ಕುಂದಾಪುರ: 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರಾವಳಿ ಪ್ರತಿಭೆಯೊಬ್ಬರು ಆಯ್ಕೆಯಾಗಿದ್ದಾರೆ. ಹೌದು, ಅಸ್ಸಾಂನ ಗುವಾಹಟಿಯಲ್ಲಿ ಆರಂಭವಾಗಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಕುಂದಾಪುರದ ಆಟಗಾರ ಮುನ್ನಡೆಸಲಿದ್ದಾರೆ. ಕುಂದಾಪುರದ ಅನೂಪ್ ಡಿ' ಕೋಸ್ಟಾ ಕರ್ನಾಟಕ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಈಗಾಗಲೇ ಅಸ್ಸಾಂನಲ್ಲಿ ಆರಂಭವಾಗಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ಫೆಬ್ರವರಿ 8ರವರೆಗೂ ನಡೆಯಲಿದೆ.
ಸುದೀರ್ಘ ಅನುಭವ ಹೊಂದಿರುವ ಅನೂಪ್
ಅನೂಪ್ ಡಿ'ಕೋಸ್ಟಾ ಭಾರತೀಯ ಜೂನಿಯರ್ ತಂಡದ ನಾಯಕ, ಸೀನಿಯರ್ ತಂಡ ಆಟಗಾರನಾಗಿ ಅನುಭವ ಹೊಂದಿದ್ದಾರೆ. 13 ಬಾರಿ ಕರ್ನಾಟಕವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿ ಇದೀಗ ನಾಯಕನಾಗಿಯೂ ಆಯ್ಕೆಯಾಗಿದ್ದಾರೆ.
ಕುಂದಾಪುರದ ಅನೂಪ್ ಅವರು ಆಲ್ ರೌಂಡರ್. ಏಷ್ಯಾದ ಅತ್ಯಂತ ಎತ್ತರದ ನೆಗೆತಗಾರ ಎಂಬ ಹಿರಿಮೆಯೂ ಅವರದ್ದು. ಏಕಲವ್ಯ ಪ್ರಶಸ್ತಿಗೂ ಭಾಜನರಾಗಿರುವ ಅನೂಪ್ ಸದ್ಯ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಕೋಟೇಶ್ವರ ಬಳಿಯ ಚಂದನ್ ಆಚಾರ್ಯ, ಭಟ್ಕಳದ ನವೀದ್ ಖಾನ್ ಸಹ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದು ಕರುನಾಡನ್ನು ಗೆಲ್ಲಿಸುವ ಭರವಸೆ ಮೂಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ