Pagal Lover: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಗೆ 18 ಬಾರಿ ಇರಿದ ಪಾಗಲ್​ ಪ್ರೇಮಿ!

Pagal Lover: ಮದುವೆಯಾಗಲು ನಿರಾಕರಿಸಿದ ಕಾರಣ ಬಸವರಾಜ್(Basavaraj) ಎಂಬ 23 ವರ್ಷದ ವ್ಯಕ್ತಿ ಮಹಿಳೆಗೆ 18 ಬಾರಿ ಇರಿದಿ(Stabbed)ದ್ದಾನೆ. ಈ ಪ್ರಕರಣ ಕೇಳಿ ಮುತ್ತಿನ ನಗರಿ ಹೈದರಾಬಾದ್‌ ಬೆಚ್ಚಿ ಬಿದ್ದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತಾನು ಇಷ್ಟಪಟ್ಟ ಹುಡುಗಿ ತನ್ನನ್ನೂ ಇಷ್ಟಪಡಲೇಬೇಕೆಂದು ಬಹುತೇಕ  ಯುವಕರು, ಪುರುಷರು ಅಂದುಕೊಳ್ಳುತ್ತಾರೆ. ತಾನು ಪ್ರೀತಿಸಿದ ಹುಡುಗಿ ತನ್ನನ್ನೂ ಪ್ರೀತಿಸಬೇಕು, ಮದುವೆ(Marriage)ಯಾಗಬೇಕೆಂದು ಕೆಲವರಂತೂ ಎಂಥಹ ಮಟ್ಟಕ್ಕಾದರೂ ಇಳಿಯುತ್ತಾರೆ. ಒಂದು ವೇಳೆ ಹುಡುಗಿ ಇದನ್ನು ತಿರಸ್ಕರಿಸಿದರೆ(Rejected), ಹುಡುಗಿಯರ ಮುಖದ ಮೇಲೆ ಆ್ಯಸಿಡ್(Acid) ಎರಚುವ ಅಥವಾ ದೈಹಿಕ ಹಾನಿ(Physical Damage) ಮಾಡುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಕೊಲೆ(Murder) ಮಾಡುವುದಕ್ಕೂ ಹೇಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದೇ ರೀತಿ ಹೈದರಾಬಾದ್‌(Hyderabad) ಹೊರವಲಯದ LB ನಗರ ಪ್ರದೇಶದಲ್ಲಿಇತ್ತೀಚೆಗೆ ಸಂತ್ರಸ್ತೆ ಮದುವೆಯಾಗಲು ನಿರಾಕರಿಸಿದ ಕಾರಣ ಬಸವರಾಜ್(Basavaraj) ಎಂಬ 23 ವರ್ಷದ ವ್ಯಕ್ತಿ ಮಹಿಳೆಗೆ 18 ಬಾರಿ ಇರಿದಿ(Stabbed)ದ್ದಾನೆ. ಈ ಪ್ರಕರಣ ಕೇಳಿ ಮುತ್ತಿನ ನಗರಿ ಹೈದರಾಬಾದ್‌ ಬೆಚ್ಚಿ ಬಿದ್ದಿದೆ.


ಬೇರೆಯವನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಅಟ್ಯಾಕ್​!

ಕ್ರೂರವಾಗಿ ಇರಿತಕ್ಕೊಳಗಾದ ಸಂತ್ರಸ್ಥೆಯನ್ನು 20 ವರ್ಷದ ಶಿರೀಶಾ ಎಂದು ಗುರುತಿಸಲಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಗ್ರೇಟರ್ ಹೈದರಾಬಾದ್‌ನ ಹಸ್ತಿನಾಪುರಂನ ಯುವತಿಯ ಸಂಬಂಧಿಕರ ನಿವಾಸದಲ್ಲಿ ಈ ದಾರುಣ ಘಟನೆ ನಡೆದಿದೆ. ಆರೋಪಿ ಮಹಿಳೆಯ ಗೆಳೆಯ ಎನ್ನಲಾಗಿದೆ. ತನ್ನನ್ನು ಮದುವೆಯಾಗಲು ನಿರಾಕರಿಸಿ, ಕೆಲ ತಿಂಗಳ ಹಿಂದೆ ಶ್ರೀಧರ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಆರೋಪಿ ಬಸವರಾಜ ಮಹಿಳೆಯ ಮೇಲೆ ಕೋಪಗೊಂಡಿದ್ದ, ದ್ವೇಷ ಹೊಂದಿದ್ದ ಎಂದು ತಿಳಿದುಬಂದಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ವಿಕಾರಾಬಾದ್ ಜಿಲ್ಲೆಯ ದೌಲತಾಬಾದ್ ಮೂಲದವರಾಗಿದ್ದು, ಇಬ್ಬರೂ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಕೊನೆ  ಬಾರಿ ಭೇಟಿಯಾಗು ಎಂದಿದ್ದ ಪಾಗಲ್​!

ನವೆಂಬರ್​ 10 ಬುಧವಾರದಂದು ಆರೋಪಿ ಬಸವರಾಜ್‌ ಹಸ್ತಿನಾಪುರಂನಲ್ಲಿರುವ ಸಂತ್ರಸ್ತೆಯ ಸಂಬಂಧಿಕರ ಮನೆಗೆ ಹೋಗಿದ್ದರು. ಕೊನೆಯ ಬಾರಿಗೆ ಭೇಟಿ ಮಾಡಲೆಂದು ಬಸವರಾಜ್‌ ಹೋಗಿದ್ದ ಎಂದು ತಿಳಿದುಬಂದಿದೆ. ಆದರೆ, ಭೇಟಿಯಾದಾಗ ಇಬ್ಬರ ನಡುವೆ ವಾಗ್ವಾದ ನಡೆದು ತರಕಾರಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಕೈ, ಕುತ್ತಿಗೆ ಮತ್ತು ಬೆನ್ನಿನ ಮೇಲೆ 18 ಇರಿತದ ಗಾಯಗಳಾಗಿವೆ. ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನು ಓದಿ : 4 ಯುವತಿಯರ ಜೊತೆ ಲವ್ವಿ-ಡವ್ವಿ, ಎಲ್ಲರಿಗೂ ವಿಷಯ ತಿಳಿದಿದ್ದಕ್ಕೆ ವಿಷ ಕುಡಿದ ಯುವಕ!

3 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ!

ಯುವತಿ ಮತ್ತು ಬಸವರಾಜ್‌ ವಿಕಾರಾಬಾದ್ ಜಿಲ್ಲೆಯ ದೌಲತಾಬಾದ್ ಪ್ರದೇಶದವರು. ಅವರು ಕಳೆದ 3 ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ವರದಿಯಾಗಿದ್ದು, ಆದರೆ ಅವರ ಕುಟುಂಬವು ಅವರಿಬ್ಬರ ಮದುವೆ ಮಾಡಲು ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ. ಮಹಿಳೆಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೂ ಆರೋಪಿ ಆಕೆಯೊಂದಿಗೆ ಸಂಬಂಧ ಮುಂದುವರಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಮಾಡೆಲ್​ ಮೋನ ರೈ ಹತ್ಯೆ, ಕೊನೆಗೂ ಕೊಲೆಯ ಹಿಂದಿನ ಮಾಸ್ಟರ್​​ ಮೈಂಡ್​ ಲಾಕ್​!

ಪೊಲೀಸರ ವಶಕ್ಕೆ ಪ್ರಿಯಕರ!

ತನ್ನನ್ನು ಮದುವೆಯಾಗಲ್ಲ ಎಂದಿದ್ದಕ್ಕೆ ಪಾಗಲ್​ ಪ್ರೇಮಿ, ಯುವತಿಗೆ 18 ಬಾರಿ ಇರಿದಿದ್ದಾನೆ. ಇದರಿಂತ ತೀವ್ರ ಗಾಯಗೊಂಡಿರುವ ಯುವತಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಯುವಕ ಬಸವರಾಜ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307 ಕೊಲೆ ಯತ್ನ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರೀತಿಸಿ ಮದುವೆಯಾಗಬೇಕೆಂದು ಕನಸು ಕಂಡಿದ್ದವ, ಈ ರೀತಿಯ ಕೃತ್ಯ ನಡೆಸಿ ಕಂಬಿ ಹಿಂದೆ ಸೇರಿದ್ದಾನೆ. ಅತ್ತ ಪೋಷಕರ ಮಾತಿಗೆ ಬೆಲೆ ಕೊಟ್ಟು, ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಒಟ್ಟಿನಲ್ಲಿ ಒಮ್ಮೆ ಇಬ್ಬರ ನಡುವೆ ಪ್ರೀತಿ ಇಲ್ಲ ಅಂದರೆ, ಈ ರೀತಿ ಮಾಡುವ ಬದಲು ಅವರವರ ಪಾಡಿಗೆ ಬಿಟ್ಟು, ತಮ್ಮ ಜೀವನ ನೋಡಿಕೊಳ್ಳುವುದು ಉತ್ತಮ.
Published by:Vasudeva M
First published: