• Home
  • »
  • News
  • »
  • udupi
  • »
  • Koragajja: ಕೊರಗಜ್ಜನ ಭಕ್ತರಾದ ಉಕ್ರೇನ್ ದಂಪತಿ! ದೈವದ ಪವಾಡಕ್ಕೆ ಕೈಮುಗಿದ ವಿದೇಶಿಗರು

Koragajja: ಕೊರಗಜ್ಜನ ಭಕ್ತರಾದ ಉಕ್ರೇನ್ ದಂಪತಿ! ದೈವದ ಪವಾಡಕ್ಕೆ ಕೈಮುಗಿದ ವಿದೇಶಿಗರು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಹೀಗೆ ಕೊರಗಜ್ಜನ ಕಾರಣಿಕದ ವಿಚಾರ ತಿಳಿಯುತ್ತಲೇ ಉಕ್ರೇನ್ ದಂಪತಿ ದೈವಕ್ಕೆ ಅಗೇಲು ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಹರಕೆಯಂತೆ ಅವರ ಮಗುವಿನ ಅನಾರೋಗ್ಯ ದೂರವಾಗಿದೆ.

  • Share this:

    ಉಡುಪಿ: ಕಾಂತಾರದ ಮೂಲಕ ತುಳುನಾಡಿನ ದೈವಗಳ ಕಾರಣಿಕ ಊರೆಲ್ಲ ಪರಿಚಯವಾಗಿದೆ. ಈಗಂತೂ ದೈವಗಳ ಪ್ರಭಾವ ವಿದೇಶಗಳಿಗೂ ಪಸರಿಸ್ತದೆ. ತುಳುನಾಡಿನ ದೈವ ಸ್ವಾಮಿ ಕೊರಗಜ್ಜನ (Koragajja Daiva) ಕಾರಣಿಕದಿಂದ ಉಕ್ರೇನ್ ದಂಪತಿಯ (Ukraine Couple)  ಮಗು ಅನಾರೋಗ್ಯದಿಂದ ಗುಣವಾಗಿದೆ. "ನಂಬಿ ಬಂದವರ ಕೈ ಬಿಡೆನು" ಎನ್ನೋ ದೈವದ ನುಡಿಗೆ ಉಕ್ರೇನ್ ದಂಪತಿ ಭಕ್ತಿ ಪರವಶವಾಗಿದೆ. ಹೌದು, ಹೀಗೆ ದೈವದ ಕಟ್ಟೆ ಮುಂದೆ ನಿಂತು ತದೇಕಚಿತ್ತದಿಂದ ದೈವದ ಪೂಜೆಯನ್ನು ನೋಡ್ತಿರೋ ಇವ್ರೇ ಉಕ್ರೇನಿನ ಆ್ಯಂಡ್ರೋ ಮತ್ತು ಎಲೆನಾ ದಂಪತಿ. ಜೊತೆಗಿರುವುದು ಅವರ ಮುದ್ದು ಮಗು ಮ್ಯಾಕ್ಸಿಂ.


    ಅಂದಹಾಗೆ ಈ ದಂಪತಿ ಕೆಲ ತಿಂಗಳ ಹಿಂದೆ ಉಕ್ರೇನ್​ನಿಂದ ಭಾರತಕ್ಕೆ ಪ್ರವಾಸ ಬಂದಿದ್ರು. ಹೀಗೆ ಬಂದವರೇ ಉಡುಪಿ ಕಡಲತೀರ ಮಲ್ಪೆಗೂ ಬಂದಿದ್ರು. ಇದೇ ಸಮಯಕ್ಕೆ ಮಗ ಮ್ಯಾಕ್ಸಿಂಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲೇ ಇದ್ದ ರಾಧಾ ಸುರಭಿ ಗೋವಿನ ಮಂದಿರದಲ್ಲಿ ನಾಟಿ ಚಿಕಿತ್ಸೆಗೆಂದು ದಾಖಲಾಗಿದ್ರು. ಆಗ ಈ ದಂಪತಿ ತಿಳಿದಿದ್ದೇ ಕೊರಗಜ್ಜನ ಕಾರಣಿಕದ ಕಥೆ.


    ಇದನ್ನೂ ಓದಿ: Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್


    ಅಗೇಲು ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದರು
    ಹೀಗೆ ಕೊರಗಜ್ಜನ ಕಾರಣಿಕದ ವಿಚಾರ ತಿಳಿಯುತ್ತಲೇ ಉಕ್ರೇನ್ ದಂಪತಿ ದೈವಕ್ಕೆ ಅಗೇಲು ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಹರಕೆಯಂತೆ ಅವರ ಮಗುವಿನ ಅನಾರೋಗ್ಯ ದೂರವಾಗಿದೆ. ತಕ್ಷಣ ದೈವದ ಮುಂದೆ ಹಾಜರಾಗಿ ಅಗೇಲು ಸೇವೆ ಸಮರ್ಪಿಸಿ ನಮಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡ್ಮಣ್ಣು ಎಂಬಲ್ಲಿ ಅಗೇಲು ಸಲ್ಲಿಸುವ ಮೂಲಕ ಉಕ್ರೇನ್ ದಂಪತಿ ಹರಕೆ ತೀರಿಸಿದ್ದಾರೆ.


    ಇದನ್ನೂ ಓದಿ:  Koragajja Miracle: ಸಾಗರದ 4 ತಿಂಗಳ ಬಾಲೆಯನ್ನು ಕಾಪಾಡಿದ ಉಡುಪಿಯ ಕೊರಗಜ್ಜ!


    ಹೀಗೆ ತುಳುನಾಡಿನ ದೈವದ ಕಾರಣಿಕದಿಂದ ಉಕ್ರೇನ್ ದಂಪತಿಯ ಮಗು ಆರೋಗ್ಯವಂತನಾಗಿದ್ದಾನೆ. ಊರಿಗೆ ವಾಪಸ್ ಹೊರಡಲು ಅಣಿಯಾಗಿದ್ದಾರೆ. ಇದರೊಂದಿಗೆ ತುಳುನಾಡಿನ ದೈವದ ಮಹಿಮೆ ಜಗದಗಲ ಪಸರಿಸುವಂತಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: