Bottle Cap Challenge: ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಕಿಲಾಡಿ ಅಕ್ಷಯ್​ ಕುಮಾರ್​- ಗೋಲ್ಡನ್​ ಸ್ಟಾರ್​ ಗಣೇಶ್​

#BottleCapChallenge: ಫಿಟ್​ ಇಂಡಿಯಾ ಚಾಲೆಂಜ್​ ನಂತರ ಈಗ ಭಾರತದಲ್ಲಿ ಮತ್ತೆ ಆರಂಭವಾಗಿದೆ ಹೊಸ ಚಾಲೆಂಜ್​. ಗಾಳಿಯಲ್ಲಿ ಹಾರಿ ಮುಚ್ಚಿದ ಬಾಟಲಿ ಮುಚ್ಚಳ ತೆಗೆಯುವ ಸವಾಲು ಇದಾಗಿದ್ದು, ಅಕ್ಷಯ್​ ಹಾಗೂ ಕನ್ನಡದ ನಟ ಗಣೇಶ್​ ಈ ಸವಾಲನ್ನು ಸ್ವೀಕರಿಸಿದ್ದಾರೆ.

Anitha E | news18
Updated:July 3, 2019, 4:31 PM IST
Bottle Cap Challenge: ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಕಿಲಾಡಿ ಅಕ್ಷಯ್​ ಕುಮಾರ್​- ಗೋಲ್ಡನ್​ ಸ್ಟಾರ್​ ಗಣೇಶ್​
ಚಾಲಟ್​ ಕ್ಯಾಪ್​ ಚಾಲೆಂಜ್​ ಸ್ವೀಕರಸಿದ ಸೆಲೆಬ್ರಿಟಿಗಳು
Anitha E | news18
Updated: July 3, 2019, 4:31 PM IST
- ಅನಿತಾ ಈ, 

ರಾಜವರ್ಧನ್​ ಸಿಂಗ್​ ರಾಥೋಡ್​ ಕೇಂದ್ರ ಕ್ರೀಡಾ ಸಚಿವರಾಗಿದ್ದಾಗ ಅವರು #FitIndiaChallenge ಗೆ ಸ್ವತಃ ತಾವೇ ವ್ಯಾಯಾಮ ಮಾಡುವ ವಿಡಿಯೋ ಮಾಡುವ ಮೂಲಕ ಚಾಲನೆ ಕೊಟ್ಟಿದ್ದರು. ಇದಕ್ಕೆ ದೇಶಸಾದ್ಯಂತ ತುಂಬಾ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದಾದ ನಂತರ ಸಾಕಷ್ಟು ಚಾಲೆಂಜ್​ಗಳು ಬಂದು ಹೋದವು. ಈಗ ಮತ್ತೆ #FitIndia ಎಂದು ಹೇಳುತ್ತಲೇ ಮತ್ತೊಂದು ಹೊಸ ಸವಾಲಿಗೆ ಚಾಲನೆ ಸಿಕ್ಕಿದೆ.

ಹೌದು, ಈಗ ಏನಿದ್ದರೂ ಸಾಮಾಜಿಕ ಜಾಲತಾಣದ ಜಮಾನ. ಇಲ್ಲಿ ಸೆಲೆಬ್ರಿಟಿಗಳು ಹಾಗೂ ಕ್ರೀಡಾಪಟುಗಳು ಏನೇ ಮಾಡಿದರೂ ಅದು ರಾತ್ರೋರಾತ್ರಿ ವೈರಲ್​ ಆಗುತ್ತವೆ. ನಟ ಫಿಟ್​ನೆಸ್​ ಗುರು ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಸದ್ಯ ಸಾಮಾಜಿಕ ಜಾಲತಾಣದ ಮೂಲಕ ಒಂದು ಫಿಟ್​ನೆಸ್​ಗೆ ಸವಾಲೆಸೆಯುವ #BottelCapChallengeಗೆ ಚಾಲನೆ ನೀಡಿದ್ದಾರೆ. ಏನಿದು ಬಾಟಲ್​ ಕ್ಯಾಪ್​ ಚಾಲೆಂಜ್​ ಅಂತೀರಾ..? ಮುಂದೆ ಓದಿ...

Bottle cap challenge by celebrities
ಗೋಲ್ಡನ್​ ಸ್ಟಾರ್​ ಗಣೇಶ್​


Bottle cap challenge by celebrities
ಕಿಲಾಡಿ ಅಕ್ಷಯ್​ ಕುಮಾರ್​


ಒಂದು ಕಾಲನ್ನು ನೆಲದ ಮೇಲೆ ಗಟ್ಟಿಯಾಗಿ ಕಾಲೂರಿ ಮತ್ತೊಂದು ಕಾಲನ್ನು ಗಾಳಿಯಲ್ಲಿ ಹಾರುತ್ತ ಮುಂದಿರುವ ಬಾಟಲಿಯ ಮುಚ್ಚಳನ್ನು ಕಾಲಿನಿಂದ ತೆಗೆಯುವುದೇ ಈ #BottelCapChallenge.

 
Loading...




ಹಾಲಿವುಡ್​ ನಟ ಜೇಸನ್​ ಸ್ಟ್ಯಾತಮ್ ಅವರು ಮೊದಲು ಈ ಚಾಲೆಂಜ್​ ಅನ್ನು ಆರಂಭಿಸಿದ್ದು, ಅದನ್ನು ಅಕ್ಷಯ್​ ಮುಂದುವರೆಸಿದ್ದಾರೆ. ಅಕ್ಷಯ್​ ಕುಮಾರ್​ ಅವರಿಗೆ ಜೇಸನ್​ ಇಷ್ಟದ ನಟರಂತೆ. ಅದಕ್ಕಾಗಿಯೇ ಅವರು ಮಾಡಿರುವ ಚಾಲೆಂಜ್​ ಅನ್ನು ಅಕ್ಷಯ್​ ಸ್ವಯಂಪ್ರೇರಿತರಾಗಿ ತೆಗೆದುಕೊಂಡಿದ್ದಾರೆ.

 



ಇನ್ನು ಅಕ್ಷಯ್​ ಕುಮಾರ್ ಅವರನ್ನು ನೋಡಿದ ಸ್ಯಾಂಡಲ್​ವುಡ್​ನ ಗಣಿ ಅಂದರೆ ಗೋಲ್ಡನ್​ ಸ್ಟಾರ್​ ಗಣೇಶ್ ಸಹ ಈ ಸವಾಲನ್ನು ಸ್ವೀಕರಿಸಿದ್ದಾರೆ. ಅಲ್ಲದೆ ಯಸ್ವಿಯಾಗಿ ಅದನ್ನು ಪೂರ್ತಿ ಮಾಡಿದ್ದು, ಅವರ ವಿಡಿಯೋ ಈಗ ವೈರಲ್​ ಆಗುತ್ತಿದೆ. ಆದರೆ ಈ ವಿಡಿಯೋವನ್ನು ಗಣೇಶ್​ ಮಾಡಿ ಬಹಳ ದಿನಗಳಾಗಿದ್ದು, ಅದನ್ನು ಈಗ ಪೋಸ್ಟ್​ ಮಾಡಿದ್ದಾರೆ.

&nbsp



ಇನ್ನು ಅಕ್ಷಯ್​ ಕುಮಾರ್​ ಅವರನ್ನು ನೋಡಿ ಪ್ರೇರಿತರಾದ ಮತ್ತೊಬ್ಬರು ಸಹ ಈ ಸ್ಟಂಟ್​ ಮಾಡಿದ್ದು, ಅದನ್ನು ಅಕ್ಷಯ್​ ರೀಟ್ವೀಟ್​ ಮಾಡಿದ್ದಾರೆ.

 



ಇನ್ನೂ #BottelCapChallenge ಅನ್ನು ಫಿಟ್​ಇಂಡಿಯಾ ಸವಾಲಿನಂತೆ ಸ್ವೀಕರಿಸಿ ಎಲ್ಲರೂ ಪ್ರಯತ್ನಿಸಿ ಎಂದು ಅಕ್ಷಯ್​ ಮನವಿ ಮಾಡಿದ್ದಾರೆ. ಇನ್ನೂ ಈ ಸವಾಲು ಸ್ಯಾಂಡಲ್​ವುಡ್​ ಸೇರಿದಂತೆ ಎಲ್ಲೆಡೆ ಎಷ್ಟು ಪರಿಣಾಮಕಾರಿಯಾಗಿ ಹಬ್ಬಲಿದೆ ಎಂದು ಕಾದು ನೋಬೇಕಷ್ಟೆ.

ಇದನ್ನೂ ಓದಿ: Pailwaan: ಕಿಚ್ಚನ ಅಭಿಮಾನಿಗಳಿಗೆ ಸಿಹಿ-ಕಹಿ ಸುದ್ದಿ: ಸುದೀಪ್​ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಲಿದೆಯಂತೆ 'ಪೈಲ್ವಾನ್'​

 
First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...