Udupi Water Crisis: ಉಡುಪಿಯಲ್ಲೂ ನೀರಿನ ತತ್ವಾರ; ಇನ್ಮುಂದೆ 3 ದಿನಕ್ಕೊಮ್ಮೆ ನೀರು

ಕುಡಿಯುವ ನೀರಿನ ಪೂರೈಕೆ

ಕುಡಿಯುವ ನೀರಿನ ಪೂರೈಕೆ

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಹಿನ್ನೆಲೆ ಬಜೆ ಡ್ಯಾಂ ನಲ್ಲಿ ನೀರಿನ ಪ್ರಮಾಣ ಕುಸಿದಿದೆ. ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೂ ಹೆಚ್ಚಿನ ಹರಿವನ್ನ ಹುಟ್ಟುಹಾಕಿಲ್ಲ.

  • News18 Kannada
  • 5-MIN READ
  • Last Updated :
  • Udupi, India
  • Share this:

ಉಡುಪಿ: ಮಂಗಳೂರಿನ (Mangaluru Water Crisis) ನಂತರ ಇದೀಗ ಕಡಲತಡಿಯ ಇನ್ನೊಂದು ನಗರ ಉಡುಪಿಯಲ್ಲೂ ನೀರಿನ ಸಮಸ್ಯೆ (Udupi Water Crisiss) ತಲೆದೋರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಾನ್ಸೂನ್‌ ಪೂರ್ವ ಮಳೆಯಾಗದಿರುವ ಹಿನ್ನೆಲೆ ಹಿರಿಯಡಕ ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿದಿದ್ದು ಉಡುಪಿ ನಗರಕ್ಕೂ (Udupi Water Rationing) ರೇಷನಿಂಗ್‌ ಮೂಲಕ ಮೂರು ದಿನಕ್ಕೊಮ್ಮೆ ನೀರು ಪೂರೈಸಲು ಉಡುಪಿ ನಗರಸಭೆ (Udupi News) ನಿರ್ಧರಿಸಿದೆ.


ಇಂದು, ನಾಳೆ ಇದೆ ನೀರು
ಮೇ 19ರಿಂದ ರೇಷನಿಂಗ್‌ ಮೂಲಕ ನೀರು ಪೂರೈಸಲು ನಗರಸಭೆ ನಿರ್ಧರಿಸಿದೆ. ಅದಾಗ್ಯೂ ಮೇ 17 ಮತ್ತು 18 ರಂದು ಎಂದಿನಂತೆ ನೀರು ಪೂರೈಕೆ ಆಗಲಿದೆ. ಮೇ 19 ರಿಂದ ರೇಷನಿಂಗ್‌ ಆರಂಭಗೊಳ್ಳಲಿದೆ.


ಕೈಕೊಟ್ಟ ಮಳೆ; ನೀರಿಗೆ ತತ್ವಾರ
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಹಿನ್ನೆಲೆ ಬಜೆ ಡ್ಯಾಂ ನಲ್ಲಿ ನೀರಿನ ಪ್ರಮಾಣ ಕುಸಿದಿದೆ. ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೂ ಹೆಚ್ಚಿನ ಹರಿವನ್ನ ಹುಟ್ಟುಹಾಕಿಲ್ಲ. ಹಾಗಾಗಿ ಕಾರ್ಕಳ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯಾದರೆ ಮಾತ್ರ ನೀರಿನ ಸಂಗ್ರಹ ನಿರೀಕ್ಷಿಸಬಹುದಾಗಿದೆ.


ಇದನ್ನೂ ಓದಿ: Mangaluru Water Crisis: ಮಳೆ ಬರದಿದ್ರೆ ಮಂಗಳೂರು ನಗರಕ್ಕೆ ಇನ್ನೆರಡು ವಾರಕ್ಕಷ್ಟೇ ನೀರು!


ಯಾವಾಗಿನಿಂದ ರೇಷನಿಂಗ್?‌
ಮೇ 19 ರಂದು ರೇಷನಿಂಗ್‌ ಮೂಲಕ ಉಡುಪಿ ನಗರ ಪ್ರದೇಶಗಳಿಗೆ ನೀರು ಪೂರೈಸಲು ನಗರಸಭೆಯು ನಿರ್ಧರಿಸಿದೆ. ಅದರಂತೆ ಮೇ 19ರಿಂದ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ನಿಗದಿತ ಪ್ರದೇಶಗಳಿಗೆ ನಡೆಯಲಿದೆ.




ಮೊದಲ ದಿನ ಮೇ 19 ರಂದು ಮಣಿಪಾಲ, ಪರ್ಕಳ, ಈಶ್ವರ ನಗರ ಹಾಗೂ ಮರುದಿನ ಉಡುಪಿ, ಅಜ್ಜರಕಾಡು, ಇಂದಿರಾನಗರ ಮತ್ತು ಮೂರನೇ ಮಲ್ಪೆ, ಸಂತೆಕಟ್ಟೆ ಸುತ್ತಮುತ್ತಲ ವ್ಯಾಪ್ತಿಗೆ ನೀರು ಪೂರೈಕೆ ಆಗಲಿದೆ. ಹೀಗೆ ಮೂರು ದಿನಗಳಿಗೊಮ್ಮೆ ನಿಗದಿತ ಪ್ರದೇಶಗಳಿಗೆ ಮಳೆಗಾಲ ಆರಂಭವಾಗುವ ತನಕ ನೀರು ಪೂರೈಕೆ ಮಾಡುವ ಸಾಧ್ಯತೆಯಿದೆ.


ಇದನ್ನೂ ಓದಿ: Dakshina Kannada: ನೇತ್ರಾವತಿಯಲ್ಲಿ ಮತ್ತೆ ಕಾಣಿಸಿಕೊಂಡ ನೀರಿನ ಹರಿವು!


ಜೂನ್‌ ಮೊದಲ ವಾರದಲ್ಲಿ ಮಳೆ
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂನ್‌ 1ಕ್ಕೆ ಕೇರಳಕ್ಕೆ ಅಪ್ಪಳಿಸಲಿರುವ ಮಾನ್ಸೂನ್‌, ಕರ್ನಾಟಕಕ್ಕೆ ಜೂನ್‌ 4ರಂದು ಮಳೆ ಹೊತ್ತು ತರಲಿದೆ ಎಂದು ತಿಳಿಸಿದೆ.

First published: