ಬೆಂಗಳೂರು: ಬಲಿಜ ಸಮುದಾಯಕ್ಕೆ ʻ2ಎʼ ಪೂರ್ಣಪ್ರಮಾಣದ ಮೀಸಲಾತಿ ನೀಡಬೇಕು ಹಾಗೂ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಬಲಿಜ ಸಮುದಾಯದ ಶ್ರೀಗಳಾದ ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿಗಳಾದ ಜಯಶ್ರೀನಿವಾಸನ್ ಗುರೂಜಿ, ದಕ್ಷಿಣ ಶಿರಡಿ ಇಂಟರ್ನ್ಯಾಷನಲ್ ಪೀಠಾಧ್ಯಕ್ಷರಾದ ಶ್ರೀ ಸಾಯಿ ರಾಮ್ಪ್ರಸಾದ್ ಗುರೂಜಿ ಮತ್ತು ರಾಮೋಹಳ್ಳಿಯ ನಾಗದುರ್ಗ ಪೀಠದ ಪೀಠಾಧ್ಯಕ್ಷರಾದ ಡಾ.ಶಕ್ತಂ ಶ್ರೀ ಶಕ್ತಿ ಬಾಲಮ್ಮ ಸ್ವಾಮೀಜಿ ಯವರು ರಾಜ್ಯ ಸರ್ಕಾರವನ್ನ ಆಗ್ರಹಿಸಿದ್ದಾರೆ.
ಬಲಿಜ ಸಮುದಾಯಕ್ಕೆ ʻ2ಎʼ ಪೂರ್ಣಪ್ರಮಾಣದ ಮೀಸಲಾತಿ ನೀಡಬೇಕು ಹಾಗೂ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಬಲಿಜ ಸಮುದಾಯದ ಶ್ರೀಗಳಾದ ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿಗಳಾದ ಜಯಶ್ರೀನಿವಾಸನ್ ಗುರೂಜಿ, ದಕ್ಷಿಣ ಶಿರಡಿ ಇಂಟರ್ನ್ಯಾಷನಲ್ ಪೀಠಾಧ್ಯಕ್ಷರಾದ ಶ್ರೀ ಸಾಯಿ ರಾಮ್ಪ್ರಸಾದ್ ಗುರೂಜಿ ಮತ್ತು ರಾಮೋಹಳ್ಳಿಯ ನಾಗದುರ್ಗ ಪೀಠದ ಪೀಠಾಧ್ಯಕ್ಷರಾದ ಡಾ.ಶಕ್ತಂ ಶ್ರೀ ಶಕ್ತಿ ಬಾಲಮ್ಮ ಸ್ವಾಮೀಜಿ ಯವರು ರಾಜ್ಯ ಸರ್ಕಾರವನ್ನ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು 40 ಲಕ್ಷ ಬಲಿಜ ಸಮುದಾಯದ ಜನರಿದ್ದಾರೆ. ಈ ಹಿಂದೆ ಬಲಿಜ ಸಮುದಾಯ ʻ2ಎʼ ಮೀಸಲಾತಿಯನ್ನ ಹೊಂದಿತ್ತು. ಆದರೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಅಧಿಕಾರಾವಧಿಯಲ್ಲಿ ಏಕಾಏಕಿ ʻ2ಎʼ ಮೀಸಲಾತಿಯನ್ನ ಹಿಂತೆಗೆದುಕೊಳ್ಳಲಾಗಿತ್ತು. ಆ ನಂತರ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಈ ಹಿಂದಿನ ಕಾಲಾವಧಿಯಲ್ಲಿ ಬಲಿಜ ಸಮುದಾಯಕ್ಕೆ ವಿದ್ಯಾಭ್ಯಾಸಕ್ಕೆ ʻ೨ಎʼ ಮೀಸಲಾತಿಯನ್ನು ನೀಡಿ, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ʻ2ಎʼ ಮೀಸಲಾತಿಯನ್ನ ನೀಡುವುದಾಗಿ ಆಶ್ವಾಸನೆ ನೀಡಿರುತ್ತಾರೆ.
ಆದರೆ ಆ ನಂತರ ಅವರ ಕೊಟ್ಟ ಮಾತಿನಂತೆ ಬಲಿಜ ಸಮುದಾಯಕ್ಕೆ ʻ2ಎʼ ಪೂರ್ಣ ಪ್ರಮಾಣದ ಮೀಸಲಾತಿಯನ್ನ ನೀಡಿರುವುದಿಲ್ಲ. ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ʻ2ಎʼ ಮೀಸಲಾತಿ ಇದೆ. ಉದ್ಯೋಗದಲ್ಲಿ ಮೀಸಲಾತಿ ಸಿಗದಿರುವುದರಿಂದ ಲಕ್ಷಾಂತರ ಬಲಿಜ ಯುವಕ ಯುವತಿಯರು ಪ್ರತಿಭೆ ಇದ್ದರೂ ಕೆಲಸ ಸಿಗದೆ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.
ಸಾಮಾಜಿಕ ಕ್ರಾಂತಿಯ ಮೂಲಪುರುಷ ಮಹಾತ್ಮ ಜ್ಯೋತಿ ಬಾಪುಲೆ, ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ, ಕಾಲಜ್ಞಾನ ರಚಿಸಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕೈವಾರ ತಾತಯ್ಯ, ವಿಜಯನಗರ ಸಾಮ್ರಾಜ್ಯಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಶ್ರೀಕೃಷ್ಣದೇವರಾಯರಂತಹ ಮಹಾನ್ ವ್ಯಕ್ತಿಗಳನ್ನ ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಬಲಿಜ ಸಮುದಾಯದ್ದು.
ಇದನ್ನೂ ಓದಿ : ಬಳ್ಳಾರಿ ಬಂದ್, ಅತ್ತಿಬೆಲೆ ಗಡಿ ಬಂದ್, ಕಾರ್ಮಿಕರ ಮುಷ್ಕರ, ಕ್ಯಾಬ್ ಚಾಲಕರ ಪ್ರತಿಭಟನೆ
ಇಂದು ಈ ಸಮುದಾಯದ ಬಗ್ಗೆ ಆಳುವ ಸರ್ಕಾರಗಳು ನಿರ್ಲಷ್ಯ ವಹಿಸಿರುವುದರಿಂದ ಬಲಿಜ ಜನರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಹಲವಾರು ಸಂಕಷ್ಟಗಳನ್ನ ಎದುರಿಸುವಂತಾಗಿದೆ. ಬಲಿಜ ಸಮುದಾಯದ ಅಭಿವೃದ್ದಿಯನ್ನ ಮರೆತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಬಲಿಜ ಸಮುದಾಯಕ್ಕೆ ʻ2ಎʼ ಪೂರ್ಣ ಪ್ರಮಾಣದ ಮೀಸಲಾತಿ ನೀಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ