Canada Election| ಕೆನಡಾ ಚುನಾವಣೆಯಲ್ಲಿ ಮೂರನೇ ಅವಧಿಯಲ್ಲೂ ಲಿಬರಲ್ಸ್​ ಮೇಲುಗೈ; 5 ಸ್ಥಾನಗಳಲ್ಲಿ ಪಂಜಾಬಿಗಳು ಮುನ್ನಡೆ!

2021ರ ಪ್ರಸ್ತುತ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದು, ಆರಂಭಿಕ ಹಂತದಲ್ಲಿ ಟ್ರುಡೊನ ಲಿಬರಲ್ ಪಕ್ಷವು 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಪ್ರತಿಸ್ಪರ್ಧಿ ಪಕ್ಷವಾದ ಕನ್ಸರ್ವೇಟಿವ್ಸ್ 52 ಮತ್ತು ಪಂಜಾಬ್ ಮೂಲದ ಜಗಮೀತ್ ಸಿಂಗ್ ಅವರ ಎನ್​ಡಿಪಿ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಲಿಬರಲ್ ನಾಯಕ ಜಸ್ಟಿನ್ ಟ್ರುಡೊ ಮತ್ತು NDPಯ ಜಗಮೀತ್ ಸಿಂಗ್.

ಲಿಬರಲ್ ನಾಯಕ ಜಸ್ಟಿನ್ ಟ್ರುಡೊ ಮತ್ತು NDPಯ ಜಗಮೀತ್ ಸಿಂಗ್.

 • Share this:
  ಒಟ್ಟಾವ (ಸೆಪ್ಟೆಂಬರ್​ 21); ಉತ್ತರ ಅಮೆರಿಕದ ಕೆನಡಾ (Canada Election) ಚುನಾವಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಆದರೆ, 2021ರ ಚುನಾವಣೆಯಲ್ಲೂ ಲಿಬರಲ್ಸ್​ ಪಾರ್ಟಿ (Liberals Party) ಮೇಲುಗೈ ಸಾಧಿಸಿ ಅಧಿಕಾರ ಹಿಡಿಯುವುದು ನಿಶ್ಚಳವಾಗಿದೆ. ಮುಂಜಾನೆ ಯಿಂದಲೇ ಫಲಿತಾಂಶಗಳು ಹೊರಬೀಳುತ್ತಿದ್ದು, ಪೂರ್ಣ ಪ್ರಮಾಣದ ಫಲಿತಾಂಶ ಹೊರ ಬೀಲುವ ಮುನ್ನವೇ ಬಹುಮತ ಖಚಿತವಾಗಿದೆ. ಹೀಗಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಕೆನಡಾ ಪ್ರಜೆಗಳಿಗೆ ಮತ್ತು ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ. ಈ ಅವಧಿಗೂ ಅವರೇ ಪ್ರಧಾನಿಯಾಗಿ ಮುಂದುವರೆಯುವುದು ಖಚಿತವಾಗಿದೆ.

  49 ವರ್ಷ ವಯಸ್ಸಿನ ಜಸ್ಟಿನ್ ಟ್ರುಡೊ ಅವರು 2015ರಲ್ಲಿ ಅಧಿಕಾರ ಹಿಡಿದು, ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೆನಡಾ ಪ್ರಧಾನಿಯಾದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜೆಸ್ಟಿನ್‌ ಅವರ ತಂದೆ ಪೆರ್‍ರಿ ಟ್ರುಡೋ ಕೆನಡಾ ದೇಶದ ರಾಜಕಾರಣಿ ಹಾಗೂ 15ನೇ ಪ್ರಧಾನಿಯಾಗಿದ್ದರು. 2013ರಲ್ಲಿ ಜೆಸ್ಟಿನ್‌ ಲಿಬರಲ್‌ ಪಾರ್ಟಿಯ ನಾಯಕರಾಗಿದ್ದರು. 2015ರಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿದ್ದರು.

  2019ರಲ್ಲಿ 157 ಸ್ಥಾನಗಳಲ್ಲಿ ಲಿಬರಲ್‌ ಪಾರ್ಟಿ ಗೆದ್ದಿತ್ತು. ಅಷ್ಟೇ ಸ್ಥಾನಗಳಲ್ಲಿಯೇ 2021ರ ಚುನಾವಣೆಯಲ್ಲಿಯೂ ಮುನ್ನಡೆ ಕಾಯ್ದುಕೊಂಡಿದೆ. ಬಹುಮತಕ್ಕೆ 170 ಸ್ಥಾನಗಳು ಬೇಕಿದ್ದು, 13 ಸ್ಥಾನಗಳ ಕೊರತೆ ಉಂಟಾಗಿದೆ.

  121 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕನ್ಸರ್‌ವೇಟಿವ್ ಪಕ್ಷವು 2019ರ ಚುನಾವಣೆಯಲ್ಲಿಯೂ ಇಷ್ಟೇ ಸ್ಥಾನಗಳಲ್ಲಿ ಗೆದ್ದಿತ್ತು. ಲೆಫ್ಟಿಸ್ಟ್‌ ನ್ಯೂ ಡೆಮಕ್ರಟಿಕ್‌ ಪಕ್ಷವು 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

  2021ರ ಪ್ರಸ್ತುತ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದು, ಆರಂಭಿಕ ಹಂತದಲ್ಲಿ ಟ್ರುಡೊನ ಲಿಬರಲ್ ಪಕ್ಷವು 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಪ್ರತಿಸ್ಪರ್ಧಿ ಪಕ್ಷವಾದ ಕನ್ಸರ್ವೇಟಿವ್ಸ್ 52 ಮತ್ತು ಎನ್​ಡಿಪಿ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ, ಐದು ಪಂಜಾಬಿ ಮೂಲದ ಅಭ್ಯರ್ಥಿಗಳು ಬ್ರಾಂಪ್ಟನ್ ನಲ್ಲಿ ಎಲ್ಲಾ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.

  ಕೆನಡಾ ದೇಶದಲ್ಲಿ ಕೋವಿಡ್‌ ಲಸಿಕಾ ಕಾರ್ಯ ಬಿರುಸಾಗಿ ನಡೆದಿದ್ದರಿಂದ ಟ್ರಡೋ ಮೇಲುಗೈ ಸಾಧಿಸಿದರು ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಸಂಪೂರ್ಣ ಲಸಿಕೆಯಾದ ದೇಶಗಳಲ್ಲಿ ಕೆನಡಾ ಮುಂಚೂಣಿಯಲ್ಲಿದೆ. ಲಸಿಕಾ ಕಾರ್ಯಕ್ರಮಕ್ಕಾಗಿ ನೂರು ಬಿಲಿಯನ್‌ಗೂ ಹೆಚ್ಚು ಹಣವನ್ನು ಟ್ರುಡೋ ಖರ್ಚು ಮಾಡಿದ್ದರು ಎನ್ನಲಾಗಿದೆ. ಕನ್ಸರ್‌ವೇಟಿವ್‌ ವಿಜ್ಞಾನಕ್ಕೆ ವಿರೋಧಿಯಾಗಿದೆ ಎಂದು ಟ್ರುಡೋ ಪ್ರಚಾರ ಮಾಡಿದ್ದರು.

  ಕೆನಡಾ ಚುನಾವಣೆಯಲ್ಲಿ ಪಂಜಾಬಿಗಳ ಮೇಲುಗೈ:

  ಕೆನಡಾ ಚುನಾವಣೆಯಲ್ಲಿ ಒಂದೆಡೆ ಲಿಬರಲ್ಸ್​ ಪಾರ್ಟಿ ಮೇಲುಗೈ ಸಾಧಿಸಿದ್ದರೆ ಮತ್ತೊಂದೆಡೆ ಭಾರತ ಮೂಲದ ಪಂಜಾಬಿಗಳೂ ಸಹ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಗೆಲುವಿನ ಸನಿಹದಲ್ಲಿದ್ದಾರೆ ಎಂದು ವರದಿಯಾಗಿದೆ.  ಪಂಜಾಬಿಗಳಾದ ರೂಬಿ ಸಹೋಟಾ, ಸೋನಿಯಾ ಸಿದ್ದು, ಮಣಿಂದರ್ ಸಿಂಗ್ ಸಿದ್ದು ಮತ್ತು ಕಮಲ್ ಖೇರಾ ಬ್ರಾಂಪ್ಟನ್‌ನಲ್ಲಿ ಸ್ಪರ್ಧಿಸಿದ್ದು ಮುನ್ನಡೆ ಸಾಧಿಸಿದ್ದರೆ, ಜಗದೀಪ್ ಸಿಂಗ್ ಎಂಬವರು ಮಾತ್ರ ಅಲ್ಪ ಹಿನ್ನಡೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

  ಇದನ್ನೂ ಓದಿ: Uma Bharti Controversy| 'ನಮ್ಮ ಚಪ್ಪಲಿ ಎತ್ತಲಷ್ಟೇ ಅಧಿಕಾರಿಗಳು ಯೋಗ್ಯರು'; ಉಮಾ ಭಾರತಿ ವಿವಾದಾತ್ಮಕ ಹೇಳಿಕೆ

  ಮತ್ತೊಂದೆಡೆ ಚಂದ್ರ ಆರ್ಯ ನೇಪಿಯನ್ ಮುನ್ನಡೆ ಸಾಧಿಸಿದ್ದಾರೆ. ಪಂಜಾಬ್​ ಮೂಲದ ಜಗಮೀತ್ ಸಿಂಗ್ ನೇತೃತ್ವದ ಎನ್‌ಡಿಪಿ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು 2019 ರ ಚುನಾವಣೆಯಲ್ಲಿ ಗೆದ್ದ 24 ಸ್ಥಾನಗಳಿಗಿಂತ ಮೂರು ಸ್ಥಾನ ಹೆಚ್ಚು.

  ಕೆನಡಾ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ತನ್ನ ಪ್ರತಿಸ್ಪರ್ಧಿ ಸಂಪ್ರದಾಯವಾದಿ ಅಭ್ಯರ್ಥಿ ಸುಖ್‌ಬೀರ್ ಸಿಂಗ್ ಗಿಲ್‌ನಿಂದ ನೆಕ್ ಟು ನೆಕ್ ಫೈಟ್ ಎದುರಿಸುತ್ತಿದ್ದು, ಸಜ್ಜನ್ ಈಗ ಕೇವಲ 6 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ಕೆನಡಾ ಚುನಾವಣೆಯಲ್ಲಿ ಭಾರತೀಯ ಪಂಜಾಬಿಗಳು ಸ್ಪರ್ಧಿಸಿರುವುದು ಹೆಮ್ಮೆಯ ವಿಚಾರವಾಗಿದೆ.

  ಇದನ್ನೂ ಓದಿ: West Bengal Politics| ಪಶ್ಚಿಮ ಬಂಗಾಳ ರಾಜ್ಯಸಭಾ ಉಪಚುನಾವಣೆ; ಟಿಎಂಸಿ ವಿರುದ್ಧದ ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ!

  ಕೆನಡಾದಲ್ಲಿ ಪಂಜಾಬಿಗಳ ಸಂಖ್ಯೆ ಅಧಿಕವಾಗಿದೆ. ಇದೇ ಕಾರಣಕ್ಕೆ ಪಂಜಾಬಿಗಳ ಮತಗಳನ್ನು ಸೆಳೆಯುವ ಸಲುವಾಗಿ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದ ರೈತ ಹೋರಾಟ ಚಳುವಳಿಯನ್ನು ಕೆನಡಾ ಬೆಂಬಲಿಸುವುದಾಗಿ ಬಹಿರಂಗ ಹೇಳಿಕೆ ನೀಡುವ ಮೂಲಕ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವಂತೆ ಮಾಡಿದ್ದರು.
  Published by:MAshok Kumar
  First published: