Udupi Krishna Janmashtami: ಕೃಷ್ಣನ ನೋಡಿರೋ, ನಮ್ಮ ಮುದ್ದು ದೇವರ ನೋಡಿರೋ!

ಮುದ್ದು ಕೃಷ್ಣ, ರಾಧೆಯರು ಕಣ್ಮನ ಸೆಳೆಯುತ್ತಿದ್ದಾರೆ. ಉಡುಪಿಯಲ್ಲಂತೂ ವಿಟ್ಲ ಪಿಂಡಿ ಉತ್ಸವದ ಸಂಭ್ರಮ ಮನೆಮಾಡುತ್ತಿದೆ.

ಶ್ರೀಕೃಷ್ಣ ನೋಡಿರೋ..

"ಶ್ರೀಕೃಷ್ಣ ನೋಡಿರೋ.."

  • Share this:

    ಉಡುಪಿ: ನಾಡಿನಾದ್ಯಂತ ಕಡೆಗೋಲು ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮಪೊಡವಿಗೊಡೆಯನಿಗೆ ಸಂಭ್ರಮದ ಪೂಜೆ ಪುನಸ್ಕಾರಅಲ್ಲಲ್ಲಿ ಮುದ್ದು ಕೃಷ್ಣರು, ಕಣ್ಮನ ಸೆಳೆಯೋ ರಾಧೆಯರುಒಟ್ಟಾರೆ ಭೂಮಂಡಲವೇ ನಂದ ಗೋಕುಲದಂತೆ ಕಂಗೊಳಿಸ್ತಾ ಇದೆಶ್ರೀಕೃಷ್ಣ ಪರಮಾತ್ಮನಿಗೆ ನಾಡಿನ ಎಲ್ಲ ಕಡೆಯೂ ವಿಶೇಷ ಪೂಜೆ ಸಲ್ಲಿಸುತ್ತಿರುವ ಭಕ್ತರು ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಕೊರೊನಾ ಕಾರಣದಿಂದ ಎರಡು ವರ್ಷ ಕಳೆಗುಂದಿದ ಹಬ್ಬದ ವಾತಾವರಣ ಮತ್ತೆ ಭಕ್ತರು ಮರಳಿ ಪಡೆದಿದ್ದಾರೆ‌. ಕೃಷ್ಣಾಷ್ಟಮಿ ಹಿನ್ನೆಲೆ ವ್ಯಾಪಾರ, ವಹಿವಾಟುಗಳು ಜೋರಾಗಿವೆ. ಕೃಷ್ಣ ದೇವರ ಅಲಂಕಾರವಂತೂ ಭಕ್ತರಲ್ಲಿ ಧನಾತ್ಮಕ ಪ್ರಭಾವ ಬೀರ್ತಿದೆ.


    ವಿಟ್ಲ ಪಿಂಡಿ ಉತ್ಸವಕ್ಕೆ ಕ್ಷಣಗಣನೆ
    ಅಷ್ಟಮಿ ಅಂದ ತಕ್ಷಣ ನೆನಪಿಗೆ ಬರೋದೆ ಪೊಡವಿಗೊಡೆಯನ ಊರಾದ ಉಡುಪಿಇಲ್ಲೂ ಕಳೆದ ಎರಡು ದಿನಗಳಿಂದ ಹಬ್ಬದ ವಾತಾವರಣ ಕಂಡು ಬರ್ತಿದೆ


    ಇದನ್ನೂ ಓದಿ: Havyaka Food Recipes: ಭಾರೀ ರುಚಿರುಚಿ ಹವ್ಯಕರ ಹಲಸಿನ ಬುಡ್ನಾ ! ಇಲ್ಲಿದೆ ರೆಸಿಪಿ

    ಇಂದು ದಿನವಿಡೀ ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಕೆ ಆಗಲಿದ್ದು, ನಾಳೆ ಸಂಭ್ರಮದ ವಿಟ್ಲ ಪಿಂಡಿ ಉತ್ಸವ ನಡೆಯಲಿದೆ. ಇದನ್ನ ಕಣ್ತುಂಬಿಕೊಳ್ಳಲೆಂದೇ ಸಹಸ್ರಾರು ಭಕ್ತರು ಉಡುಪಿ ಕೃಷ್ಣ ಮಠದ ರಥಬೀದಿಗೆ ಆಗಮಿಸಲಿದ್ದಾರೆ.


    ಇದನ್ನೂ ಓದಿ: Uttara Kannada: ಜೀವಂತ ಹಾವಿಗೆ ಪೂಜೆ! ಇವರ ಹೆಂಡತಿ, ಮಕ್ಕಳಿಗೂ ಹಾವಂದ್ರೆ ಭಯವಿಲ್ಲ!

    ಒಟ್ಟಿನಲ್ಲಿ ಕೊರೊನಾ ಬಳಿಕ ಇದೀದ ಮತ್ತೆ ಕೃಷ್ಣಾಷ್ಟಮಿ ಸಂಭ್ರಮವನ್ನು ಬಾರಿ ಆಚರಿಸಲು ಮುಕ್ತ ವಾತಾವರಣವನ್ನ ಭಗವಂತ ಕಲ್ಪಿಸಿಕೊಟ್ಟಿದ್ದಾನೆ. ಹಾಗೆಯೇ ಇಡೀ ಭೂ ಮಂಡಲವೂ ನಂದಗೋಕುಲದಂತೆ ಕಂಗೊಳಿಸ್ತಿದೆ.

    Published by:guruganesh bhat
    First published: