ಉಡುಪಿ: ಮುದ್ದು ಮುದ್ದು ಆಕಳ ಕರುಗಳು, ನೋಡ್ತಿದ್ರೇನೆ ಬರಸೆಳೆದು ಅಪ್ಪಿಕೊಳ್ಬೇಕು (Cow Hug Day) ಅನಿಸುವಷ್ಟು ಮುಗ್ದತೆ, ಚಂದದ ಪುಟಾಣಿಗಳು. ಈ ಕರುಗಳ ಮೈದಡವುತ್ತಿರೋ ಪ್ರಾಣಿಪ್ರಿಯರು. ಇದು ಉಡುಪಿಯಲ್ಲಿ (Udupi News) ಆಚರಿಸಿದ ವಿಶಿಷ್ಟ ಪ್ರೇಮಿಗಳ ದಿನಾಚರಣೆ! (Valentine's Day 2023)
ಉಡುಪಿಯ ಮಣಿಪಾಲದ ಶಿವಪಾಡಿ ದೇವಸ್ಥಾನದಲ್ಲಿ ಗೋ ಆಲಿಂಗನ ಮಾಡುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸಲಾಯ್ತು. ಇತ್ತೀಚಿಗಷ್ಟೇ ಪ್ರಾಣಿ ಕಲ್ಯಾಣ ಮಂಡಳಿ ಪ್ರೇಮಿಗಳ ದಿನದಂದು ಗೋ ಅಪ್ಪುಗೆ ದಿನವನ್ನಾಗಿ ಆಚರಿಸುವಂತೆ ಆದೇಶಿಸಿತ್ತು. ಆದರೆ ವಿವಾದ ಆಗ್ತಿದ್ದಂತೆ ಆ ಆದೇಶವನ್ನು ಹಿಂಪಡೆದಿತ್ತು.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
ಗೋ ಆಲಿಂಗನ, ಗೋ ಪೂಜೆಯ ಸಂಭ್ರಮ
ಗೋ ಆಲಿಂಗನ ಸೂಚನೆಯನ್ನು ಪಾಲಿಸುವಂತೆ ಪ್ರೇಮಿಗಳ ದಿನದಂದು ಮಣಿಪಾಲದ ಉಮಾಮಹೇಶ್ವರ ದೇವಸ್ಥಾನದಲ್ಲಿ ಗೋ ಆಲಿಂಗನ ಮಾಡಿ ಗೋ ಪೂಜೆ ಮಾಡಿ ಸಂಭ್ರಮಿಸಿದರು. ಆಕಳ ಕರುಗಳ ಎದುರು ಕುಳಿತು ಫೋಟೋ ಕ್ಲಿಕ್ಕಿಸಿಕೊಂಡು ಆನಂದಪಟ್ಟರು.
ಇದನ್ನೂ ಓದಿ: Udupi: ಹೋರಾಟಕ್ಕೆ ಸಜ್ಜಾಗ್ತಿದ್ದಾರೆ ಸಮುದ್ರದ ಮಕ್ಕಳು! ಉಡುಪಿ ಮೀನುಗಾರರ ಜೀವಕ್ಕೆ ಬೇಕಿದೆ ರಕ್ಷಣೆ
ಒಟ್ಟಾರೆ ಪ್ರೇಮಿಗಳ ದಿನದಂದು ಉಡುಪಿಯಲ್ಲಿ ನಡೆದ ಈ ಗೋ ಆಲಿಂಗನ, ಗೋ ಪೂಜೆ ವಿಚಿತ್ರ ಅನಿಸಿದರೂ ವಿಭಿನ್ನ ಅನಿಸಿದ್ದಂತೂ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ