ಉಡುಪಿ: ಪ್ರಚಾರದ ವಿಚಾರದಲ್ಲಿ ಪ್ರತೀ ಬಾರಿಯು ವಿಭಿನ್ನತೆ ಹೊಂದಿರೋ ತುಳುನಾಡಿನ ಕ್ಷೇತ್ರವಿದು. ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ಈ ಬಾರಿ ವಿಭಿನ್ನ ಪ್ರಯತ್ನ. ಸಿರಿ ಜಾತ್ರೆಗೆ (Udupi Nandalike Siri Jatre) ಆಹ್ವಾನದ ಜೊತೆಗೆ ಪರಿಸರ ಪ್ರೇಮದ ಪಾಠ. ಬ್ಯಾನರ್, ಫ್ಲೆಕ್ಸ್ ಬದಲು ನೀರು ಸಂಗ್ರಹಿಸೋ ಮಣ್ಣಿನ ಪಾತ್ರೆಯ ಮೂಲಕವೇ ಜಾತ್ರೆಗೆ ಆಹ್ವಾನ.
ಈ ಬಾರಿಯ ವೈಶಿಷ್ಟ್ಯ
ಯೆಸ್, ಉಡುಪಿಯ ಕಾರ್ಕಳ ತಾಲೂಕಿನ ನಂದಳಿಕೆಯ ಸಿರಿ ಜಾತ್ರೆ ಬಂತು ಅಂದ್ರೇನೆ ಎಲ್ರಿಗೂ ಒಂದು ರೀತಿಯ ಕಾತರ. ಅದ್ಯಾಕೆ ಅಂದ್ರೆ, ಅಲ್ಲಿ ತಯಾರಿಸೋ ಪ್ರಚಾರ ಸಾಮಗ್ರಿಯೇ ಭಾರೀ ಭಿನ್ನತೆ, ವೈಶಿಷ್ಟ್ಯತೆಯಿಂದ ಕೂಡಿರುತ್ತೆ.
ಈ ಹಿಂದೆ ಅಂಚೆ ಕಾರ್ಡ್, ಮಾವಿನ ಎಲೆ, ಛತ್ರಿ, ಗೋಣಿಚೀಲ ಹಾಗೂ ಮೈಲಿಗಲ್ಲು ಮತ್ತು ಮಾಸ್ಕ್, ಫೋಟೋ ಫ್ರೇಮ್ ಪ್ರಚಾರದ ಮೂಲಕ ಎಲ್ಲರ ಮನಗೆದ್ದ ನಂದಳಿಕೆ ಸಿರಿ ಜಾತ್ರೆ ಈ ಬಾರಿ ಇನ್ನಷ್ಟು ವಿಭಿನ್ನತೆ ಮೂಲಕ ಕರಾವಳಿಗರ ಮನಗೆದ್ದಿದೆ. ಜಾತ್ರೆ ಪ್ರಚಾರದ ಜೊತೆಗೆ ಪಕ್ಷಿಗಳಿಗೆ ನೀರು ನೀಡುವ ಮಣ್ಣಿನ ಪಾತ್ರೆಯನ್ನು ಅಳವಡಿಸುವ ಮೂಲಕ ಸತ್ ಚಿಂತನೆಯ ಕಾರ್ಯ ನಡೆದಿದೆ.
ಮಣ್ಣಿನ ಪಾತ್ರೆ ಜೊತೆಗೆ ಪ್ರಚಾರ
ಕರಾವಳಿಯಲ್ಲಿ ಸದ್ಯ ನಿತ್ಯ ಏರುತ್ತಿರುವ ತಾಪಮಾನದಲ್ಲಿ ಪ್ರಾಣಿ,ಪಕ್ಷಿಗಳು ಕುಡಿಯಲು ನೀರು ಸಿಗದೆ ಪರದಾಡುತ್ತಿವೆ. ಹೀಗಾಗಿ ನಂದಳಿಕೆಯ ಸಿರಿ ಜಾತ್ರೆ ಪ್ರಚಾರದ ಜೊತೆಯಲ್ಲಿ ಪಕ್ಷಿ ಸಂಕುಲಕ್ಕೆ ನೀರುಣಿಸಲು ಮುಂದಾಗಿದೆ. ಕಂಬದ ಮಾದರಿಯಲ್ಲಿರುವ ರಟ್ಟಿನ ಬಾಕ್ಸ್ನ ಮೇಲೆ ಮಣ್ಣಿನ ಪಾತ್ರೆಯಲ್ಲಿ ನೀರು ಇಟ್ಟು ಪ್ರಚಾರದ ಜತೆ ಪರಿಸರದ ಹಕ್ಕಿಗಳ ಬಾಯಾರಿಕೆ ತಣಿಸುವ ಕಾಯಕನ್ನು ನಡೆಸುತ್ತಿದೆ.
ಪ್ರಾಣಿ, ಪಕ್ಷಿ ಪ್ರೇಮ
ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳ ಪ್ರಮುಖ ಪಟ್ಟಣ ಸೇರಿದಂತೆ ವಿವಿಧ ಗ್ರಾಮ, ನಗರಗಳಿಗೂ ಈ ಪ್ರಚಾರ ಸಾಮಗ್ರಿ ತಲುಪುತ್ತವೆ. ಹಾಗಾಗಿ ಅದರಲ್ಲೇ ಪಕ್ಷಿ, ಪ್ರಾಣಿಗಳಿಗೆ ನೀರುಣಿಸುವ ಕೆಲಸವನ್ನ ನಂದಳಿಕೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಕೈಗೆತ್ತಿಕೊಂಡಿದೆ. ಜನರು ಕೂಡಾ ನೀರು ಹಾಕುವ ಮೂಲಕ ತಾವು ಪರಿಸರ ಪ್ರೇಮವನ್ನ ಮೆರೆಯುವ ಅವಕಾಶವೂ ಇದರಿಂದ ಸಿಕ್ಕಂತಾಗಿದೆ.
ಇದನ್ನೂ ಓದಿ: Udupi: ಕರಾವಳಿಯಲ್ಲಿ ಕೋತಿರಾಜ್ ಸಾಹಸ! ಬ್ರಹ್ಮಗಿರಿಯ 25 ಅಂತಸ್ತಿನ ಕಟ್ಟಡದ ಮೇಲೆ ಹಾರಿದ ಕನ್ನಡ ಧ್ವಜ
1500 ಪ್ರತಿಕೃತಿ
ಜೊತೆಗೆ ಅದರಲ್ಲೇ ನಂದಳಿಕೆ ಸಿರಿ ಜಾತ್ರೆ ಎಂದು ಬರೆದಿದ್ದು, ಎಪ್ರಿಲ್ ೦6 ಗುರುವಾರ ಎಂದು ಜಾತ್ರೆಯ ದಿನಾಂಕವನ್ನು ನಮೂದಿಸಲಾಗಿದೆ. ಸಿದ್ಧಾಪುರದಲ್ಲಿ ತಯಾರಿಸಲಾದ ಮಣ್ಣಿನ ಪಾತ್ರೆ ಹಾಗೂ ಬೆಂಗಳೂರಿನಲ್ಲಿ ತಯಾರಿಸಿ ನಂದಳಿಕೆ ಸಿರಿ ಜಾತ್ರೆಯ ಬಗ್ಗೆ ಮುದ್ರಿಸಲಾದ ಪೇಪರ್ ಬಾಕ್ಸ್ಗೆ ಒಂದಕ್ಕೆ ಸುಮಾರು 120 ರೂ.ವೆಚ್ಚವಾಗಿದ್ದು, ಒಂದೂವರೆ ಸಾವಿರದಷ್ಟು ಪ್ರತಿಕೃತಿಗಳನ್ನು ತಯಾರಿಸಲಾಗಿದೆ.
ಇದನ್ನೂ ಓದಿ: Rakshit Shetty In Udupi: ಸಿಂಪಲ್ ಸ್ಟಾರ್ ಗೋ ಪ್ರೇಮ! ರಕ್ಷಿತ್ ಶೆಟ್ಟಿಗೆ ಸಿಕ್ತು ಶಿವನ ಆಶೀರ್ವಾದ!
ಒಟ್ಟಿನಲ್ಲಿ ವಿಭಿನ್ನ ಪರಿಕಲ್ಪನೆ ಮೂಲಕ ತುಳುನಾಡಿನ ಸಿರಿ ಕ್ಷೇತ್ರ ನಂದಳಿಕೆಯ ಜಾತ್ರಾ ಮಹೋತ್ಸವವು ತನ್ನ ಪ್ರಚಾರ ಸಾಮಗ್ರಿಯಿಂದ ಭಾರೀ ಪ್ರಚಾರ ಪಡೆಯುತ್ತಿರುವುದರ ಜೊತೆಗೆ, ಸರ್ವ ಧರ್ಮದವರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ