• Home
 • »
 • News
 • »
 • udupi
 • »
 • Udupi: ಹೆಸರು ಬದಲಾವಣೆ ಪರ್ವ ಶುರು; ಈ 6 ಸರ್ಕಲ್​ಗಳಿಗೆ ಮರು ನಾಮಕರಣ

Udupi: ಹೆಸರು ಬದಲಾವಣೆ ಪರ್ವ ಶುರು; ಈ 6 ಸರ್ಕಲ್​ಗಳಿಗೆ ಮರು ನಾಮಕರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ದಾರ್ಶನಿಕರಾದ ಮಧ್ವಾಚಾರ್ಯ, ವಾದಿರಾಜ, ತುಳುನಾಡಿನ ಕೋಟಿ-ಚೆನ್ನಯ್ಯ, ಶ್ರೀರಾಮ ದೇವರು, ಸಮಾಜ ಸುಧಾರಕರಾದ ನಾರಾಯಣ ಗುರು ಮತ್ತು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಹೆಸರುಗಳನ್ನು ಇಡಲಾಗಿದೆ.

 • Share this:

  ಉಡುಪಿ ನಗರದ ಆರು ವೃತ್ತಗಳಿಗೆ ಹೆಸರು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಶ್ರೀರಾಮ, ದಾರ್ಶನಿಕರು, ಯೋಧರು ಮತ್ತು ಸಾಧಕರ ಹೆಸರಿಡಲು ಉಡುಪಿ ನಗರ ಪಾಲಿಕೆ (CMC) ಸಲ್ಲಿಸಿದ್ದ ಪ್ರಸ್ತಾವನೆಗೆ ಪೌರಾಡಳಿತ ನಿರ್ದೇಶನಾಲಯ ಅನುಮೋದನೆ ನೀಡಿದೆ. ಇದರೊಂದಿಗೆ ಉಡುಪಿಯಲ್ಲಿ (Udupi Circle Name Changed)  ಭಾರತೀಯ ದಾರ್ಶನಿಕರಾದ ಮಧ್ವಾಚಾರ್ಯ, ವಾದಿರಾಜ, ತುಳುನಾಡಿನ ಕೋಟಿ-ಚೆನ್ನಯ್ಯ, ಶ್ರೀರಾಮ ದೇವರು, ಸಮಾಜ ಸುಧಾರಕರಾದ ನಾರಾಯಣ ಗುರು ಮತ್ತು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಹೆಸರುಗಳನ್ನು ವಿವಿಧ ಉಡುಪಿ ನಗರದ ವೃತ್ತಗಳಿಗೆ ಇಡಲು ನಿರ್ಧರಿಸಲಾಗಿದೆ.


  ಸರ್ಕಾರದಿಂದ ಅಧಿಕೃತ ಸುತ್ತೋಲೆ
  ಈ ಕುರಿತು ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಸಾರ್ವಜನಿಕರ ಮನವಿ ಮೇರೆಗೆ ಉಡುಪಿ ನಗರದಲ್ಲಿ ವೃತ್ತಗಳಿಗೆ ಹೆಸರಿಡುವ ನಿರ್ಣಯವನ್ನು ಅಂಗೀಕರಿಸಲಾಗಿದೆ. 1964ರ ಕರ್ನಾಟಕ ಮುನಿಸಿಪಾಲ್ಟೀಸ್ ಕಾಯ್ದೆಯ ಸೆಕ್ಷನ್ 211ರ ಪ್ರಕಾರ ನಗರದ 6 ಪ್ರಮುಖ ವೃತ್ತಗಳನ್ನು ಹೆಸರಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ನಗರದ ಬನ್ನಂಜೆ ವೃತ್ತಕ್ಕೆ ‘ನಾರಾಯಣ ಗುರು ವೃತ್ತ’ ಮತ್ತು ಕಲ್ಸಂಕ ವೃತ್ತಕ್ಕೆ ‘ಮಧ್ವಾಚಾರ್ಯ ವೃತ್ತ'ಎಂದು ನಾಮಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Gokarna Papad: ಗೋಕರ್ಣ ಹಪ್ಪಳಕ್ಕೆ ವಿದೇಶದ ಕನಸು! ದೇಸಿ ರುಚಿಗೆ ಭರ್ಜರಿ ಡಿಮ್ಯಾಂಡ್


  ಡಯಾನಾ ವೃತ್ತ ಇನ್ನು ಮುಂದೆ ವಾದಿರಾಜ ಸರ್ಕಲ್
  ಅಲ್ಲದೇ ಉಡುಪಿ ನಗರದ ಡಯಾನಾ ವೃತ್ತವನ್ನು ಇನ್ನು ಮುಂದೆ ‘ವಾದಿರಾಜ ಸರ್ಕಲ್ ಎಂದು ಕರೆಯಲಾಗುವುದು. ಜೊತೆಗೆ ಸಂತೆಕಟ್ಟೆ-ಕಲ್ಯಾಣಪುರ ರಸ್ತೆಯ ಜಂಕ್ಷನ್‌ಗೆ ‘ಕೋಟಿ-ಚೆನ್ನಯ ವೃತ್ತ’ ಎಂದು ನಾಮಕರಣ ಮಾಡಲಾಗುವುದು. ಬ್ರಹ್ಮಗಿರಿಯ ವೃತ್ತಕ್ಕೆ ಆಸ್ಕರ್ ಫರ್ನಾಂಡಿಸ್ ಸರ್ಕಲ್ ಎಂದು ನಾಮಕರಣ ಮಾಡಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: Junior Rishab Shetty: ಇವ್ರೇ ನೋಡಿ ಕಾಂತಾರದ ಜ್ಯೂನಿಯರ್ ರಿಷಬ್ ಶೆಟ್ಟಿ! ಲುಕ್ಕು, ಗೆಟಪ್ಪು ಎಲ್ಲಾ ಸೇಮ್


  ಇದೇ ವೇಳೆ, ಸರ್ಕಾರದ ಸುತ್ತೋಲೆಯಂತೆ ಪರ್ಕಳ-ಕೊಡಂಗೆ-ಸರಳಬೆಟ್ಟು ರಸ್ತೆಯ ಜಂಕ್ಷನ್‌ಗೆ ‘ಶ್ರೀರಾಮ ವೃತ್ತ’ ಎಂದು ನಾಮಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: