• Home
  • »
  • News
  • »
  • udupi
  • »
  • Udupi News: ಉಡುಪಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಸಿಹಿಸುದ್ದಿ!

Udupi News: ಉಡುಪಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಸಿಹಿಸುದ್ದಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಡುಪಿ ಜಿಲ್ಲೆಯ ಯುವಕರು ಜೆ.ಎಸ್.ಡಬ್ಲ್ಯೂ ಸಂಸ್ಥೆಯ ಬ್ರ್ಯಾಂಡ್ ಪ್ರಮೋಟರ್ ಆಗುವ ಅವಕಾಶ ಇಲ್ಲಿದೆ. ಆಸಕ್ತರು ಕೂಡಲೇ ತಮ್ಮ ಸ್ವವಿವರದೊಂದಿಗೆ ಅರ್ಜಿ‌ ಸಲ್ಲಿಸಬಹುದಾಗಿದೆ.

  • Share this:

    ಉಡುಪಿ: ಜಿಲ್ಲೆಯ ನಿರುದ್ಯೋಗಿ ಯುವಕರಿಗೊಂದು ಸಿಹಿ ಸುದ್ದಿ. ಪ್ರತಿಷ್ಠಿತ ಸ್ಟೀಲ್ ಉತ್ಪಾದನಾ ಸಂಸ್ಥೆ ಜೆ.ಎಸ್.ಡಬ್ಲ್ಯೂ ನಿಯೋ ಸ್ಟೀಲ್ (JSW Neosteel) ಸಂಸ್ಥೆಯು ತಮ್ಮಲ್ಲಿ ದುಡಿಯಲು ಆಸಕ್ತರಿರುವ ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಬ್ರ್ಯಾಂಡ್ ಪ್ರಮೋಟರ್ (Brand Promoter) ಹುದ್ದೆಗೆ ನೇಮಕಾತಿ ನಡೆಸಲಿರುವ JSW Neosteel ಬಯಸುವ ವಿದ್ಯಾರ್ಹತೆ, ಅನುಭವ, ವಯೋಮಿತಿ ಹಾಗೂ ಅರ್ಜಿ ಸಲ್ಲಿಸಬೇಕಾದ ವಿಧಾನ ಈ ಎಲ್ಲದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

    ಸಂಸ್ಥೆಯ ಹೆಸರುಜೆ.ಎಸ್.ಡಬ್ಲ್ಯೂ ನಿಯೋ ಸ್ಟೀಲ್
    ಕೆಲಸದ ಸ್ಥಳಉಡುಪಿ
    ವಿದ್ಯಾರ್ಹತೆ ವಿವರಪಿಯುಸಿ ಅಥವಾ ಅದಕ್ಕಿಂತ ಮೇಲ್ಪಟ್ಟು ವಿದ್ಯಾರ್ಹತೆ
    ಉದ್ಯೋಗ ಅನುಭವ?ಅನುಭವಿ ಮತ್ತು ಅನನುಭವಿ ಇಬ್ಬರಿಗೂ ಅವಕಾಶ
    ವಯೋಮಿತಿ30 ವರ್ಷ
    ಈ ವಿಳಾಸಕ್ಕೆ ಅರ್ಜಿ ಸಲ್ಲಿಸಿwww.garodisteel.com ಅಥವಾ ಈ ಮೊಬೈಲ್ ಸಂಖ್ಯೆ ಸಂಪರ್ಕಿಸಿ 9880965686

    ವಿದ್ಯಾರ್ಹತೆ ವಿವರ ಇಲ್ಲಿದೆ
    JSW Neosteel ನಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಪಿಯುಸಿ ಅಥವಾ ಅದಕ್ಕಿಂತ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿರುತ್ತೆ.


    ಉದ್ಯೋಗ ಅನುಭವ?
    Brand Promoter ಗೆ ನಡೆಯಲಿರುವ ನೇಮಕಾತಿಯಲ್ಲಿ ಅನುಭವಿ (Experienced) ಹಾಗೂ ಅನನುಭವಿ (Fresher) ಕೂಡಾ ಭಾಗವಹಿಸಬಹುದಾಗಿದೆ.


    ಕಾರ್ಯ ವ್ಯಾಪ್ತಿ ಎಲ್ಲಿ?
    JSW Neosteel ನ ಬ್ರ್ಯಾಂಡ್ ಪ್ರಮೋಟರ್ ಕಾರ್ಯ ವ್ಯಾಪ್ತಿಯು ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾಗೂ ಕುಂದಾಪುರ ವ್ಯಾಪ್ತಿಯಲ್ಲಾಗಿರುತ್ತದೆ.


    ವಯೋಮಿತಿ ಮತ್ತು ವೇತನದ ವಿವರಗಳು ಇಲ್ಲಿವೆ ನೋಡಿ
    ಬ್ರ್ಯಾಂಡ್ ಪ್ರಮೋಟರ್ ಆಗಿ ಸೇವೆ ಸಲ್ಲಿಸುವವರು ಪುರುಷ ಅಭ್ಯರ್ಥಿಯಾಗಿದ್ದು, ದ್ವಿಚಕ್ರ ವಾಹನ ಹೊಂದಿರುವುದು ಕಡ್ಡಾಯವಾಗಿರುತ್ತದೆ. ವಯೋಮಿತಿ 30 ವರ್ಷ ಮೀರಬಾರದು. ಅತ್ಯುತ್ತಮ ವೇತನ ಪಡೆಯುವ ಅವಕಾಶವಿದೆ.


    ಇದನ್ನೂ ಓದಿ: Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!


    ಅರ್ಜಿ ಸಲ್ಲಿಸುವುದು ಹೀಗೆ
    ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸ್ವ ವಿವರ ಹೊಂದಿದ ಅರ್ಜಿಯನ್ನು hr@garodisteel.com ಗೆ ಸಲ್ಲಿಸಬಹುದಾಗಿದೆ.


    ಹೆಚ್ಚಿ‌‌ನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?
    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.garodisteel.com ಅಥವಾ ಮೊಬೈಲ್ ಸಂಖ್ಯೆ 9880965686 ಸಂಪರ್ಕಿಸಬಹುದಾಗಿದೆ.


    ಇದನ್ನೂ ಓದಿ: Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಕೇಳಿಬಂತು ವಿಚಿತ್ರ ಕೂಗು!


    ಉಡುಪಿ ಜಿಲ್ಲೆಯ ಯುವಕರು ಜೆ.ಎಸ್.ಡಬ್ಲ್ಯೂ ಸಂಸ್ಥೆಯ ಬ್ರ್ಯಾಂಡ್ ಪ್ರಮೋಟರ್ ಆಗುವ ಅವಕಾಶ ಇಲ್ಲಿದೆ. ಆಸಕ್ತರು ಕೂಡಲೇ ತಮ್ಮ ಸ್ವವಿವರದೊಂದಿಗೆ ಅರ್ಜಿ‌ ಸಲ್ಲಿಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: