ಉಡುಪಿ: ಒಂದೇ ಕ್ಷಣ, ಒಂದೇ ಸಲಕ್ಕೆ ನೂರು ಕಲಾವಿದರು ವೀಣೆ ನುಡಿಸಿದರೆ..ಆಹಾ! ಆ ಅನುಭವ ಹೇಗಿರಬಹುದು ಅಲ್ವಾ? ಇಂಥದ್ದೇ ಒಂದು ಅದ್ಭುತ ವಾತಾವರಣಕ್ಕೆ ಉಡುಪಿ ಸಾಕ್ಷಿಯಾಯ್ತು. ಉಡುಪಿಯ (Udupi) ಕಾಪು ತಾಲೂಕಿನ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇಗುಲದಲ್ಲಿ (Uchila Mahalakshmi Temple) 'ಶತ ವೀಣಾ ವಲ್ಲರಿ' ಕಾರ್ಯಕ್ರಮವೇ ಇಂಥದ್ದೊಂದು ಅಮೋಘ ಅನುಭೂತಿ ಒದಗಿಸಿತ್ತು. ಕಿಕ್ಕಿರಿದು ಸೇರಿದ್ದ ಜನಸ್ತೋಮದ ನಡುವೆ ಕಂಡು ಕೇಳರಿಯದಂಥಾ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: Bengaluru: ಆಹಾ! ಓಹೋ! ಇದು ಬೆಂಗಳೂರಿನ ಮಾಯಾಲೋಕ!
ವಿಶಾಲ ವೇದಿಕೆಯಲ್ಲಿ ಆಸೀನರಾಗಿದ್ದ ಕಲಾವಿದರು ಒಂದೇ ರೀತಿಯ ಉಡುಪು ಧರಿಸಿದ್ದರು. ಕಲಾವಿದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ವೀಣಾ ವಾದಕಿಯರೇ ಇದ್ದರು. ಸುಮಾರು 101 ವೀಣಾ ವಾದಕರೊಂದಿಗೆ 14 ಸಹಕಲಾವಿದರು ಮತ್ತು ಹಿನ್ನೆಲೆ ಕಲಾವಿದರು ಭಾಗಿಯಾಗಿದ್ದರು.
ಇದನ್ನೂ ಓದಿ: Annamma Temple: ಮೆಜೆಸ್ಟಿಕ್ನಲ್ಲೊಂದೇ ಅಲ್ಲ, ಶ್ರೀನಗರದಲ್ಲೂ ಇರುವಳು ಅಣ್ಣಮ್ಮ ತಾಯಿ!
'ಶತ ವೀಣಾ ವಲ್ಲರಿ' ಗೆ ಮಣಿಪಾಲದ ವಿದ್ವಾನ್ ಪವನ ಬಿ ಆಚಾರ್ ಅವರ ನಿರ್ದೇಶನ ಮತ್ತು ನಿರ್ವಹಣೆ ಮಾಡಿದ್ರು. ಮಣಿಪಾಲದ ಕಲಾಸ್ಪಂದನ ತಂಡದ ಜೊತೆಗೆ ಉಡುಪಿ ಮತ್ತು ಕಾರ್ಕಳ ಭಾಗದ ವೀಣಾ ವಾದಕರು ಸಾಥ್ ನೀಡಿದರು. ಒಟ್ಟಾರೆ ಉಡುಪಿಗೆ ಉಡುಪಿಯೇ ವಾಹ್ ಅನ್ನುವಂಥಾ ಕಾರ್ಯಕ್ರಮಕ್ಕೆ ತಲೆದೂಗಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ