• Home
  • »
  • News
  • »
  • udupi
  • »
  • Udupi Beach: ಈ ಪ್ರಸಿದ್ಧ ಬೀಚ್​ಗೆ ರಾತ್ರಿ ಬರಬೇಡಿ! ಪ್ರವಾಸಿಗರಿಗೆ ಎಚ್ಚರಿಕೆ

Udupi Beach: ಈ ಪ್ರಸಿದ್ಧ ಬೀಚ್​ಗೆ ರಾತ್ರಿ ಬರಬೇಡಿ! ಪ್ರವಾಸಿಗರಿಗೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸಮಯದಲ್ಲಿ ಬೀಚ್​ನಲ್ಲಿ ಕೂರುವುದನ್ನು ನಿರ್ಬಂಧಿಸಲಾಗಿದೆ. ಆದರೂ ನಿಯಮ ಉಲ್ಲಂಘಿಸಿದ್ದಲ್ಲಿ ಮುಂದಾಗುವ ಯಾವುದೇ ಪ್ರತಿಕ್ರಿಯೆಗಳಿಗೆ ತಾವೇ ಹೊಣೆಗಾರರು ಎಂದು‌ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

  • Share this:

    ಉಡುಪಿ: ಜಿಲ್ಲೆಯ ಪ್ರಸಿದ್ಧ ಬೀಚ್ ತಾಣಗಳಲ್ಲಿ‌ ಪಡುಕೆರೆಯೂ ಒಂದು. ಇಲ್ಲಿನ ನೈಸರ್ಗಿಕ ಸೌಂದರ್ಯದ ನಡುವೆ ಕಡಲು ಚಾಚಿಕೊಂಡಿದ್ದು, ಅಲಲ್ಲಿ ಕಡಲ್ಕೊರೆತ ತಡೆಗಟ್ಟಲೆಂದು ಹಾಸಲಾದ ಕಲ್ಲುಗಳು ಬೀಚ್​ಗೆ (Padukere Beach) ಆಗಮಿಸುವವರ ಕಣ್ಮನ ಸೆಳೆಯುತ್ತದೆ. ಆದರೆ, ಇದೀಗ ಅದೇ ಆಕರ್ಷಣೆಯು ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡಿದೆ. ಹಾಗಾಗಿ ಸಾರ್ವಜನಿಕರು ಪಡುಕೆರೆ ಬೀಚ್ ನಿಂದ ರಾತ್ರಿ ವೇಳೆ ಸಂಚರಿಸದಂತೆ ಹಾಗೂ ಬೀಚ್ (Udupi Padukere Beach) ಬಳಿ ತಂಗದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಏನಿದು ಸಾರ್ವಜನಿಕ ಎಚ್ಚರಿಕೆ ಅನ್ನೋದನ್ನ ನೋಡೋಣ.


    ಸೂಚನಾ ಫಲಕ ಅಳವಡಿಕೆ
    ಸರ್ವ ಸಂಸ್ಥೆಗಳ ಒಕ್ಕೂಟ ಪಡುಕೆರೆ ಹೆಸರಿ‌ನಲ್ಲಿ ಪಡುಕೆರೆ ಬೀಚ್ ಎಂಟ್ರಿಯಾಗುವ ಪ್ರಮುಖ ರಸ್ತೆಯಲ್ಲಿಯೇ ಫ್ಲೆಕ್ಸ್ ಕಾಣಿಸಿಕೊಂಡಿದೆ. ಇದರಲ್ಲಿ ಬೀಚ್ ಗೆ ಆಗಮಿಸುವವರಿಗೆ ಸಮಯ ನಿಗದಿಪಡಿಸಲಾಗಿದೆ. ಹಾಗೂ ಪಡುಕೆರೆಯ ಸಾಂಸ್ಕೃತಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಣಯವೆಂದು ತಿಳಿಸಲಾಗಿದೆ.


    ಸಾರ್ವಜನಿಕರ ದಿಗ್ಬಂಧನ
    ಸದ್ಯ ಹಾಕಲಾಗಿರುವ ಫ್ಲೆಕ್ಸ್ ನಲ್ಲಿ ಪ್ರವಾಸಿಗರು ರಾತ್ರಿ 8 ಗಂಟೆಯಿಂದ ಮುಂಜಾನೆ 6ರ ತನಕ ಮಟ್ಟುವಿನಿಂದ ಶಾಂತಿನಗರದವರೆಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ ಎಂದು ನಮೂದಿಸಲಾಗಿದೆ. ಅಲ್ಲದೇ, ಈ ಸಮಯದಲ್ಲಿ ಬೀಚ್​ನಲ್ಲಿ ಕೂರುವುದನ್ನು ನಿರ್ಬಂಧಿಸಲಾಗಿದೆ. ಆದರೂ ನಿಯಮ ಉಲ್ಲಂಘಿಸಿದ್ದಲ್ಲಿ ಮುಂದಾಗುವ ಯಾವುದೇ ಪ್ರತಿಕ್ರಿಯೆಗಳಿಗೆ ತಾವೇ ಹೊಣೆಗಾರರು ಎಂದು‌ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಕೊನೆಯದಾಗಿ, ನಮ್ಮ ಭಾವನೆಗಳನ್ನು ಗೌರವಿಸುವಂತೆಯೂ ಕೇಳಿಕೊಳ್ಳಲಾಗಿದೆ.


    ಇದನ್ನೂ ಓದಿ: Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!


    ಯಾಕೆ ಹೀಗೆ?
    ಇತ್ತೀಚಿನ ದಿನಗಳಲ್ಲಿ ಪಡುಕೆರೆ, ಮಟ್ಟು ಮುಂತಾದೆಡೆ ರಾತ್ರಿ ವೇಳೆ ಆಗಮಿಸುವ ಪ್ರವಾಸಿಗರು ಸಮುದ್ರ ಕಿನಾರೆಯಲ್ಲಿ ಕೂತು ಅನೈತಿಕ ಚಟುವಟಿಕೆಯಲ್ಲಿ ನಿರತರಾಗುತ್ತಾರೆ. ಮದ್ಯ, ಪ್ಲಾಸ್ಟಿಕ್ ಬಾಟಲಿ ಮುಂತಾದವುಗಳನ್ನು ಸಮುದ್ರಕ್ಕೆಸೆದು ಹಾನಿ ಮಾಡುತ್ತಿದ್ದಾರೆ ಎಂಬ ಉದ್ದೇಶದಿಂದ ಈ ಸೂಚನಾ ಫಲಕ ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ.


    ಇದನ್ನೂ ಓದಿ: Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!


    ಹೀಗಾಗಿ ಮೀನುಗಾರಿಕೆ ಹಾಗೂ ಕಡಲಿನ ಜಲಚರಗಳಿಗೂ ಹಾನಿ ಉಂಟಾಗುವ ಸಾಧ್ಯತೆಯಿದೆ. ರಾತ್ರಿ ಸಮಯದಲ್ಲಿ ಬೀಚ್ ಬದಿಯಲ್ಲಿ ಅಡ್ಡಾಡುವುದರಿಂದ ಪರಿಸರದ ಮೇಲಿನ ಹಾನಿಯೂ ಹೆಚ್ಚಾಗುತ್ತಿದೆ ಅನ್ನೋದು ಸ್ಥಳೀಯರ ಆತಂಕ. ಜೊತೆಗೆ, ಸ್ಥಳೀಯ ಮನೆಗಳಲ್ಲಿ ವಾಸಿಸುವವರಿಗೂ ಅಪರಿಚಿತ ಪ್ರವಾಸಿಗರಿಂದ ಉಂಟಾಗುವ ಅನಗತ್ಯ ಕಿರಿಕಿರಿಯಿಂದ ತಪ್ಪಿಸಲು ಈ ನಿರ್ಧಾರಕ್ಕೆ ಸಾರ್ವಜನಿಕರು ಬಂದಿದ್ದಾರೆ ಎನ್ನಲಾಗಿದೆ.


    ಹೀಗಾಗಿ ಉಡುಪಿಯ ಪಡುಕೆರೆ ಬೀಚ್ ಗೆ ತೆರಳುವವರು ಸೂರ್ಯ ಮುಳುಗುತ್ತಿದ್ದಂತೆ ವಾಪಸ್ ಹೊರಡಲು ಅಣಿಯಾಗಬೇಕಿದೆ.

    Published by:ಗುರುಗಣೇಶ ಡಬ್ಗುಳಿ
    First published: