ಬೆಂಗಳೂರು (ಜನವರಿ.30); ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಮುಂದಾಗಿರುವ ಬೆಂಗಳೂರು ಸಿಸಿಬಿ ಪೊಲೀಸರು ಕಳೆದ ನಾಲ್ಕು ತಿಂಗಳಿನಿಂದ ತೀವ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ ಸ್ಟಾರ್ಗಳು ಸೇರಿದಂತೆ ಪ್ರಮುಖ ರಾಜಕಾರಣಿಗಳ ಮಕ್ಕಳನ್ನೂ ಜೈಲಿಗೆ ಕಳುಹಿಸಿರುವ ಪೊಲೀಸರು ಈವರೆಗೆ ನಗರದ ಅನೇಕ ಪ್ರಮುಖ ಪೆಡ್ಲರ್ಗಳನ್ನೂ ಬಂಧಿಸಿ ಇಡೀ ಜಾಲವನ್ನು ಭೇದಿಸಿದ್ದಾರೆ. ಅಲ್ಲದೆ, ಸಾಕಷ್ಟು ಮಾಧಕ ವಸ್ತುಗಳನ್ನೂ ವಶಕ್ಕೆ ಪಡೆದಿದ್ದಾರೆ. ಇದೀಗ ಮತ್ತೆ ಕಾರ್ಯಾಚರಣೆಗೆ ಮುಂದಾಗಿರುವ ಬೆಂಗಳೂರು ಸಿಸಿಬಿ ಪೊಲೀಸರು ಇಂದು ನೈಜೀರಿಯಾ ಮೂಲದ ಇಬ್ಬರು ಹಾಗೂ ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಎನ್ಡಿಕಾಟ್ ಅಲ್ಬರ್ಟ್ ಜ್ಯೂನಿಯರ್, ಹೆಲ್ಸನ್ ಹೆನ್ರಿ ಕೊಪ್ಪಿ ಹಾಗೂ ಕೇರಳ ಮೂಲದ ಶಕೀರ್ ಮತ್ತು ಜುನೈದ್ ಬಂಧಿತ ಆರೋಪಿಗಳು. ನಗರದ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಮಾರಾಟ ಮಾಡಲು ಯತ್ನಿಸಿದ್ದ ವೇಳೆ ಇವರನ್ನು ಬಂಧಿಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಕೇಸ್: 12 ಮಂದಿ ಮೇಲೆ ಎಫ್ಐಆರ್; ಯಾರ‍್ಯಾರು ಗೊತ್ತಾ?
ಬಂಧಿತರಿಂದ ಒಂದು ಕೆ ಜಿ ಎಂಡಿಎಂಎ ಡ್ರಗ್ಸ್, 600 ಗ್ರಾಂ ಬ್ರೌನ್ ಎಂಡಿಎಂಎ ಡ್ರಗ್ಸ್, 400 ಗ್ರಾಂ ಬೈಟ್ ಎಂಡಿಎಂಎ ಡ್ರಗ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 75 ಲಕ್ಷ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಬಂಧಿತರಿಂದ ಮೂರು ಮೊಬೈಲ್ ಪೋನ್, ತೂಕದ ಮೆಷಿನ್ ಹಾಗೂ ಬೈಕ್ ಸಹ ಜಪ್ತಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ