ಉಡುಪಿ: ಕೃಷ್ಣನ ನೆಲದಲ್ಲಿ ಸಂಭ್ರಮವೋ ಸಂಭ್ರಮ! ಇನ್ನೊಂದು ಪರ್ಯಾಯಕ್ಕೆ ತಯಾರಾಗುವ ಪುಳಕ. ಉಡುಪಿಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ನಾಲ್ಕನೇ ಪರ್ಯಾಯಕ್ಕೆ (Udupi Paryaya) ಬಾಳೆ ಮಹೂರ್ತ ನಡೆಸಲಾಯ್ತು. 2024 ಜನವರಿಯಲ್ಲಿ ನಡೆಯಲಿರುವ ಪುತ್ತಿಗೆ ಪರ್ಯಾಯಕ್ಕೆ (Puttige Mutt) ಒಂದು ವರ್ಷಕ್ಕೂ ಮುನ್ನವೇ ಬಾಳೆ ಮುಹೂರ್ತ ನೆರವೇರಿಸಲಾಯಿತು.
ಬಾಳೆ ಮುಹೂರ್ತದ ಉದ್ದೇಶವೇ ವಿಶಿಷ್ಟ
ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಅಂತಲೂ ಕರೆಯಲಾಗುತ್ತೆ. ಪ್ರತಿದಿನ ನಡೆಯುವ ಅನ್ನ ದಾಸೋಹದ ಸಲುವಾಗಿ ಬಾಳೆ ಎಲೆಗಳನ್ನು ಮುಂದಿನ ವರ್ಷಕ್ಕೂ ಸಂಗ್ರಹಿಸುವುದೇ ಈ ಬಾಳೆ ಮುಹೂರ್ತದ ಉದ್ದೇಶ. ಬಾಳೆ ಗಿಡಗಳನ್ನು ನೆಟ್ಟು ಪರ್ಯಾಯದ ತಯಾರಿ ಆರಂಭಿಸಲಾಯಿತು.
ಇದನ್ನೂ ಓದಿ: Kalaburagi: 111 ದಿನ ಉಪವಾಸ, ಮೌನವ್ರತ ಮಾಡಿದ ಕಲಬುರಗಿಯ ಸ್ವಾಮೀಜಿ!
ನಾಲ್ಕನೇ ಬಾರಿ ಸರ್ವಜ್ಞ ಪೀಠ ಏರಲು ಸಿದ್ಧತೆ
ವಿದೇಶಯಾನದ ಮೂಲಕ ಮಾಧ್ವ ಪರಂಪರೆಯಲ್ಲಿ ಗಮನ ಸೆಳೆದಿರುವ ಪುತ್ತಿಗೆಶ್ರೀ ನಾಲ್ಕನೇ ಬಾರಿ ಸರ್ವಜ್ಞ ಪೀಠ ಏರಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಮುಂದಿನ ಒಂದು ವರ್ಷದವರೆಗೂ ನಾನಾ ತೀರ್ಥಕ್ಷೇತ್ರದ ಸಂದರ್ಶನ ಮಾಡಲಿದ್ದಾರೆ.
ಇದನ್ನೂ ಓದಿ: Anti Rape Footwear: ಅತ್ಯಾಚಾರ ತಡೆಯುತ್ತೆ ಈ ಚಪ್ಪಲಿ! ಕಲಬುರಗಿ ವಿದ್ಯಾರ್ಥಿನಿಯಿಂದ ಸಂಶೋಧನೆ
ಬಾಳೆ ಮುಹೂರ್ತ ಸಂಪನ್ನ
ರಥ ಬೀದಿಯಲ್ಲಿ ಬಾಳೆಯ ಗಿಡಗಳನ್ನು ಹಿಡಿದು ಭವ್ಯ ಮೆರವಣಿಗೆ ಗಮನ ಸೆಳೆಯಿತು. ಕೃಷ್ಣ ಮುಖ್ಯಪ್ರಾಣ, ಚಂದ್ರೇಶ್ವರ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಬಾಳೆ ಮುಹೂರ್ತ ಸಂಪನ್ನಗೊಂಡಿತು.
ಮಾಹಿತಿ, ವಿಡಿಯೋ: ಪರೀಕ್ಷಿತ್ ಶೇಟ್, ಉಡುಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ