ನು ತಿನ್ನಿ

  ಕಾರ್ಬೋಹೈಡ್ರೇಟ್‌ಗಳು ನಿರ್ದಿಷ್ಟವಾಗಿ ರಕ್ತದಲ್ಲಿನ ಸಕ್ಕರೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ ಏಕೆಂದರೆ ಅವುಗಳು ದೇಹದಲ್ಲಿ ಗ್ಲೂಕೋಸ್ ಅಥವಾ ಸಕ್ಕರೆಯಾಗಿ ಮಾರ್ಪಾಡಾಗುತ್ತವೆ. ಸಾಮಾನ್ಯ ದೈಹಿಕ ಕಾರ್ಯಗಳಿಗೆ ಇವು ಮುಖ್ಯವಾಗಿದ್ದರೂ, ಡಯಾಬಿಟಿಕ್ ಇರುವವರು ಮ್ಯಾಕ್ರೋನ್ಯೂಟ್ರಿಯಂಟ್‌ನ ಸರಿಯಾದ ಪ್ರಮಾಣದಲ್ಲಿ ಸೇವಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

  ಭಾರತೀಯ ಆಹಾರಗಳು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ರೋಗಿಗಳು ಆಹಾರದ ಮೇಲೆ ನಿಯಂತ್ರಣ ಹೊಂದಬೇಕು. ಡಯಾಬಿಟೀಸ್ ಇರುವವರಿಗೆ ಚಳಿಗಾಲದಲ್ಲಿ ನಾರಿನಂಶ ಮತ್ತು ಪ್ರೊಟೀನ್ ಭರಿತವಾದ ಆಹಾರವನ್ನು ನೀಡಬೇಕು. ಕಾಲಕಾಲಕ್ಕೆ ತಕ್ಕಂತೆ ದೊರೆಯುವಂತಹ ಹಣ್ಣು ಮತ್ತು ತರಕಾರಿಗಳ ಮೇಲೆ ಹೆಚ್ಚು ಗಮನವನ್ನು ವಹಿಸಬೇಕು.

  2)ಸಸ್ಯ ಆಧಾರಿತ ಆಹಾರ ಆಯ್ಕೆಗಳು

  ಚಳಿಗಾಲದಲ್ಲಿ ಮಧುಮೇಹವನ್ನು ನಿರ್ವಹಿಸಲು ಆರೋಗ್ಯಕರ ಪೋಷಣೆಯೊಂದಿಗೆ ಆಹಾರವನ್ನು ನಿರ್ವಹಿಸುವುದು ಪ್ರಮುಖವಾಗಿದೆ. ಕಾಫಿ ಅಥವಾ ಟೀ ಬದಲು ಗ್ರೀನ್ ಟೀ ಕುಡಿಯಿರಿ. ಊಟ, ತಿಂಡಿಗೆ ಹೆಚ್ಚು ಸಸ್ಯ ಆಧಾರಿತ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಸಕ್ಕರೆ ಸೇರಿಸಿದ, ಪ್ಯಾಕ್ ಮಾಡಿದ ಪಾನೀಯಗಳಿಂದ ದೂರವಿರಿ.

  3) ದೈಹಿಕವಾಗಿ ಸಕ್ರಿಯರಾಗಿರಿ

  ಯಾವುದೇ ರೀತಿಯ ದೈಹಿಕ ವ್ಯಾಯಾಮವು ನಿಮ್ಮ ದೇಹದ ಆರೋಗ್ಯಕರ ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ಉತ್ತಮ ಮಾರ್ಗವಾಗಿದೆ. 15 ನಿಮಿಷಗಳ ಕಾಲ ಮಾಡುವ ಮಧ್ಯಮ ವ್ಯಾಯಾಮವು ನಿಮ್ಮ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಬೆಳಿಗ್ಗೆ ಅಥವಾ ಸಂಜೆ ಮಾಡುವ ವಾಕಿಂಗ್, ಯೋಗ ಇವು ಚಳಿಗಾಲದಲ್ಲಿ ನಿಮ್ಮನ್ನು ಆ್ಯಕ್ಟೀವ್ ಆಗಿರಲು ಸಹಕರಿಸುತ್ತವೆ.

  4)ಒತ್ತಡ ನಿರ್ವಹಣೆ

  ಕೇವಲ ಒತ್ತಡವು ಮಧುಮೇಹಕ್ಕೆ ಕಾರಣವಾಗುವುದಿಲ್ಲ, ಆದರೆ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಸೈಕೋನ್ಯೂರೋಎಂಡೋಕ್ರೈನಾಲಜಿ ಪ್ರಕಟಿಸಿದ ಅಧ್ಯಯನಗಳು ಹೆಚ್ಚಿನ ಒತ್ತಡ ಮತ್ತು ಟೈಪ್-2 ಮಧುಮೇಹದ ನಡುವೆ ಇರುವ ಸಂಬಂಧವನ್ನು ಸೂಚಿಸುತ್ತವೆ.ವಿಪರೀತ ಒತ್ತಡವು ಕಾರ್ಟಿಸೋಲ್ನ ಹೆಚ್ಚಿನ ಉತ್ಪಾದನೆಗೆ ಕಾರಣವಾಗುತ್ತದೆ. ಅದು ದೇಹವನ್ನು ಹೆಚ್ಚು ಗ್ಲೂಕೋಸ್ ಉತ್ಪಾದಿಸುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಲಘು ವ್ಯಾಯಾಮ, ಯೋಗ, ಧ್ಯಾನ ಅಥವಾ ಓದುವ ಮೂಲಕ ಒತ್ತಡವನ್ನು ನಿರ್ವಹಿಸುವುದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.

  ಇದನ್ನೂ ಓದಿ: Weight Loss Tips: ಬೆಳಗ್ಗೆ ಈ ಹಣ್ಣುಗಳನ್ನು ತಿಂದ್ರೆ ಸಣ್ಣಗಾಗ್ತೀರಂತೆ

  5) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ

  ಹವಾಮಾನದಲ್ಲಿನ ಯಾವುದೇ ಬದಲಾವಣೆಯು ಇನ್ಸುಲಿನ್ ಉತ್ಪಾದಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಚಳಿಗಾಲದಲ್ಲಿ ಹೆಚ್ಚು ಹಸಿವು ಸಾಮಾನ್ಯವಾಗಿದೆ ಏಕೆಂದರೆ ದೇಹವು ನಮ್ಮನ್ನು ಬೆಚ್ಚಗಾಗಲು ಹೆಚ್ಚು ಶಕ್ತಿಯನ್ನು ಬಳಸುತ್ತದೆ ಹೀಗಾಗಿ ಹಸಿವು ಬೇಗ ಆಗುತ್ತದೆ. ಸಂಸ್ಕರಿಸಿದ ಇನ್ಸ್ಟಂಟ್ ಆಹಾರಗಳ ಬದಲಿಗೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ದಿನವಿಡೀ ನಿಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ನಿಮ್ಮ ಆಹಾರ ಪದ್ಧತಿಯನ್ನು ಟ್ರ್ಯಾಕ್ ಮಾಡುವುದು ಉತ್ತಮ.
  First published: