Udupi Viral Video: ಕಾಡುಕೋಣದ ಜೊತೆ ಮಹಿಳೆಯ ಪ್ರೀತಿಯ ಸಂಭಾಷಣೆ!

ವಿಡಿಯೋದ ದೃಶ್ಯ

ವಿಡಿಯೋದ ದೃಶ್ಯ

“ನಿನಗೆ ಬೇಕಾದ ವ್ಯವಸ್ಥೆ ಮಾಡುತ್ತೇನೆ. ಇಲ್ಲಿಯೇ ಇರು" ಎಂದು ಮನೆಯೊಡತಿ ಕಾಡುಕೋಣಕ್ಕೆ ಹೇಳಿದ್ದಾರೆ.

  • News18 Kannada
  • 2-MIN READ
  • Last Updated :
  • Udupi, India
  • Share this:

ಉಡುಪಿ: ಕಾಡುಕೋಣದೊಂದಿಗೆ ಮಹಿಳೆಯೋರ್ವಳು ಪ್ರೀತಿಯಿಂದ ಮಾತನಾಡುವ ವಿಡಿಯೋವೊಂದು ವೈರಲ್ (Udupi Viral Video) ಆಗುತ್ತಿದೆ. ಕಾಡುಕೋಣವನ್ನು ನೋಡಿದ ಮನೆಯೊಡತಿ ಕಾಡುಕೋಣಕ್ಕೆ (Bison Viral Video) ಹುಲ್ಲು, ನೀರು ನೀಡುವುದಾಗಿ ಹೇಳಿದ್ದಾರೆ.


“ನಿನಗೆ ಬೇಕಾದ ವ್ಯವಸ್ಥೆ ಮಾಡುತ್ತೇನೆ. ಇಲ್ಲಿಯೇ ಇರು"ಎಂದು ಮನೆಯೊಡತಿ ಕಾಡುಕೋಣಕ್ಕೆ ಹೇಳಿದ್ದಾರೆ. ಮೊಬೈಲ್​ನಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಮಹಿಳೆಯ ಪರಿಚಯ ಮಾತ್ರ ಪತ್ತೆಯಾಗಿಲ್ಲ.




ಇದನ್ನೂ ಓದಿ: Udupi: ಕಸದಲ್ಲಿ ಸಿಕ್ಕ ಉಂಗುರ ಮರಳಿಸಿ ಪ್ರಾಮಾಣಿಕತೆ ಮೆರೆದ ಸ್ವಚ್ಛತಾ ಸಿಬ್ಬಂದಿ


ಪಶ್ಚಿಮ ಘಟ್ಟದ ಗ್ರಾಮಗಳಲ್ಲಿ ಕಾಡುಕೋಣದ ಹಾವಳಿ
ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಪಶ್ಚಿಮ ಘಟ್ಟದ ಗ್ರಾಮಗಳಲ್ಲಿ ಆಗಾಗ ಕಾಡುಕೋಣ ಕಾಡಿನಿಂದ ಗ್ರಾಮಗಳತ್ತ ಬರುವುದು ಸಾಮಾನ್ಯವಾಗಿದೆ. ಅದರಲ್ಲೂ ಹೆಬ್ರಿ, ಕೊಲ್ಲೂರು, ಸಿದ್ಧಾಪುರ ಭಾಗಗಳಲ್ಲಿ ಕಾಡುಕೋಣ ಮನೆಯಂಗಳ, ತೋಟಗಳಿಗೆ ಬರುವ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಜೊತೆಗೆ ಕಾಡುಕೋಣದಿಂದ ಬೆಳೆ ನಷ್ಟ, ಸಾವು ಸಂಭವಿಸುವ ಘಟನೆಗಳು ಸಹ ಮಲೆನಾಡು ಭಾಗದಲ್ಲಿ ವರದಿಯಾಗುತ್ತವೆ.


ಇದನ್ನೂ ಓದಿ: Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ


ಅದೇ ರೀತಿ ಇತ್ತೀಚೆಗೆ ಕಾಡಿನ ತಪ್ಪಲಿನಿಂದ ಕಾಡುಕೋಣ ಮನೆಯಂಗಳಕ್ಕೆ ಬಂದಿದೆ. ಹೀಗೆ ಬಂದ ಕಾಡುಕೋಣದೊಂದಿಗೆ ಮಹಿಳೆಯ ಪ್ರೀತಿಯ ಸಂಭಾಷಣೆ ಭಾರೀ ವೈರಲ್ ಆಗುತ್ತಿದೆ.




ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ ಕಾಡುಕೋಣಕ್ಕೆ ಹುಲ್ಲು, ನೀರು ಕೊಡುವೆ ಬಾ ಎಂದು ಕರೆದ ಮಹಿಳೆಯ ಧೈರ್ಯಕ್ಕಂತೂ ಏನು ಹೇಳುವುದೋ!

First published: