• ಹೋಂ
  • »
  • ನ್ಯೂಸ್
  • »
  • ಉಡುಪಿ
  • »
  • Rakshit Shetty In Udupi: ಸಿಂಪಲ್ ಸ್ಟಾರ್ ಗೋ ಪ್ರೇಮ! ರಕ್ಷಿತ್ ಶೆಟ್ಟಿಗೆ ಸಿಕ್ತು ಶಿವನ ಆಶೀರ್ವಾದ!

Rakshit Shetty In Udupi: ಸಿಂಪಲ್ ಸ್ಟಾರ್ ಗೋ ಪ್ರೇಮ! ರಕ್ಷಿತ್ ಶೆಟ್ಟಿಗೆ ಸಿಕ್ತು ಶಿವನ ಆಶೀರ್ವಾದ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಕ್ಷಿತ್ ಶೆಟ್ಟಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆಯುತ್ತಿರುವ ಯಾಗದ ಸಿದ್ದತೆ ತಯಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ತಮ್ಮ ಗೋ ಪ್ರೇಮ ಮೆರೆದಿದ್ದಾರೆ.

  • News18 Kannada
  • 5-MIN READ
  • Last Updated :
  • Udupi, India
  • Share this:

    ಉಡುಪಿ: ಚಾರ್ಲಿ ಸಿನಿಮಾದಲ್ಲಿ ಶ್ವಾನ ಪ್ರೇಮ ಮೆರೆದಿದ್ದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ (Rakshit Shetty), ತಮ್ಮ ಹುಟ್ಟೂರು ಉಡುಪಿಯ (Rakshit Shetty In Udupi) ಶಿವಪಾಡಿಯಲ್ಲಿ ಅಳಿವಿನಂಚಿನ ಪುಂಗನೂರು ತಳಿಯ ಗೋವುಗಳನ್ನು (Rakshit Shetty Cow Love) ಮುದ್ದಾಡಿ ಸಂತಸಪಟ್ಟಿದ್ದಾರೆ.


    ಅತಿರುದ್ರ ಮಹಾಯಾಗದ ದರ್ಶನ ಪಡೆದ
    ಉಡುಪಿಯ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಅತಿರುದ್ರ ಮಹಾಯಾಗ’ ನಡೆಯುತ್ತಿದೆ. ಸುಮಾರು 4 ಕೋಟಿ ವೆಚ್ಚದಲ್ಲಿ ನಡೆಯುವ ಯಾಗಕ್ಕಾಗಿ ಭರದ ಸಿದ್ದತೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.




    ಇದನ್ನೂ ಓದಿ: Kollur Mookambika Temple: 400 ವರ್ಷಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಿಗೆ ಹೊಸ ರಥ!




    ಗೋವುಗಳನ್ನು ಮುದ್ದಾಡಿದ ಸಿಂಪಲ್  ಸ್ಟಾರ್!
    ಬಳಿಕ ರಕ್ಷಿತ್ ಶೆಟ್ಟಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆಯುತ್ತಿರುವ ಯಾಗದ ಸಿದ್ದತೆ ತಯಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ತಮ್ಮ ಗೋ ಪ್ರೇಮ ಮೆರೆದಿದ್ದಾರೆ.


    ಇದನ್ನೂ ಓದಿ: Transgenders Canteen In Udupi: ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು, ಈ ವಿಶೇಷ ಕ್ಯಾಂಟೀನ್‌ಗೆ ಬೇಕು ಜನ ಬೆಂಬಲ


    ಪುಂಗನೂರು ತಳಿ ಅಳಿವಿನಂಚಿನಲ್ಲಿರುವ ಗೋ ತಳಿಯಾಗಿದೆ. ಉಡುಪಿಯ ಶಿವಪಾಡಿಯ ಶಿವ ಭಕ್ತರಿಗೆ ಪುಂಗನೂರು ತಳಿಯನ್ನು ಪರಿಚಯಿಸುವ ಸದುದ್ದೇಶದಿಂದ ಕರಾವಳಿಗೆ ಪುಂಗನೂರು ಗೋವುಗಳನ್ನು ತರಿಸಲಾಗಿದೆ.


    ವರದಿ: ಪರೀಕ್ಷಿತ್ ಶೇಟ್, ನ್ಯೂಸ್ 18 ಉಡುಪಿ

    Published by:ಗುರುಗಣೇಶ ಡಬ್ಗುಳಿ
    First published: