ಉಡುಪಿ: ಬಾನೆತ್ತರ ಬ್ಯುಲ್ಡಿಂಗ್, ಪಟ್ ಪಟಾಂತ ಕಟ್ಟಡ ಏರ್ತಿರೋ ಸಾಹಸಿ, ಈ ವ್ಯಕ್ತಿಯ ಸಾಹಸಕ್ಕೆ ಬೆಕ್ಕಸ ಬೆರಗಾಗಿ ನೋಡ್ತಿರೋ ನೂರಾರು ಜನರು. ಇದು ಕರಾವಳಿಯಲ್ಲಿ ಜ್ಯೋತಿರಾಜ್ (Jyoti Raj) ಅಲಿಯಾಸ್ ಕೋತಿರಾಜ್ (Koti Raj) ನಡೆಸಿದ ಸಾಹಸ!
ಮಂಕಿಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಉಡುಪಿಯ ಬ್ರಹ್ಮಗಿರಿಯಲ್ಲಿರುವ 25 ಅಂತಸ್ತುಗಳ ವಸತಿ ಸಮುಚ್ಚಯವನ್ನು ಹತ್ತುವುದರ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ.
ಕನ್ನಡ ಬಾವುಟ ಹಾರಿಸಿದ ಜ್ಯೋತಿರಾಜ್
ಉಡುಪಿ ಬ್ರಹ್ಮಗಿರಿ ಸಮೀಪದ ವುಡ್ಸ್ವಿಲ್ಲಾ ವಸತಿ ಸಮುಚ್ಚಯದ ಮಹಡಿಯನ್ನು ಕೆಲವೇ ನಿಮಿಷಗಳಲ್ಲಿ ತಲುಪಿ ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಕೋತಿರಾಜ್ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: Udupi Boat Race: ಬೋಟ್ ರೇಸ್ ನೋಡೋಕೆ ಕೇರಳಕ್ಕೇ ಹೋಗ್ಬೇಕಂತಿಲ್ಲ! ಉಡುಪಿಯಲ್ಲಿ ಭರ್ಜರಿ ಚಾಂಪಿಯನ್ಶಿಪ್
ಜೋಗದಿಂದ ಬಿದ್ದಿದ್ದ ಸಾಹಸಿ
ಕಳೆದ ಎರಡು ವರ್ಷಗಳ ಹಿಂದೆ ಜೋಗದಲ್ಲಿ ಬಿದ್ದು ಬೆನ್ನುಮೂಳೆ ನೋವು ಮಾಡಿಕೊಂಡಿದ್ದ ಕೋತಿರಾಜು ಬಳಿಕ ಒಂದೂವರೆ ವರ್ಷ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಸುಮಾರು 130 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಮತ್ತೆ ವ್ಯಾಯಾಮ ಮಾಡಿ ದೇಹದ ತೂಕ ತಗ್ಗಿಸಿ ಕೋತಿ ರಾಜು ತಮ್ಮ ಸಾಹಸ ಕಾರ್ಯವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: Transgenders Canteen In Udupi: ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು, ಈ ವಿಶೇಷ ಕ್ಯಾಂಟೀನ್‌ಗೆ ಬೇಕು ಜನ ಬೆಂಬಲ
ಕ್ಲೈಂಬಿಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ
ಕ್ಲೈಂಬಿಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿಯನ್ನು ಹೊಂದಿದ್ದಾರೆ. "ದೇಶದೆಲ್ಲೆಡೆ ಈ ರೀತಿ ಬೆಟ್ಟ, ಗುಡ್ಡ ಹತ್ತಿ ಕನ್ನಡ ಬಾವುಟ ಹಾರಿಸುತ್ತೇನೆ. ವಿದೇಶದಲ್ಲೂ ಸಾಹಸ ಮಾಡಿ ರಾಷ್ಟ್ರ ಧ್ವಜ ಹಾರಿಸುತ್ತೇನೆ" ಎಂದು ಕೋತಿರಾಜ್ ಅವರು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ವರದಿ: ಪರೀಕ್ಷಿತ್ ಶೇಟ್, ನ್ಯೂಸ್ 18 ಉಡುಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ