• Home
  • »
  • News
  • »
  • udupi
  • »
  • Solar Eclipse: ಮಲ್ಪೆ ಬೀಚ್​ನಲ್ಲಿ ಸೂರ್ಯಗ್ರಹಣ ವೀಕ್ಷಿಸಿ!

Solar Eclipse: ಮಲ್ಪೆ ಬೀಚ್​ನಲ್ಲಿ ಸೂರ್ಯಗ್ರಹಣ ವೀಕ್ಷಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಲ್ಲದೇ, ಕಡಲ ಕಿನಾರೆಗಳು ಅತ್ಯಂತ ವಿಶಾಲ ಪ್ರದೇಶ ಹೊಂದಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ.

  • Share this:

    ಉಡುಪಿ: ಸೂರ್ಯಗ್ರಹಣ ಕುರಿತು ಯಾವುದೇ ಆತಂಕಪಡದೇ ವೈಜ್ಞಾನಿಕ ರೀತಿಯಲ್ಲಿ ಅದನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಸೂರ್ಯಗ್ರಹಣ ಸಮಯ ಉಡುಪಿಯ ಮಲ್ಲೆ ಸಮುದ್ರ‌ ಕಿನಾರೆಯಲ್ಲಿ ಇಂತಹದ್ದೊಂದು ಅಪೂರ್ವ ಅವಕಾಶವನ್ನು ಸಂಘವು ಕಲ್ಪಿಸುತ್ತಿದೆ. ಅಲ್ಲದೇ, ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ವೈಜ್ಞಾನಿಕ ವಿಧಾನದ ಮೂಲಕ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ.


    ಯಾವಾಗ ಸೂರ್ಯಗ್ರಹಣ?
    2022 ರ ಎರಡನೇ ಸೂರ್ಯಗ್ರಹಣವು ಇದೇ ಅಕ್ಟೋಬರ್ 25 ರಂದು ಸಂಭವಿಸಲಿದೆ. ಆ ದಿನ ಉಡುಪಿ ಭಾಗದಲ್ಲಿ ಸಾಯಂಕಾಲ 5.08 ನಿಮಿಷಕ್ಕೆ ಆರಂಭವಾಗಿ 6.28ಕ್ಕೆ ಕೊನೆಗೊಳ್ಳಲಿದೆ. ಆದರೆ ಆ ದಿನ ಸೂರ್ಯಾಸ್ತವು 6.06 ಗಂಟೆಗೆ ನಡೆಯಲಿದೆ. ಆದರೆ 5.50ರ ಸಮಯದಲ್ಲಿ ಈ ಭಾಗದಲ್ಲಿ ಗರಿಷ್ಠ ಪ್ರಮಾಣದ‌ ಗ್ರಹಣವು ಗೋಚರಿಸಲಿದೆ.


    ಗ್ರಹಣ ವೀಕ್ಷಣೆಗೆ ಬೀಚ್ ಉತ್ತಮ
    ಸೂರ್ಯಾಸ್ತ ಸಮಯದಲ್ಲಿ ಈ ಬಾರಿ ಸೂರ್ಯಗ್ರಹಣ ನಡೆಯುತ್ತಿರುವುದರಿಂದ ಕಡಲ ಕಿನಾರೆಯಲ್ಲಿ ಉತ್ತಮ ರೀತಿಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೇ, ಕಡಲ ಕಿನಾರೆಗಳು ಅತ್ಯಂತ ವಿಶಾಲ ಪ್ರದೇಶ ಹೊಂದಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ.


    ಸೂರ್ಯಗ್ರಹಣ ವೀಕ್ಷಣೆ ಹೀಗೆ
    ಆಸಕ್ತರು ಅಕ್ಟೋಬರ್ 25 ರ ಸಾಯಂಕಾಲ 5 ಗಂಟೆಯಿಂದಲೇ ಮಲ್ಪೆ ಕಡಲ ಕಿನಾರೆಯಲ್ಲಿ ವೀಕ್ಷಿಸಬಹುದಾಗಿದೆ. ವಿಶೇಷ ಗ್ರಹಣ ವೀಕ್ಷಣ ಕನ್ನಡಕ, ಪಿನ್ ಹೋಲ್ ಗಳ ಮೂಲಕ ವೀಕ್ಷಣೆ ನಡೆಸಬಹುದಾಗಿದೆ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ತಿಳಿಸಿದೆ.


    ಇದನ್ನೂ ಓದಿ: Dakshina Kannada: ಪ್ರಮುಖ ದೇವಸ್ಥಾನಗಳ ದರ್ಶನ ಸಮಯ, ಪೂಜೆ, ಅನ್ನಪ್ರಸಾದ ಸೇವೆಗಳ ಸಮಯದಲ್ಲಿ ಬದಲಾವಣೆ


    ಬರಿಗಣ್ಣು ಮಾತ್ರವಲ್ಲ, ಹೀಗೂ ನೋಡದಿರಿ
    ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂಬ ಎಚ್ಚರಿಕೆಯನ್ನೂ‌ ಸಂಘವು ನೀಡಿದೆ. ಜೊತೆಗೆ ಟೆಲಿಸ್ಕೋಪ್, ಕ್ಯಾಮೆರಾ‌, ದುರ್ಬೀನುಗಳಿಂದ ನೋಡುವುದು ಕಣ್ಣಿಗೆ ಹಾನಿಕಾರಕ. ಅಲ್ಲದೇ, ಎಕ್ಸ್ ರೇ ಹಾಳೆಯಲ್ಲೂ ಸೂರ್ಯ ಗ್ರಹಣ ನೋಡಬಾರದೆಂದು ತಿಳಿಸಿದೆ.


    ಇದನ್ನೂ ಓದಿ: Kantara: ಕಾಂತಾರ ಎಫೆಕ್ಟ್! ದೈವಾರಾಧಕರಿಗೆ ಕರ್ನಾಟಕ ಸರ್ಕಾರದಿಂದ ಶುಭಸುದ್ದಿ


    ಯೂಟ್ಯೂಬ್ ನಲ್ಲೂ ವೀಕ್ಷಿಸಿ
    ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಉಡುಪಿಯ ಅಧಿಕೃತ ಯೂಟ್ಯೂಬ್ ನಲ್ಲಿ ಸೂರ್ಯಗ್ರಹಣದ ನೇರಪ್ರಸಾರವೂ ಲಭ್ಯವಿರಲಿದೆ. ಈ ಕೆಳಗಿನ ಲಿಂಕ್ ಮೂಲಕ ಸೂರ್ಯಗ್ರಹಣ ದಿನ ಪ್ರಕೃತಿಯಲ್ಲಾಗುವ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಯೂಟ್ಯೂಬ್​ನಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಮಾಹಿತಿ ನೀಡಿದೆ.

    Published by:ಗುರುಗಣೇಶ ಡಬ್ಗುಳಿ
    First published: