Udupi: ಮತಗಟ್ಟೆಗಳಿಗೆ ಬಣ್ಣ ಹಚ್ಚಿ, ಭರ್ಜರಿ ಬಹುಮಾನ ಗೆಲ್ಲಿ!

ಮತಗಟ್ಟೆ (ಸಾಂದರ್ಭಿಕ ಚಿತ್ರ)

ಮತಗಟ್ಟೆ (ಸಾಂದರ್ಭಿಕ ಚಿತ್ರ)

ಉಡುಪಿ ಜಿಲ್ಲೆಯ ಮತಗಟ್ಟೆಗಳಿಗೆ ಬಣ್ಣ ಹಚ್ಚಿ ಗೆದ್ದವರಿಗೆ ಮೊದಲ ಬಹುಮಾನವಾಗಿ 8,000 ರೂ. ದೊರೆಯಲಿದೆ. ಜೊತೆಗೆ ಅತ್ಯುತ್ತಮವಾಗಿ ಬಣ್ಣ ಹಚ್ಚಿ ಎರಡು ಮತ್ತು ಮೂರನೇ ಬಹುಮಾನ ಪಡೆದವರಿಗೆ ಕ್ರಮವಾಗಿ 6,000 ಮತ್ತು 4,000 ರೂ.ದೊರೆಯಲಿದೆ.

  • Share this:

    ಉಡುಪಿ: ಮತದಾನದ ಪ್ರಮಾಣ ಹೆಚ್ಚಿಸೋಕೆ ಚುನಾವಣಾ ಆಯೋಗ (Election Commission) ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇರುತ್ತೆ. ಇದೀಗ ಉಡುಪಿ ಜಿಲ್ಲೆಯಲ್ಲೂ ಹೊಸ ಪ್ರಯೋಗವೊಂದನ್ನು ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ (Udupi News) ಮತಗಟ್ಟೆಗಳಿಗೆ ಬಣ್ಣ ಹಚ್ಚಿ, ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರು ನಗದು ಬಹುಮಾನ ಗೆಲ್ಲಬಹುದಾಗಿದೆ. ಮತದಾನ ಕೇಂದ್ರಗಳು ಸುಂದರವಾಗಿ ಕಾಣುವಂತೆ ಮಾಡಲು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.


    ಉಡುಪಿ ಸ್ವೀಟ್ ಕಮೀಟಿ (Systematic Voters' Education and Electoral Participation Committee) ಜಿಲ್ಲೆಯ ಮತಗಟ್ಟೆಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಉಡುಪಿ ಜಿಲ್ಲೆಯ ಮತಗಟ್ಟೆಗಳಿಗೆ ಬಣ್ಣ ಹಚ್ಚಿ ಗೆದ್ದವರಿಗೆ ಮೊದಲ ಬಹುಮಾನವಾಗಿ 8,000 ರೂ. ದೊರೆಯಲಿದೆ.


    ಇನ್ನಷ್ಟು ಬಹುಮಾನಗಳೂ ಇವೆ!
    ಜೊತೆಗೆ ಅತ್ಯುತ್ತಮವಾಗಿ ಬಣ್ಣ ಹಚ್ಚಿ ಎರಡು ಮತ್ತು ಮೂರನೇ ಬಹುಮಾನ ಪಡೆದವರಿಗೆ ಕ್ರಮವಾಗಿ 6,000 ಮತ್ತು 4,000 ರೂ.ದೊರೆಯಲಿದೆ.


    ಅಷ್ಟೇ ಅಲ್ಲ, ಚುನಾವಣಾ ಆಯೋಗವು ಮತಗಟ್ಟೆಗಳಿಗೆ ಅತ್ಯತ್ತಮ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಎರಡು ಸಮಾಧಾನಕರ ಬಹುಮಾನಗಳನ್ನು ಸಹ ಘೋಷಣೆ ಮಾಡಿದೆ. ಸಮಾಧಾನಕರ ಬಹುಮಾನ ಪಡೆದವರಿಗೆ ತಲಾ 2,000 ರೂ.ಗಳ ನಗದು ಬಹುಮಾನ ದೊರೆಯಲಿದೆ.


    ಯಾವಾಗ ನಡೆಯಲಿದೆ ಈ ಸ್ಪರ್ಧೆ?
    ಮಾರ್ಚ್ 24 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯಲಿರುವ ಈ ಮತಗಟ್ಟೆಗಳ ಗೋಡೆಗೆ ಬಣ್ಣ ಹಚ್ಚುವ ಸ್ಪರ್ಧೆ ನಡೆಯಲಿದೆ. ಗೂಗಲ್ ಫಾರ್ಮ್ ಮೂಲಕ ಸಾರ್ವಜನಿಕರು ಈ ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.


    ಬಣ್ಣ ಅವ್ರೇ ಕೊಡ್ತಾರೆ, ನೀವು ಏನು ತರಬೇಕು?
    ಚುನಾವಣಾ ಸಮಿತಿಯಿಂದ ಬಣ್ಣ ನೀಡಲಾಗುತ್ತದೆ. ಪೇಂಟ್ ಮಾಡಲು ಬ್ರಷ್​ಗಳನ್ನು ಸಾರ್ವಜನಿಕರೇ ತರಬೇಕಿದೆ. ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಭಾಗವಹಿಸಬಹುದು. ಸ್ಪರ್ಧಿಗಳ ಇಬ್ಬರು ಸದಸ್ಯರ ತಂಡಗಳಿಗೂ ಅವಕಾಶ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್ ತಿಳಿಸಿದ್ದಾರೆ.


    ಇದನ್ನೂ ಓದಿ: Udupi: ಕರಾವಳಿಯಲ್ಲಿ ಕೋತಿರಾಜ್ ಸಾಹಸ! ಬ್ರಹ್ಮಗಿರಿಯ 25 ಅಂತಸ್ತಿನ ಕಟ್ಟಡದ ಮೇಲೆ ಹಾರಿದ ಕನ್ನಡ ಧ್ವಜ




    ಯಾವೆಲ್ಲ ಚಿತ್ರ ರಚಿಸಬಹುದು?
    ಯಕ್ಷಗಾನ, ಕಂಬಳ ಮತ್ತು ಪ್ರಸಿದ್ಧ ಉಡುಪಿ ಕೈಮಗ್ಗ ಸೀರೆಗಳು, ಕಲಾವಿದರು ಕುಂಬಾರಿಕೆ, ಬುಟ್ಟಿ ನೇಯ್ಗೆ ಅಥವಾ ಇತರ ಜಾನಪದ ಕಲೆಗಳ ಕುರಿತು ಗೋಡೆಗಳ ಮೇಲೆ ಚಿತ್ರಗಳನ್ನು ರಚಿಸಬಹುದಾಗಿದೆ.


    ಇದನ್ನೂ ಓದಿ: Rakshit Shetty In Udupi: ಸಿಂಪಲ್ ಸ್ಟಾರ್ ಗೋ ಪ್ರೇಮ! ರಕ್ಷಿತ್ ಶೆಟ್ಟಿಗೆ ಸಿಕ್ತು ಶಿವನ ಆಶೀರ್ವಾದ!


    ಇಲ್ಲಿದೆ ನೋಡಿ ಸಂಪರ್ಕ ಸಂಖ್ಯೆ
    ಉಡುಪಿ ಜಿಲ್ಲೆಯಲ್ಲಿನ 1,111 ಮತಗಟ್ಟೆಗಳಿಗೆ ಹಂತ ಹಂತವಾಗಿ ಬಣ್ಣ ಬಳಿಯುವುದು ನಮ್ಮ ಗುರಿಯಾಗಿದೆ. ನಗದು ಬಹುಮಾನದ ಜೊತೆಗೆ ಪ್ರಶಂಸಾ ಪತ್ರವೂ ಇರುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9880505271 ಅಥವಾ 9481971071 ಗೆ ಕರೆ ಮಾಡಬಹುದು ಎಂದು ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್ ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: