Ravi Katapadi: ಭಯಂಕರ ವೇಷದೊಳಗಿನ ಬಂಗಾರದ ಮನುಷ್ಯ! ಕೋಟಿಗೊಬ್ಬ ರವಿ ಕಟಪಾಡಿ

ಹೇಳಿ ಕೇಳಿ ರವಿಕಟಪಾಡಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಸ್ವಂತ ವಾಸಕ್ಕೊಂದು ಗಟ್ಟಿ ಮನೆ ಇಲ್ಲ. ಕೂಲಿ ಕೆಲಸ ಬಿಟ್ಟರೆ ಬೇರೆ ಯಾವುದೇ ಆರ್ಥಿಕ ಮೂಲವಿಲ್ಲ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉಡುಪಿ: ನೋಡಲು ಅದೆಷ್ಟು ಭಯಾನಕ ಆ ವೇಷ. ಕನಸಲ್ಲೂ ಬೆಚ್ಚಿ ಬೀಳುವಷ್ಟು ಭೀಕರವಾದ ಮುಖ. ಆದರೆ ಇಂತಹ ಕ್ರೂರ ಮುಖದ ಹಿಂದೆ ಬಂಗಾರದ ಮನುಷ್ಯನಿದ್ದಾನೆ. ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸೋ ಹೃದಯವಂತನಿದ್ದಾನೆ. ಆತನೇ ಉಡುಪಿಯ ರವಿ ಕಟಪಾಡಿ. ಹೌದು, ರವಿ ಕಟಪಾಡಿ (Ravi Katpadi) ಹೆಸರು ಎಲ್ಲರಿಗೂ ಚಿರಪರಿಚಿತ. ಕೃಷ್ಣ ಜನ್ಮಾಷ್ಟಮಿ (Krishna Janmashtami) ಬಂತಂದ್ರೆ ಸಾಕು ಎರಡು ದಿನಗಳ ಕಾಲ ವೇಷ ಧರಿಸಿ ನಗರದಲ್ಲೆಡೆ ಸಂಚರಿಸಿ ಹಣ ಸಂಗ್ರಹಿಸುವ ಮಹಾ ಸಾಧಕ. ಬಡಮಕ್ಕಳ ಚಿಕಿತ್ಸೆ (Children Tratment) ಮೊತ್ತಕ್ಕಾಗಿ ಹಣ ಸಂಗ್ರಹಿಸುವ ಇವರ ಈ ನಿಸ್ವಾರ್ಥ ಸೇವೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.

    ಕೋಟಿಗೊಬ್ಬ ರವಿ ಕಟಪಾಡಿ
    ರವಿ ಕಟಪಾಡಿ ನಿಸ್ವಾರ್ಥ ಸೇವೆಗೆ ತಲೆದೂಗದವರೇ ಇಲ್ಲ. ಅಮಿತಾಬ್ ಬಚ್ಚನ್, ಅನುಪಮ್ ಖೇರ್​ ಅವರಂತಹ ಬಾಲಿವುಡ್ ದಿಗ್ಗಜರೇ ರವಿ ಕಟಪಾಡಿ ಸೇವೆಗೆ ಬೆಕ್ಕಸ ಬೆರಗಾಗಿದ್ದರು. ರವಿ ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯ ಎರಡು ದಿನಗಳ ಕಾಲ ಭಯಂಕರ ವೇಷ ಧರಿಸಿ ಊರೆಲ್ಲ ಅಡ್ಡಾಡಿ ಹಣ ಸಂಗ್ರಹಿಸುತ್ತಾರೆ.



    ಹೀಗೆ ಕಳೆದ ಎಂಟು ವರ್ಷದ ಇವರ ಈ ಕಾಯಕದಲ್ಲಿ ಒಟ್ಟು ಸಂಗ್ರಹವಾದ ಹಣದ ಮೊತ್ತ ಒಂದು ಕೋಟಿ ರೂಪಾಯಿ ಮಿಕ್ಕಿದೆ. ಹೀಗೆ ಸಂಗ್ರಹಿತವಾದ ಹಣದಲ್ಲಿ ಒಂದು ಪೈಸೆ ತಾನಿರಿಸಿಕೊಳ್ಳದೇ, ಬಡ ಮಕ್ಕಳ ಗಂಭೀರ ಕಾಯಿಲೆಯ ಚಿಕಿತ್ಸೆಗೆ ದಾನವಾಗಿ ನೀಡ್ತಿರೋದೆ ವಿಶೇಷ.



    ಬಡಪಾಯಿ ಹೃದಯವಂತ
    ಹೇಳಿ ಕೇಳಿ ರವಿಕಟಪಾಡಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಸ್ವಂತ ವಾಸಕ್ಕೊಂದು ಗಟ್ಟಿ ಮನೆ ಇಲ್ಲ. ಕೂಲಿ ಕೆಲಸ ಬಿಟ್ಟರೆ ಬೇರೆ ಯಾವುದೇ ಆರ್ಥಿಕ ಮೂಲವಿಲ್ಲ. ಆದರೆ ಬಡ ಮಕ್ಕಳ ರೋಗಗಳಿಗೆ ಸ್ಪಂದಿಸೋ ಕಾತುರ. ಹಾಗಾಗಿ ಅಷ್ಟಮಿ ಬಂದರೆ ಸಾಕು ವಿಭಿನ್ನ ವೇಷಗಳನ್ನು ಧರಿಸಿ ಬೀದಿಬೀದಿ ಅಲೆದಾಡಿ ಹಣ ಸಂಗ್ರಹಿಸಲು ಇವರು ಮುಂದಾಗುತ್ತಾರೆ.

    ಇದನ್ನೂ ಓದಿ: Kadubu Recipe: ಸಿಹಿಸಿಹಿಯಾದ ಉತ್ತರ ಕನ್ನಡ ಸ್ಪೆಷಲ್ ಕಡುಬು ಮಾಡಿ! ಇಲ್ಲಿದೆ ನೋಡಿ ರೆಸಿಪಿ

    ರವಿ ಫ್ರೆಂಡ್ಸ್ ಸಾಥ್
    ರವಿ ಕಟಪಾಡಿಗೆ ಬೆಂಬಲವಾಗಿ ಆಸುಪಾಸಿನ ಸುಮಾರು ನೂರು ತರುಣರು ‘ರವಿ ಫ್ರೆಂಡ್ಸ್ ಹೆಸರಲ್ಲಿ ಜೊತೆಯಾಗಿದ್ದಾರೆ. ಈ ಬಾರಿಯೂ ಎಂದಿನಂತೆ ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ 10 ಬಡ ಮಕ್ಕಳ ಗಂಭೀರ ಖಾಯಿಲೆಗಳ ಚಿಕಿತ್ಸೆಗೆ ದಾನವಾಗಿ ಹಸ್ತಾಂತರಿಸಿದ್ದಾರೆ.

    ಇದನ್ನೂ ಓದಿ: Sanikatta Salt: ಎಲ್ಲೂ ಸಿಗ್ತಿಲ್ಲ ಸಾಣಿಕಟ್ಟಾ ಉಪ್ಪು; ಉತ್ಪಾದನೆಯಲ್ಲಿ ಭಾರೀ ಕುಸಿತ, ಕಾರಣ ಏನು?

    ಭಯಾನಕ ವೇಷಕ್ಕೆ ಆದ್ಯತೆ
    ಪ್ರತಿ ಬಾರಿಯೂ ರವಿ ಕಟಪಾಡಿ ಹಣ ಸಂಗ್ರಹದಷ್ಟೇ ಮಹತ್ವವನ್ನ ತನ್ನ ಭಯಾನಕ ವೇಷಕ್ಕೂ ನೀಡುತ್ತಾರೆ. ಒಂದೊಮ್ಮೆ ಇಂತಹ ವೇಷದಿಂದ ತನ್ನ ಆರೊಗ್ಯಕ್ಕೆ ಕುತ್ತು ಉಂಟಾಗಬಹುದು ಅನ್ನೋದಾಗಿ ಗೊತ್ತಿದ್ದರೂ ಅದ್ಯಾವುದೂ ತನ್ನ ಮಹಾತ್ಕಾರ್ಯಕ್ಕೆ ಅಡ್ಡಿಯಾಗಿಲ್ಲ. ಹೀಗಾಗಿಯೇ ನೊಡಿ ರವಿ ಕಟಪಾಡಿ ಈಗ ಕಟಪಾಡಿಯ ಕೋಟಿಗೊಬ್ಬನಾಗಿ ಬದಲಾಗಿದ್ದಾರೆ. ಇವರ ಈ ಸೇವೆಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:ಗುರುಗಣೇಶ ಡಬ್ಗುಳಿ
    First published: