• ಹೋಂ
 • »
 • ನ್ಯೂಸ್
 • »
 • ಉಡುಪಿ
 • »
 • Transgenders Canteen In Udupi: ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು, ಈ ವಿಶೇಷ ಕ್ಯಾಂಟೀನ್‌ಗೆ ಬೇಕು ಜನ ಬೆಂಬಲ

Transgenders Canteen In Udupi: ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು, ಈ ವಿಶೇಷ ಕ್ಯಾಂಟೀನ್‌ಗೆ ಬೇಕು ಜನ ಬೆಂಬಲ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬದಲಾವಣೆಯ ದಾರಿ ಹಿಡಿದ ಮಂಗಳಮುಖಿಯರ ಹೆಸರು ಪೂರ್ವಿ, ಡಿಂಪಲ್, ವೈಷ್ಣವಿ ಮತ್ತು ಚಂದನ ಅಂತ.  ಉಡುಪಿ ಮತ್ತು ಮಣಿಪಾಲದಲ್ಲಿ ವೇಶ್ಯಾವಾಟಿಕೆ ಹಾಗೂ ಭಿಕ್ಷಾಟನೆ ನಡೆಸುತ್ತಿದ್ದ ಇವರು ಇಂದು ಸ್ವಂತ ಕ್ಯಾಂಟೀನ್ ಆರಂಭಿಸಿ ನಾಲ್ಕು ಜನರಿಗೆ ಮಾದರಿಯಾಗ್ತಿದ್ದಾರೆ.

 • Share this:

  ಉಡುಪಿ: ಬಸ್ ಸ್ಟಾಂಡ್ ಪಕ್ಕದ ಬೀದಿಬದಿಯಲ್ಲಿ ಚಿಕ್ಕ ಟೇಬಲ್, ಡಬ್ಬಗಳಲ್ಲಿ ವಿಧ ವಿಧದ ತಿಂಡಿ ತಿನಿಸು, ಟೀ. ಚಿಕ್ಕದಾದ್ರೂ ಚೊಕ್ಕ ಕ್ಯಾಂಟೀನ್ (Transgenders Hotel In Udupi)  ಇಟ್ಕೊಂಡಿರೋ ಇವ್ರು ಮಂಗಳಮುಖಿಯರು (Positive Story Of Transgenders) ಅಂದ್ರೆ ಯಾರೂ ನಂಬಲ್ಲ! ಆದ್ರೆ ಉಡುಪಿಯ ಈ ಮಂಗಳಮುಖಿಯರು ಮಾತ್ರ ತಮ್ಮ ಪ್ರಯತ್ನದಿಂದ ಕ್ರಾಂತಿ ಗೀತೆಯನ್ನೇ ಹಾಡುತ್ತಿದ್ದಾರೆ.


  ಹೀಗೆ ಬದಲಾವಣೆಯ ದಾರಿ ಹಿಡಿದ ಮಂಗಳಮುಖಿಯರ ಹೆಸರು ಪೂರ್ವಿ, ಡಿಂಪಲ್, ವೈಷ್ಣವಿ ಮತ್ತು ಚಂದನ ಅಂತ.  ಉಡುಪಿ ಮತ್ತು ಮಣಿಪಾಲದಲ್ಲಿ ವೇಶ್ಯಾವಾಟಿಕೆ ಹಾಗೂ ಭಿಕ್ಷಾಟನೆ ನಡೆಸುತ್ತಿದ್ದ ಇವರು ಇಂದು ಸ್ವಂತ ಕ್ಯಾಂಟೀನ್ ಆರಂಭಿಸಿ ನಾಲ್ಕು ಜನರಿಗೆ ಮಾದರಿಯಾಗ್ತಿದ್ದಾರೆ.


  ಆ ರಾತ್ರಿ ನಡೆದ ಒಂದು ಘಟನೆ!
  ಮಂಗಳಮುಖಿಯರು ವಿಭಿನ್ನ ಆಲೋಚನೆ ಮಾಡಿ ಕ್ಯಾಂಟೀನ್ ತೆರೆಯೋಕೆ ಏನು ಕಾರಣ ಎಂದು ಹುಡುಕ್ತಾ ಹೋದ್ರೆ ಕಳೆದ ವರ್ಷ ನಡೆದ ಆ ಒಂದು ಘಟನೆ ತೆರೆದುಕೊಳ್ಳುತ್ತೆ. 2022ರ ಡಿಸೆಂಬರ್ 16 ರ ರಾತ್ರಿಯದು. ಸಿವಿಲ್ ಡ್ರೆಸ್​ನಲ್ಲಿ ಬಂದ ಎಸ್ಪಿ ಅಕ್ಷಯ ಹಾಕೆ ಎಲ್ಲರನ್ನ ತರಾಟೆಗೆ ತೆಗೆದುಕೊಂಡು ವಶಕ್ಕೆ ಪಡೆದು ಕೊನೆಗೆ ಮರುದಿನ ಬೆಳಗ್ಗೆ ಬಿಟ್ಟು ಕಳುಹಿಸಿದ್ರು. ಆ ಬಳಿಕ ಮುಂದೇನು ಅಂತ ಯೋಚನೆಯಲ್ಲೇ ಈ ನಾಲ್ಕು ಮಂದಿ ಈಗ ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲರಂತೆ ಸ್ವಾಭಿಮಾನಿ, ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಶಪಥ ಮಾಡಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆದಿದ್ದಾರೆ.


  ರಾತ್ರಿಯೇ ಕ್ಯಾಂಟೀನ್ ತೆರೆಯೋಕೆ ಇದೇ ಕಾರಣ
  ಉಡುಪಿಯ ಸಿಟಿ ಬಸ್ ಸ್ಟಾಂಡ್​ ಪಕ್ಕ ರಾತ್ರಿ ಒಂದು ಘಂಟೆಯಿಂದ ಮುಂಜಾನೆ 7ರ ತನಕ ತನಕ ಇವ್ರ ಕ್ಯಾಂಟೀನ್ ತೆರೆದಿರುತ್ತೆ. ಕ್ಯಾಂಟೀನ್​ನಲ್ಲಿ ಸಿಗುವ ರುಚಿರುಚಿಯಾದ ರೈಸ್ ಬಾತ್, ಇಡ್ಲಿ, ಚಹಾ, ಕಾಫಿ ರಾತ್ರಿ ಪ್ರಯಾಣಿಸುವ ಮತ್ತು ರಾತ್ರಿ ಉದ್ಯೋಗ ಮಾಡುವವರ ಹೊಟ್ಟೆ ತಣಿಸುತ್ತೆ. ಬೆಳಗಿನ ಹೊತ್ತಲ್ಲಿ ಕ್ಯಾಂಟೀನ್ ತೆರೆದರೆ ಯಾರೂ ತಿನ್ನೋಕೆ ಬರಲ್ಲ. ರಾತ್ರಿ ವೇಳೆ ನಗರದ ಬಹುತೇಕ ಹೊಟೇಲುಗಳು ಬಂದ್ ಆಗಿರುತ್ತೆ. ಹಾಗಾಗಿ ರಾತ್ರಿ ಪ್ರಯಾಣಕರಿಗೆ ಎಂದೇ ಕ್ಯಾಂಟೀನ್ ತೆಗೆದಿದ್ದಾರೆ ಪೂರ್ವಿ.


  ಇದನ್ನೂ ಓದಿ: ಉಡುಪಿಯಲ್ಲಿ Plastic Road! 1 ಕ್ವಿಂಟಲ್ ಪ್ಲಾಸ್ಟಿಕ್ ಇದ್ರೆ 1 ಕಿಲೋ ಮೀಟರ್ ರಸ್ತೆ ರೆಡಿ!


  ರೆಸ್ಪೆಕ್ಟ್ ಕೊಟ್ಟರೆ ಸಾಕು, ಬೇರೆಲ್ಲ ಸಹಜವಾಗಿ ಬರುತ್ತೆ
  ಸದ್ಯ ಈ ಮಂಗಳಮುಖಿಯರ ಪುಟ್ಟ ಕ್ಯಾಂಟೀನ್ ಪ್ರಯಾಣಿಕರ ಹಸಿವು ನೀಗಿಸುವ ಆಶ್ರಯತಾಣವಾಗಿದೆ. ಕ್ಯಾಂಟೀನ್​ಗೆ ಉತ್ತಮ ರೆಸ್ಪಾನ್ಸ್ ಸಹ ಸಿಗುತ್ತಿದೆ. ನಮಗೆ ಎಲ್ಲರಂತೆ ರೆಸ್ಪೆಕ್ಟ್ ಕೊಟ್ಟರೆ ಅಷ್ಟೇ ಸಾಕು. ನಮಗೆ ಜನರ ಬೆಂಬಲ ಬೇಕು, ನಾವು, ಎಲ್ಲರಂತೆ ಬದುಕಿ ತೋರಿಸುತ್ತೇವೆ ಅಂತಾರೆ ಈ ಮಂಗಳಮುಖಿಯರು.
  ಇದನ್ನೂ ಓದಿ: Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!


  ಉಡುಪಿಯಲ್ಲಿ ಓಪನ್ ಆದ ಈ ಚಿಕ್ಕ ಕ್ಯಾಂಟೀನ್ ಕ್ರಾಂತಿಯ ಗಾಳಿಯನ್ನೇ ಬೀಸಿದೆ. ಇನ್ನೂ ಅನೇಕ ಮಂಗಳಮುಖಿಯರಿಗೆ ಸ್ಪೂರ್ತಿಗೀತೆಯಾಗಿದೆ. ನೀವೂ ಉಡುಪಿಗೆ ಹೋದಾಗ ಇವರ ಕ್ಯಾಂಟೀನ್ ತಿಂಡಿ ತಿನಿಸು ತಿಂದು ಚಹಾ ಹೀರೋಕೆ ಮರೆಯಬೇಡಿ!


  ವರದಿ: ಪರೀಕ್ಷಿತ್ ಶೇಟ್, ನ್ಯೂಸ್ 18 ಉಡುಪಿ

  Published by:ಗುರುಗಣೇಶ ಡಬ್ಗುಳಿ
  First published: