• Home
 • »
 • News
 • »
 • udupi
 • »
 • Job Fair: ಉಡುಪಿಯಲ್ಲಿ ಕೆಲಸ ಹುಡುಕ್ತಿದ್ದೀರಾ? ಇಲ್ಲಿದೆ ಸುವರ್ಣಾವಕಾಶ

Job Fair: ಉಡುಪಿಯಲ್ಲಿ ಕೆಲಸ ಹುಡುಕ್ತಿದ್ದೀರಾ? ಇಲ್ಲಿದೆ ಸುವರ್ಣಾವಕಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಡುಪಿಯ ವಿದ್ಯಾವಂತ ಯುವಕರಿಗೊಂದು ಸುವರ್ಣಾವಕಾಶ. ನೀವೇನಾದರೂ ಉದ್ಯೋಗ ಹುಡುಕಾಟದಲ್ಲಿದ್ದರೆ, ನಿಮ್ಮ ಊರಲ್ಲೇ ನಡೆಯುವ ಈ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

 • Share this:

  ಉಡುಪಿ: ಜಿಲ್ಲೆಯ ನಿರುದ್ಯೋಗಿ ಯುವಕರಿಗೊಂದು ಸುವರ್ಣಾವಕಾಶ. ನೀವೇನಾದರೂ ಉದ್ಯೋಗ ಹುಡುಕುತ್ತಿದ್ದರೆ, ಕನಿಷ್ಟ ವಿದ್ಯಾರ್ಹತೆ ಹೊಂದಿದ್ದರೆ ನಿಮಗಾಗಿ ಕಾರ್ಪೊರೇಟ್ ಕಂಪೆನಿಗಳಿಂದ ಹಿಡಿದು ಹಲವು ಕಂಪನಿಗಳಲ್ಲಿ ಉದ್ಯೋಗಾವಕಾಶವಿದೆ. SSLC ಯಿಂದ ಇಂಜಿನಿಯರಿಂಗ್ ಪದವೀಧರರವರೆಗಿನ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ (Job Alert) ಸಲ್ಲಿಸಬಹುದು. ಹಾಗಿದ್ರೆ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 11 ರಂದು ಉಡುಪಿಯಲ್ಲಿ (Udupi News) ನಡೆಯಲಿರುವ 'ಮಿನಿ ಉದ್ಯೋಗ ಮೇಳ'ದಲ್ಲಿ (Job Fair In Udupi) ಭಾಗವಹಿಸುವ ಮೂಲಕ ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಪಡೆಯಬಹುದಾಗಿದೆ.


  ಯಾರೆಲ್ಲ ಅರ್ಜಿ ಸಲ್ಲಿಸಬಹುದು?
  SSLC, PUC, ITI, ಪದವಿ, ಬಿ.ಇ. ಹಾಗೂ ಇತರೆ ಪದವೀಧರ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ‌.


  ಯಾವೆಲ್ಲ ಕಂಪೆನಿಗಳು ಭಾಗಿ?
  ಅಕ್ಟೋಬರ್‌ 11 ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಆಲೈಕ್ ಟೆಕ್ನಾಲಜಿ ಪ್ರೈ.ಲಿ, ರಾಂಡ್ ಸ್ಟಾಂಡ್ ಇಂಡಿಯಾ ಪ್ರೈ.ಲಿ , ಸಂಗೀತಾ ಮೊಬೈಲ್ಸ್ , ಫ್ಲಿಪ್ ಕಾರ್ಟ್ ಹಾಗೂ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ.ಲಿ. ಕಂಪನಿಗಳು ಭಾಗವಹಿಸಲಿದೆ.


  ಸಂದರ್ಶನ ಎಲ್ಲಿ?
  'ಮಿನಿ ಉದ್ಯೋಗ ಮೇಳ'ದ ನೇಮಕಾತಿ ಸಂದರ್ಶನವು ನಾಳೆ (ಅಕ್ಟೋಬರ್ 11) ಬೆಳಗ್ಗೆ 10.30 ಕ್ಕೆ ಉಡುಪಿಯ ಅನುರಾಗ ಕಾಂಪ್ಲೆಕ್ಸ್ ನಲ್ಲಿರುವ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ.ಲಿ. ನಡೆಯಲಿದೆ.


  ದಾಖಲೆ‌ ಪ್ರಮಾಣ ಪತ್ರ ಕಡ್ಡಾಯ
  'ಮಿನಿ ಉದ್ಯೋಗ ಮೇಳ'ದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ತಾವು ಉತ್ತೀರ್ಣರಾದ ತರಗತಿಯ ಅಂಕಪಟ್ಟಿ, ಸ್ವ - ವಿವರವುಳ್ಳ ರೆಸ್ಯೂಮ್ / ಸಿವಿ ಹಾಗೂ ಆಧಾರ್ ಕಾರ್ಡ್ ಈ ಎಲ್ಲಾ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಹಾಜರರಿಬೇಕಾಗುತ್ತದೆ.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
  ಆಸಕ್ತ ಅಭ್ಯರ್ಥಿಗಳು ಹೆಚ್ಚಿನ‌ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ , ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ , ರಜತಾದ್ರಿ , ಮಣಿಪಾಲ, ಉಡುಪಿ ಸಂಪರ್ಕಿಸಬಹುದಾಗಿದೆ.


  ಅಥವಾ ಮೊಬೈಲ್ ಸಂಖ್ಯೆ : 8105618291, 9945856670 , 8197440155 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ.


  ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


  ಉಡುಪಿಯ ವಿದ್ಯಾವಂತ ಯುವಕರಿಗೊಂದು ಸುವರ್ಣಾವಕಾಶ. ನೀವೇನಾದರೂ ಉದ್ಯೋಗ ಹುಡುಕಾಟದಲ್ಲಿದ್ದರೆ, ನಿಮ್ಮ ಊರಲ್ಲೇ ನಡೆಯುವ ಈ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: