Viral News: 6 ವರ್ಷದ ಮಗು ತನ್ನ ಅಪ್ಪನೊಂದಿಗೆ ಯಾವ 'ಒಪ್ಪಂದ' ಮಾಡಿಕೊಂಡಿದೆ ನೋಡಿ!

ಈಗಿನ ಕಾಲದ ಮಕ್ಕಳೆಲ್ಲ ತುಂಬಾ ಸ್ಮಾರ್ಟ್. ಅವರು ಕೆಲವೊಮ್ಮೆ ದೊಡ್ಡವರನ್ನೂ ಮೀರಿಸ್ತಾರೆ. ಹಾಗಿದ್ರೆ 6ರ ಈ ಪುಟ್ಟ ಪೋರ ಮಾಡಿದ್ದೇನು? ಇಲ್ಲಿದೆ ತಮಾಷೆಯ ಪ್ರಸಂಗ...

ವೈರಲ್ ಆಗಿರುವ ತಂದೆ-ಮಗನ ಒಪ್ಪಂದ ಪತ್ರ

ವೈರಲ್ ಆಗಿರುವ ತಂದೆ-ಮಗನ ಒಪ್ಪಂದ ಪತ್ರ

  • Share this:
ನಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದು (Kids), ತುಂಬಾನೇ ತುಂಟಾಟ (Naughtiness) ಮಾಡುತ್ತಿದ್ದರೆ ನಾವು ಅವುಗಳಿಗೆ ಸುಮ್ಮನೆ ಕುಳಿತರೆ ನಿನಗೆ ಬೇಕಾದ್ದನ್ನು ಕೊಡಿಸುತ್ತೇನೆ ಎಂದು ಹೇಳಿ ಅವರನ್ನು ಸುಮ್ಮನೆ ಕೂರಿಸುವ ಅನೇಕ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಈಗಿನ ಮಕ್ಕಳು ತುಂಬಾನೇ ಬುದ್ದಿವಂತರು (Samrt).  ಹಾಗೆಲ್ಲಾ ಬಾಯಿ ಮಾತಲೆಲ್ಲ ಸುಮ್ಮನೆ ಕುಳಿತುಕೊಳ್ಳುವುದೇ ಇಲ್ಲ. ಅವುಗಳು ಒಮ್ಮೆ ಹಟ ಹಿಡಿದರೆ ಸಾಕು ಅವರಿಗೆ ಬೇಕಾದ್ದನ್ನು ನಾವು ಕೊಡಿಸುವವರೆಗೆ ಅವುಗಳು ಸುಮ್ಮನೆ ಇರುವುದೇ ಇಲ್ಲ. ಇಲ್ಲಿ ನೋಡಿ ಅಂತಹದೇ ಒಂದು ಘಟನೆ ನಡೆದಿದ್ದು, 6 ವರ್ಷದ (6 Years Old Boy) ಹುಡುಗನೊಬ್ಬ ಇತ್ತೀಚೆಗೆ ತನ್ನ ತಂದೆಯೊಂದಿಗೆ (Father) ತನ್ನ ದೈನಂದಿನ ವೇಳಾಪಟ್ಟಿ (Time Table) ಮತ್ತು ಕಾರ್ಯಕ್ಷಮತೆ ಸಂಬಂಧಿತ ಬೋನಸ್ (Bonus) ಕೊಡಬೇಕು ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದಾನೆ. ಏನಿದು ತಂದೆ ಮತ್ತು ಮಗನ ನಡುವಿನ ಒಪ್ಪಂದ ಅಂತೀರಾ? ಈ ಲೇಖನ ನೀವು ಒಮ್ಮೆ ಪೂರ್ತಿಯಾಗಿ ಓದಿ, ನಿಮಗೆ ಅರ್ಥವಾಗುತ್ತದೆ.

ಟ್ವಿಟ್ಟರ್‌ನಲ್ಲಿ ವೈರಲ್ ಆಯ್ತು ಒಪ್ಪಂದ ಪತ್ರ

ಟ್ವಿಟ್ಟರ್‌ ಬಳಕೆದಾರ ಬಾಟ್ಲಾ ಜಿ ಎನ್ನುವವರು ತಮ್ಮ 6 ವರ್ಷದ ಮಗ ಅಬೀರ್‌ನೊಂದಿಗೆ ಸಹಿ ಮಾಡಿದ ಕೈಬರಹದ ಒಪ್ಪಂದದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಒಪ್ಪಂದವು ಪುಟ್ಟ ಹುಡುಗನ ದೈನಂದಿನ ವೇಳಾಪಟ್ಟಿಯನ್ನು ವಿವರಿಸುತ್ತದೆ. ಇದರಲ್ಲಿ ಅವನು ಆಟದ ಸಮಯದಿಂದ ಹಿಡಿದು ಅವನು ಹಾಲನ್ನು ಕುಡಿಯುವವರೆಗೆ ಎಲ್ಲವನ್ನೂ ಇದರಲ್ಲಿ ಸೇರಿಸಿದ್ದಾನೆ.

ಬೆಳಗ್ಗೆ ಏಳುವುದರಿಂದ ಹಿಡಿದು ಮಲಗುವವರಿನ ವೇಳಾಪಟ್ಟಿ

ಈ ದೈನಂದಿನ ವೇಳಾಪಟ್ಟಿಯನ್ನು ಹಾಕಿಕೊಂಡಿರುವುದು ಒಳ್ಳೆಯದೇ, ಆದರೆ ಇನ್ನೊಂದು ವಿಷಯ ಈ ಒಪ್ಪಂದದಲ್ಲಿ ಇದೆ, ಅದನ್ನು ನೋಡಿ. ಪ್ರತಿದಿನ ಬೆಳಗ್ಗೆ ಅಲಾರಂ ಸದ್ದು ಮಾಡಿದ ನಂತರ ಹುಡುಗ 10 ನಿಮಿಷಗಳ ಎಚ್ಚರದ ಸಮಯವನ್ನು ಕೇಳಿದ್ದಾನೆ. ಊಟ ಮತ್ತು ಆಟದಿಂದ ಹಿಡಿದು ಹಾಲು ಕುಡಿಯುವುದು ಮತ್ತು ತನ್ನ ಶಾಲೆಯಲ್ಲಿ ನೀಡಿದ ಹೋಂ ವರ್ಕ್ ಮಾಡುವವರೆಗೆ ಎಲ್ಲದಕ್ಕೂ ಒಂದೊಂದು ಸ್ಲಾಟ್ ಗಳನ್ನು ನೀಡಿದ್ದಾನೆ.

ಇದನ್ನೂ ಓದಿ: Amruta Fadnavis : ಮುಂಬೈನಲ್ಲಿ ಶೇ 3ರಷ್ಟು Divorces​ಗೆ ಕಾರಣ ಟ್ರಾಫಿಕ್​ ಎಂದ ಮಾಜಿ ಸಿಎಂ ಹೆಂಡತಿ

ಟೈಮ್‌ಟೇಬಲ್ ಪೂರ್ಣಗೊಂಡರೆ ಬಹುಮಾನ

ಹುಡುಗನು ಈ ವೇಳಾಪಟ್ಟಿಯಲ್ಲಿ ಹಾಕಿಕೊಂಡಿರುವ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಯಶಸ್ವಿಯಾದರೆ, ಅವನಿಗೆ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಹುಡುಗ ತನ್ನ ದಿನದಲ್ಲಿ ಅಳುವುದಿಲ್ಲ, ಕೂಗುವುದಿಲ್ಲ ಅಥವಾ ಗೊಣಗುವುದಿಲ್ಲ ಎಂದು ಬರೆದಿದ್ದಾನೆ, ಆದರೆ ಇದಕ್ಕೂ ಪ್ರತಿದಿನ 10 ರೂಪಾಯಿಗಳನ್ನು ಚಾರ್ಜ್ ಮಾಡುವುದಾಗಿ ಈ ಒಪ್ಪಂದದಲ್ಲಿ ಬರೆದುಕೊಂಡಿದ್ದಾನೆ.

ಮಗು ಹಠ ಮಾಡದಿದ್ದರೆ 100 ರೂಪಾಯಿ ಟಿಪ್ಸ್!

ಒಂದು ವಾರ ಪೂರ್ತಿ ಈ ಮಗು ಅಳದೆ, ಕೂಗಾಡದೆ, ಜಗಳವಾಡದೆ ಇದ್ದರೆ ತಂದೆಯು ಆತನಿಗೆ 100 ರೂಪಾಯಿ ಕೊಡುವುದಾಗಿ ಒಪ್ಪಂದದಲ್ಲಿ ತಿಳಿಸಲಾಗಿದೆ. ಮತ್ತೊಂದು ಟ್ವೀಟ್‌ನಲ್ಲಿ, ಈ ಮಗುವಿನ ತಂದೆ "ಊಟದ ಸಮಯವನ್ನು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಶಾಲಾ ಸಮಯದಲ್ಲಿ ಸೇರಿಸಲಾಗಿದೆ. ಹಾಲು ಕುಡಿಯುವ ಸಮಯವು ಟಿವಿಯೊಂದಿಗೆ ಇದೆ. ಆದ್ದರಿಂದ 20 ನಿಮಿಷ ಎಪಿಸೋಡ್ ಅನ್ನು ಸೇರಿಸಲಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನ, ಹಾಲು ಮತ್ತು ರಾತ್ರಿ ಊಟ ಟಿವಿ ನೋಡುತ್ತಾ ಮಾಡಬಹುದಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: America: ಮೊನ್ನೆ ಹತ್ಯೆಯಾದ ಅಬು ಅಲ್‍-ಖುರೇಷಿ ಯಾರು ಗೊತ್ತೇ? ಇಲ್ಲಿದೆ ಓದಿ ಉಗ್ರನ ಇತಿಹಾಸ

ನೆಟ್ಟಿಗರಿಂದ ಭಿನ್ನ-ವಿಭಿನ್ನ ಕಾಮೆಂಟ್ಸ್

ಅವರು "ಪಾಯಿಂಟ್ ಸಿಸ್ಟಮ್ ಮತ್ತು ಸ್ಟಾರ್ ಚಾರ್ಟ್ ಅನ್ನು ಈ ಮೊದಲು ಪ್ರಯತ್ನಿಸಿದ್ದರು". ಆದರೆ ಅದು ಕೆಲಸ ಮಾಡಲಿಲ್ಲ ಎಂದು ಅವರು ಹೇಳಿದರು. "ಅವನು ಅಳಲು ಪ್ರಾರಂಭಿಸಿದನು, ಏಕೆಂದರೆ ಅವನು ಒಳ್ಳೆಯ ಹುಡುಗನಾಗದೆ ಸ್ಟಾರ್ ಅನ್ನು ಬಯಸಿದನು" ಎಂದು ತಂದೆ ಹೇಳಿದರು. ನೆಟ್ಟಿಗರು ಈ ತಂದೆ ಮಗನ ಮಧ್ಯದ ಒಪ್ಪಂದವನ್ನು ತಮಾಷೆಯಾಗಿ ಕಂಡುಕೊಂಡರು. ಒಂದು ವಾರವು ಈ ರೀತಿಯ ವೇಳಾಪಟ್ಟಿಯನ್ನು ಅನುಸರಿಸಲಾಗುವುದಿಲ್ಲ ಎಂದು ಅನೇಕರು ಹೇಳಿದರೆ, ಇತರರು ಅಂತಹ ವೇಳಾಪಟ್ಟಿಯು ಮಗುವಿಗೆ ಆತಂಕವನ್ನು ನೀಡುತ್ತದೆ ಎಂದು ಹೇಳಿದರು.

ಒಬ್ಬ ಬಳಕೆದಾರನು ತಮಾಷೆಯಾಗಿ "ಪ್ರತಿ 6 ವರ್ಷದ ಮಗುವಿಗೆ ಅವರ ಟೈಮ್ ಟೇಬಲ್ ಅವರಿಗೆ ಹಣ ಗಳಿಸಬಹುದು ಎಂದು ಗೊತ್ತಿರುತ್ತದೆಯೇ ಹೇಳಿ" ಎಂದು ಬರೆದರೆ, ಇನ್ನೊಬ್ಬರು "21 ವರ್ಷ ವಯಸ್ಸಿನ ಮಗುವಿಗೆ ಫೋನ್ ಮತ್ತು ಟ್ವಿಟ್ಟರ್‌ ಬಳಕೆಯನ್ನು ನಿರ್ವಹಿಸಲು ಒಪ್ಪಂದದ ಸಲಹೆಗಳು ಬೇಕು. ಸಲಹೆಗಳು ಸ್ವಾಗತಾರ್ಹ" ಎಂದು ಹೇಳಿದ್ದಾರೆ.
First published: