Restaurants In Rajajinagar: ರಾಜಾಜಿನಗರ ಕಡೆ ಯಾವ್ದು ಬೆಸ್ಟ್ ರೆಸ್ಟೊರೆಂಟ್​? ಲಿಸ್ಟ್ ಇಲ್ಲಿದೆ

Near Me: ಇಟಾಲಿಯನ್‌ನಿಂದ ಟೆಕ್ಸ್-ಮೆಕ್ಸ್ ಮತ್ತು ಬಾಳೆ ಎಲೆಯ ಮೇಲಿನ ಊಟದಿಂದ ಹಿಡಿದು ಇಲ್ಲಿ ಎಲ್ಲಾವೂ ಸಿಗುತ್ತದೆ. ನೀವೂ ಕೂಡ ರಾಜಾಜಿ ನಗರ ಕಡೆ ಹೋದ್ರೆ ಅಲ್ಲೇ ಸುತ್ತಮುತ್ತ ನಾವ್ ಹೇಳೊ ಸ್ಥಳಗಳಿಗೆ ವಿಸಿಟ್​ ಮಾಡಿ ಡಿಫರೆಂಟ್ ಐಟಮ್​ಗಳನ್ನು ಎಂಜಾಯ್ ಮಾಡಿ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಇಂದಿರಾನಗರ (Indiranagar) ಮತ್ತು ಎಂಜಿ ರಸ್ತೆಯಿಂದ (M.G Road) ದೂರದಲ್ಲಿರುವ ಮಲ್ಲೇಶ್ವರಂ, (Malleswaram)  ಮುಖ್ಯವಾಗಿ ಜನವಸತಿ ಪ್ರದೇಶವಾಗಿದ್ದು, ಅದರ ಹತ್ತಿರದಲ್ಲೇ ಇರುವ ರಾಜಾಜಿ ನಗರ (Rajajinagar) ಕೂಡ ಜನರ ನೆಚ್ಚಿನ ಹ್ಯಾಂಗ್ ಔಟ್​ ಸ್ಥಳ ಎನ್ನಬಹುದು,  ಇಲ್ಲಿಗೆ ಶಾಪಿಂಗ್ ಮಾಡಲು ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ಇಲ್ಲಿ ನಿಮಗೆ ತಿನ್ನಲು, ಎಂಜಾಯ್ ಮಾಡಲು ಕೂಡ ಬಹಳಷ್ಟು ಸ್ಥಳಗಳಿವೆ.  ಇಟಾಲಿಯನ್‌ನಿಂದ ಟೆಕ್ಸ್-ಮೆಕ್ಸ್ ಮತ್ತು ಬಾಳೆ ಎಲೆಯ ಮೇಲಿನ ಊಟದಿಂದ ಹಿಡಿದು ಇಲ್ಲಿ ಎಲ್ಲಾವೂ ಸಿಗುತ್ತದೆ. ನೀವೂ ಕೂಡ ರಾಜಾಜಿ ನಗರ ಕಡೆ ಹೋದ್ರೆ ಅಲ್ಲೇ ಸುತ್ತಮುತ್ತ ನಾವ್ ಹೇಳೊ ಸ್ಥಳಗಳಿಗೆ ವಿಸಿಟ್​ ಮಾಡಿ ಡಿಫರೆಂಟ್ ಐಟಮ್​ಗಳನ್ನು ಎಂಜಾಯ್ ಮಾಡಿ.  

ಚಿಲ್ಲೀಸ್​ ಅಮೆರಿಕನ್ ಗ್ರಿಲ್ ಬಾರ್

ಇದು  ಓರಾಯನ್ ಮಾಲ್‌ನ ಬಳಿ ಇದ್ದು. ನ್ಯಾಚೋಸ್, ಒನಿಯನ್ ರಿಂಗ್ಸ್ ಮತ್ತು ಸಾಸ್‌ ಸೇರಿದಂತೆ ವಿವಿಧ ರೀತಿಯ ಆಹಾರಗಳನ್ನು ಒದಗಿಸಲಿದ್ದು, ಇಲ್ಲಿ ನಿಮಗೆ ತಿನ್ನಲು ಬಹಳಷ್ಟು ಪದಾರ್ಥಗಳಿವೆ.  ಫಿಲಡೆಲ್ಫಿಯಾ ಚೀಸ್ ಸ್ಟೀಕ್ ಕೂಡ ಇದೆ. ಚೀಸ್ ಮತ್ತು ಸಾಟಿಡ್ ತರಕಾರಿಗಳಿಂದ ಅಲಂಕರಿಸಲ್ಪಟ್ಟ ಟೆಂಡರ್ಲೋಯಿನ್ ಮತ್ತು ಆಪಲ್ವುಡ್ ಅಬ್ಬಾ ಇಲ್ಲಿನ ಆಹಾರಗಳನ್ನು ಲಿಸ್ಟ್​ ಮಾಡಲು ಸಾಧ್ಯವಿಲ್ಲ. ಈ ಆಹಾರಗಳು ಎಷ್ಟು ವಿಭಿನ್ನವೂ, ಅಷ್ಟೇ ರುಚಿಕರ ಕೂಡ. ಟೆಕ್ಸಾಸ್ ಚೀಸ್ ಫ್ರೈಸ್, ಸದರ್ನ್ ಸ್ಮೋಕ್‌ಹೌಸ್ ಬರ್ಗರ್, ಟ್ರಿಪಲ್ ಡಿಪ್ಪರ್, ಮಾರ್ಗರಿಟಾಸ್ ಗಳನ್ನು ಇಲ್ಲಿ ಟ್ರೈ ಮಾಡಲೇಬೇಕು.

ವಿಳಾಸ: ಒರಾಯನ್ ಮಾಲ್, 2ನೇ ಮಹಡಿ, ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು

ಮೊಬೈಲ್ ನಂಬರ್: +918022682125

ಪಂಜಾಬ್ ಗ್ರಿಲ್

ಈ ರೆಸ್ಟೋರೆಂಟ್‌ನ ಮೆನುವಿನಲ್ಲಿ ನಿಮಗೆ ಪಂಜಾಬ್​ ಕಾಣುತ್ತದೆ ಎನ್ನಬಹುದು. ಬಾಯಿಯಲ್ಲಿ ಕರಗುವ ದಹಿ ದೇ ಕಬಾಬ್ ಮತ್ತು ಮಸಾಲೆಯುಕ್ತ ತಂದೂರಿ ಮುರ್ಗ್ ನಿಮ್ಮನ್ನ ಇಲ್ಲಿಗೆ ಪದೇ ಪದೇ ಕರೆದುಕೊಂಡು ಬರುತ್ತದೆ. ನೀವು ಅಮೃತಸರಿ ಮಲೈ ಕೋಫ್ತಾ , ಬಟರ್ ಚಿಕನ್ ಮತ್ತು ದಮ್ ಬಿರಿಯಾನಿ ಆಹಾ, ಒಮ್ಮೆ ಇಲ್ಲಿ ರುಚಿ ಸವಿದರೆ ಪದೇ ಪದೇ ಬೇಕು ಎನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ದಹಿ ದೇ ಕಬಾಬ್, ತಂದೂರಿ ಮುರ್ಗ್, ಅಜ್ವೈನಿ ಫಿಶ್ ಟಿಕ್ಕಾವನ್ನು ನೀವಿಲ್ಲಿ ಸವಿಯಲೇ ಬೇಕು.

ವಿಳಾಸ: ಓರಿಯನ್ ಮಾಲ್, ಡಾ ರಾಜ್‌ಕುಮಾರ್ ರಸ್ತೆ, ನಾಗ್ಪುರ, ರಾಜಾಜಿ ನಗರ, ಬೆಂಗಳೂರು

ಮೊಬೈಲ್ ನಂಬರ್: +919910826826

ಟೊಸ್ಕಾನೊ

ನಿಮ್ಮ ಬ್ರೇಕ್ ಸಮಯದಲ್ಲಿ, ಕ್ಯಾಶುಯಲ್ ಲಂಚ್‌ಗಾಗಿ ಅಥವಾ ಕಾರ್ಪೊರೇಟ್ ಮೀಟಿಂಗ್ ಸಮಯದ ಲಂಚ್​ಗೆ ಇದು ಸೂಕ್ತ ಸ್ಥಳ ಎನ್ನಬಹುದು. ಹಲವಾರು ಜನರು ಈ ಸ್ಥಳವನ್ನು ಶಿಫಾರಸು ಮಾಡಿದ್ದಾರೆ ಕೂಡ. ಇದು ಬೆಂಗಳೂರಿನ ಆಹಾರ ಪ್ರಿಯರಲ್ಲಿ ಜನಪ್ರಿಯವಾಗಿರುವ ರೆಸ್ಟೋರೆಂಟ್​ ಆಗಿದ್ದು,  ಸಿಹಿ ಆಲೂಗಡ್ಡೆ ಕ್ರೋಕ್ವೆಟ್‌ಗಳು, ಮಿನೆಸ್ಟ್ರೋನ್ ಸೂಪ್ ಮತ್ತು ಕ್ಯಾಲಮರಿ ಮತ್ತು ಪ್ರಾನ್ ಫ್ರಿಟರ್‌ಗಳನ್ನು ಸವಿಯಲು ಜನ ಕ್ಯೂ ನಿಲ್ಲುತ್ತಾರೆ. ಪೋರ್ಕ್ ಚೊರಿಜೊ ರಿಸೊಟ್ಟೊ, ಸ್ಪಿನಾಚ್ ಮತ್ತು ರಿಕೊಟ್ಟಾ ರವಿಯೊಲಿ ಮತ್ತು ರೋಸ್ಮರಿ ಬೀಫ್ ಫಿಲೆಟ್ ಸ್ಟೀಕ್ ಹೀಗಿ ಇಲ್ಲಿನ ಮೆನುವಲ್ಲಿ ಹಲವಾರು ಆಯ್ಕೆಗಳಿದ್ದು, ಒಮ್ಮೆ ಟ್ರೈ ಮಾಡಲೇಬೇಕು.

ವಿಳಾಸ: ಒರಿಯನ್ ಮಾಲ್, ಫಸ್ಟ್  ಫ್ಲೋರ್, ಬ್ರಿಗೇಡ್ ಗೇಟ್ವೇ, ರಾಜಾಜಿ ನಗರ, ಬೆಂಗಳೂರು

ಮೊಬೈಲ್ ನಂಬರ್:  +918022682055

ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಸ್ಪೈಸಿ ಬಾರ್ಬಿಕ್ಯೂ ಸವಿಯಲು ಬೆಂಗಳೂರಿನ ಈ ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

1947

ಶುದ್ಧ ಆಹಾರದ ಆನಂದವನ್ನು ಅನುಭವಿಸಬೇಕೆ? ಹಾಗಾದ್ರೆ 1947 ರಲ್ಲಿ ಬಫೆ ಟೇಬಲ್ ಅನ್ನು ಆಯ್ಕೆ ಮಾಡಿ ಎಂಜಾಯ್ ಮಾಡಿ. ಡೋಕ್ಲಾದಿಂದ ದಾಲ್ ತಡ್ಕಾವರೆಗೆ, ನೀವು ಉತ್ತರ ಭಾರತದ ಅತ್ಯುತ್ತಮ ಆಹಾರಗಳನ್ನು ಇಲ್ಲಿ ಸವಿಯಬಹುದು. ತಂದೂರಿ ಕುಂಭ್, ಪನೀರ್ ಪಾಪ್ಡಿ, ಸರ್ಸನ್ ಕಾ ಸಾಗ್ ಮತ್ತು ಕಾಶ್ಮೀರಿ ದಮ್ ಆಲೂ ಹೀಗೆ ಇಲ್ಲಿ ಟ್ರೈ ಮಾಡಬೇಕಿರುವುದು ಬಹಳಷ್ಟಿದೆ.

ವಿಳಾಸ: ಬಿಂದು ಗ್ಯಾಲಕ್ಸಿ, 5, 2, 1ನೇ ಮುಖ್ಯ ರಸ್ತೆ, ರಾಜಾಜಿನಗರ, ಬೆಂಗಳೂರು, ಕರ್ನಾಟಕ 560079

ಮೊಬೈಲ್ ನಂಬರ್: 080 4132 1947

ಫ್ರೆಶ್ ಮೆನು

ತುಂಬಾ ಸ್ವಚ್ಛವಾಗಿರುವ ಈ ಕೆಫೆ ಒಮ್ಮೆ  ಭೇಟಿ ನೀಡಿದವರನ್ನು ಪದೇ ಪದೇ ಕರೆಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಇಲ್ಲಿನ ಕಾಫಿಯ ಪರಿಮಳ ಮತ್ತು ರುಚಿ ಇಷ್ಟವಾಗದೇ ಇರದು.  ಹಾಗೆಯೇ ಇಲ್ಲಿನ ಆಹಾರಗಳ ಬಗ್ಗೆ ಮಾತನಾಡಲು ಹೋದರೆ ಅವುಗಳ ರುಚಿಯನ್ನು ವರ್ಣಿಸುವುದು ಸಹ ಅಸಾಧ್ಯ. ಇಲ್ಲಿನ ಸ್ಯಾಂಡ್​ವಿಚ್​​ ಅನ್ನು ನೀವು ಮಿಸ್​ ಮಾಡ್ದೇ ಟ್ರೈ ಮಾಡಲೇಬೇಕು.  ಅಲ್ಲದೇ ಇಲ್ಲಿ ಬನ್ನಿ ಚೌ, ಮ್ಯಾಕ್ ಎನ್ ಚೀಸ್ ಮತ್ತು ಕೆನೆ ಪಾಲಕ ಪಾಸ್ತಾ, ರಟಾಟೂಲ್ ಕ್ರಿಸ್ಪಿ ಸ್ಯಾಂಡ್ವಿಚ್ ಟ್ರೈ ಮಾಡಲೇಬೇಕು.

ಇದನ್ನೂ ಓದಿ: ಮಲ್ಲೇಶ್ವರಂನ ಟಾಪ್​ 5 ಕೆಫೆಗಳು ಇದೇ ನೋಡಿ, ಆ ಕಡೆ ಹೋದ್ರೆ ತಪ್ಪದೇ ವಿಸಿಟ್ ಮಾಡಿ

ವಿಳಾಸ: ಮಣಪ್ಪುರಂ ಗೋಲ್ಡ್ ಲೋನ್  ಮೇಲೆ, ರಾಗಿಣಿ ಭವನ, ನಂ.75, ಡಾ. ರಾಜ್‌ಕುಮಾರ್ ರಸ್ತೆ, 1ನೇ ಮುಖ್ಯ ರಸ್ತೆ, ರಾಜಾಜಿನಗರ, ಬೆಂಗಳೂರು, ಕರ್ನಾಟಕ 560010

ಮೊಬೈಲ್ ನಂಬರ್: 080 4042 4242
Published by:Sandhya M
First published: