ಉಡುಪಿ: ಪ್ಲಾಸ್ಟಿಕ್, ಪ್ಲಾಸ್ಟಿಕ್ ಪ್ಲಾಸ್ಟಿಕ್! ಎಲ್ ನೋಡಿದ್ರೂ ಪ್ಲಾಸ್ಟಿಕ್ನದ್ದೇ ಹಾವಳಿ. ಎಲ್ಲೆಂದ್ರಲ್ಲಿ ಕಸ ಸೃಷ್ಟಿಯಾಗೋ ಪ್ಲಾಸ್ಟಿಕ್ ಸಮಸ್ಯೆಗೆ (Plastic Problem) ಹೇಗೆ ತಾನೇ ಪರಿಹಾರ ಹುಡುಕೋದು? ಈ ಪ್ರಶ್ನೆಗೆ ಉತ್ತರ ಸಿಕ್ಕೇಬಿಟ್ಟಿದೆ. ಮರುಬಳಕೆಯಾಗದ ಪ್ಲಾಸ್ಟಿಕ್ನ್ನ (Plastic Recycle) ಸಹ ಅತ್ಯಂತ ಸೂಕ್ತವಾಗಿ ಮರುಬಳಕೆ ಮಾಡುವ ಉಪಾಯವೊಂದು ನಮ್ಮ ಉಡುಪಿಯಲ್ಲೇ ಕಾರ್ಯರೂಪಕ್ಕೆ ಬಂದಿದೆ.
ಪ್ಲಾಸ್ಟಿಕ್ ಅದರಲ್ಲೂ ಮರುಬಳಕೆಯಾಗದ ಪ್ಲಾಸ್ಟಿಕ್ಗೆ ಈಗ ಮುಕ್ತಿ ಸಿಕ್ಕಿದೆ. ರಾಜ್ಯ ಸರ್ಕಾರದ ಈ ಆದೇಶದಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ತ್ಯಾಜ್ಯದ ಪ್ರಮಾಣವೂ ಇಳಿಯುತ್ತೆ. ಜೊತೆಗೆ ರಸ್ತೆಯೂ ಹೊಂಡ-ಗುಂಡಿಯಿಲ್ಲದೆ ವಾಹನ ಸವಾರರೂ ನಿಟ್ಟುಸಿರು ಬಿಡುವಂತಾಗಿದೆ.
ದೀರ್ಘಕಾಲದ ಬಳಕೆಗೆ ಬೆಸ್ಟ್!
ಉಡುಪಿಯ ಕಾಪು ತಾಲೂಕಿನ ಅಲೆವೂರು ಗ್ರಾಮ ಹಾಗೂ ಕೊಕ್ಕರ್ಣೆ ಗ್ರಾಮದಲ್ಲಿ 20 ಕಿಲೋಮೀಟರ್ ಉದ್ದಕ್ಕೂ ಪ್ಲಾಸ್ಟಿಕ್ನಿಂದ ನಿರ್ಮಿಸಿದ ರಸ್ತೆ 3 ವರ್ಷ ಕಳೆದರೂ ಘನ ವಾಹನ, ಮಳೆಗೆ ಜಗ್ಗದೇ ಇನ್ನೂ ಹೊಸದರಂತೆಯೇ ಇದೆ. ಪ್ಲಾಸ್ಟಿಕ್ ಬಳಸಿ ನಿರ್ಮಾಣ ಮಾಡುವ ರಸ್ತೆ ಬಾಳಿಕೆ ಬರುತ್ತದೆಯೇ ಎಂದು ಅನುಮಾನಿಸಿದವರಿಗೆ ದೀರ್ಘಕಾಲ ಬಳಕೆ ಬರುವುದರ ಜೊತೆಗೆ ನಿರ್ವಹಣೆ ವೆಚ್ಚ ಕೂಡಾ ಕಡಿಮೆ ಎಂಬುದಕ್ಕೆ ಈ ರಸ್ತೆ ಸಾಕ್ಷಿಯಾಗಿದೆ.
ತ್ಯಾಜ್ಯದ ಪ್ರಮಾಣ ಇಳಿಕೆ, ಹಣವೂ ಉಳಿಕೆ
ಹೌದು, ಮನೆ ಮನೆಯಿಂದ ಸಂಗ್ರಹವಾಗೋ ತ್ಯಾಜ್ಯದಲ್ಲಿ ಶೇಕಡಾ 25ರಷ್ಟು ಮರುಬಳಕೆಯಾಗದ ತ್ಯಾಜ್ಯವೇ ಹೆಚ್ಚು. ಈಗ ಇದನ್ನ ಸುಡುವ ಬದಲು ಡಾಂಬರಿಗೆ 5ರಿಂದ 10 ಶೇಕಡಾ ಪ್ಲಾಸ್ಟಿಕ್ ಸೇರಿಸಿ ರಸ್ತೆ ಮಾಡೋದ್ರಿಂದ ರಸ್ತೆಯ ಬಾಳಿಕೆ ಹೆಚ್ಚು. ಜೊತೆಗೆ ಹಣವೂ ಉಳಿತಾಯವೂ ಆಗುತ್ತೆ.ಎಲ್ಲಾ ಗ್ರಾಮದ ರಸ್ತೆ ಇದೇ ರೀತಿ ಮಾಡಿದ್ರೆ ತ್ಯಾಜ್ಯದ ಪ್ರಮಾಣವೂ ಇಳಿಕೆ ಮಾಡಬಹುದು.
ಇದನ್ನೂ ಓದಿ: Valentines Day 2023: ಪ್ರೇಮಿಗಳ ದಿನದಂದು ಉಡುಪಿಯಲ್ಲಿ ಗೋ ಆಲಿಂಗನ!
1 ಕಿಲೋ ಮೀಟರ್ ರಸ್ತೆಗೆ 1 ಕ್ವಿಂಟಲ್ ಪ್ಲಾಸ್ಟಿಕ್
ಪ್ಲಾಸ್ಟಿಕ್ನ್ನು ಒಂದು ತ್ಯಾಜ್ಯವೆಂದು ಪರಿಗಣಿಸುವ ಬದಲಿಗೆ ಅದನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಿದರೆ ಅದು ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ರಸ್ತೆ ಸಾಕ್ಷಿಯಾಗಿದೆ. 1 ಕಿಲೋ ಮೀಟರ್ ರಸ್ತೆಗೆ ಸುಮಾರು 1 ಕ್ವಿಂಟಲ್ ವ್ಯರ್ಥ ಪ್ಲಾಸ್ಟಿಕ್ ಅನ್ನು ಬಳಕೆ ಮಾಡುವ ಮೂಲಕ ಡಾಂಬರ್ ಉಳಿತಾಯ ಮಾಡಬಹುದು.
ಇದನ್ನೂ ಓದಿ: Babbu Swami: ಬಬ್ಬುಸ್ವಾಮಿ ಪವಾಡ! ಕರಾವಳಿಯಲ್ಲಿ ನೀರಿನ ಸಮಸ್ಯೆ ಪರಿಹರಿಸಿದ ದೈವ
ಪ್ಲಾಸ್ಟಿಕ್ ವಿಲೇವಾರಿ ಸಮಸ್ಯೆ ಬಹುದೊಡ್ಡ ತಲೆನೋವಾಗಿರುವ ಈ ಕಾಲದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನಡೆಸಿರುವ ಈ ಯಶಸ್ವಿ ಪ್ರಯೋಗ ರಾಜ್ಯಾದ್ಯಂತ ಮಾತ್ರವಲ್ಲದೇ ಇಡೀ ದೇಶಕ್ಕೆ ಮಾದರಿಯಾಗಿದೆ.
ವರದಿ: ಪರೀಕ್ಷಿತ್ ಶೇಟ್, ನ್ಯೂಸ್ 18 ಉಡುಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ